ಏ ಕೆ ಪಿ ಎ ಫೋಟೋ ಫೆಸ್ಟ್ ವಾಹನ ಪರ್ಯಟನೆ, ಕುಂಬಳೆಯಲ್ಲಿ ಸಮಾರೋಪ

ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ ರಾಜ್ಯ ಸಮಿತಿ ನೇತೃತ್ವದಲ್ಲಿ 23 24 25 ರಂದು ತ್ರಿಶೂರ್ ಅಂಗಮಾಲಿಯಲ್ಲಿ ನಡೆಯುವ ಕಾರ್ಯಕ್ರಮದ ಪ್ರಚಾರಾರ್ಥ , ರಾಜ್ಯ ದಿಂದ ಹೊರಟ ವಾಹನ ಪ್ರಚಾರಕ್ಕೆ ಏ ಕೆ ಪಿ ಎ ಕುಂಬಳೆ ವಲಯ ಸಮಿತಿ ವತಿಯಿಂದ ಕುಂಬಳೆಯಲ್ಲಿ ಸ್ವಾಗತ ನೀಡಲಾಯಿತು. ಆದಿತ್ಯವಾರ ಕಾಸರಗೋಡು ಜಿಲ್ಲಾ ಪರ್ಯಟನೆ ನಂತರ ಕುಂಬಳೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ಎಕೆಪಿಎ ಫೋಟೋಗ್ರಾಫಿ ಕ್ಲಬ್ ಸಂಚಾಲಕ ಗೋವಿಂದ ನ್ ಚೆಂಗರ ಕಾಡು ಉದ್ಘಾಟಿಸಿದರು. ಏ ಕೆ ಪಿ ಎ ರಾಜ್ಯ ಅಧ್ಯಕ್ಷ ಗಿರೀಶ್ ಪಟ್ಟಾಂಬಿ ಫೇಸ್ಬುಕ್ ಲೈವ್ ಮೂಲಕ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಕಾರ್ಯದರ್ಶಿ ಉಣ್ಣಿ ಕೋವೂಡ್, ಜಿಲ್ಲಾಧ್ಯಕ್ಷ ಎನ್ ಎ ಭರತನ್, ರಾಜ್ಯ ಸದಸ್ಯ ಹರೀಶ್ ಪಾಲಕ್ಕುನ್ನು, ಜಿಲ್ಲಾ ಕಾರ್ಯದರ್ಶಿ ವಾಸು ಕಾಸರಗೋಡು, ಜಿಲ್ಲಾ ಪದಾಧಿಕಾರಿ ಶರೀಫ್ , ಜಿಲ್ಲಾ ಉಪಾಧ್ಯಕ್ಷ ವಿಜಯನ್ ಕೆ ನಾಯರ್, ಮತ್ತಿತರರು ಮಾತನಾಡಿದರು, ಕುಂಬಳೆ ವಲಯ ಅಧ್ಯಕ್ಷ ಸುನಿಲ್, ಅಧ್ಯಕ್ಷತೆವಹಿಸಿದ್ದರು ಕಾರ್ಯದರ್ಶಿ ಸುರೇಶ ಆಚಾರ್ಯ ಸ್ವಾಗತಿಸಿದರು ,ಪಿ ಆರ್ ಒ ಉದಯ ಕಂಬಾರ್ ವಂದಿಸಿದರು. ಉಪ್ಪಳ ಕುಂಬಳೆ ಬದಿಯಡ್ಕ ಯೂನಿಟ್ ಗಳ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.

Leave a Reply

error: Content is protected !!
Scroll to Top
%d bloggers like this: