ಕಣ್ಣಲ್ಲೇ ಕ್ಯಾರಂ ಪಾನ್ ನುಂಗಿ, ಸ್ಟೈಲ್ ಬೆರೆಸಿ ಆಡುವ ಕ್ಯಾರಂ ಕಿಂಗ್ ಈತನೇ ನೋಡಿ !- ಎಂಜಾಯ್ ದ ವೀಡಿಯೋ !!

0 15

ಆತನ ಸ್ಟೈಲೇ ಬೇರೆ. ಆತ ಇವತ್ತಿನ ಇಂಟರ್ನೆಟ್ ಸೆನ್ಸೇಷನ್. ಇಂಟರ್ ನೆಟ್ ನಲ್ಲಿ ತನ್ನ ಸ್ಟೈಲ್ ನಿಂದ ಮತ್ತು ತನ್ನ ಕ್ಯಾರಂ ಕಲೆಯ ಚಮತ್ಕಾರದಿಂದ ಆತ ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂ ನಲ್ಲಿ ಧೂಳೆಬ್ಬಿಸುತ್ತಿದ್ದಾನೆ ಕೇರಮ್ ಕಿಂಗ್ ಎಂದೇ ಹೆಸರುವಾಸಿಯಾಗಿರುವ ಮಿಸ್ಟರ್ ಹಾಜಿ ಅಲಿ ಅಗಾರಿಯ !

ಉದ್ದಕ್ಕೆ ಬೆಳೆದ ಆದರೆ ತಿದ್ದಿ ತೀಡಿದ ಕೂದಲುಗಳು ಬಣ್ಣ ಬಣ್ಣ ಬೆರೆಸಿಕೊಂಡು ನಿಂತಿವೆ. ಬಡಕಲು ದೇಹದ ಮೇಲೆ ವಿಶೇಷ ಡಿಸೈನಿನ ಉಡುಗೆ-ತೊಡುಗೆ. ಕೋಲು ಮುಖಕ್ಕೆ ಒಪ್ಪುವ ಮೀಸೆ ಗಡ್ಡ. ಕ್ಯಾರಂ ಪಾನ್ ನಡೆಸುವ ಮೊದಲು ಪಾನ್ ಗಳಿಗೆ ಒಂದು ಸಣ್ಣ ಟ್ರೈನಿಂಗ್ ನೀಡಿ ಜಾದೂ ಮಾಡಿದಂತೆ ಬೋರ್ಡಿನ ಮೇಲೆ ಆತ ಕೈ ಆಡಿಸ್ತಾನೆ. ಪಾನ್ ನ ಸ್ಟ್ರೈಕರ್ ಕುದುರೆ ಓಡುವ ದಿಕ್ಕು, ಬಳಸಿ ಬರುವ ಹಾದಿ, ಸ್ಟ್ರೈಕ್ ಮಾಡಲು ಬೇಕಾದ ಅಗತ್ಯ ಶಕ್ತಿಯ ಕ್ಯಾಲ್ಕುಲೇಶನ್ ಎಲ್ಲವೂ ಆತನ ಮನದಲ್ಲಿ ಬ್ಲೂ ಪ್ರಿಂಟ್ ಆಗಿ ರೆಡಿ.

ಕ್ಯಾರಂ ನ ಪಾನುಗಳು ಆತನ ಕಣ್ಣ ಇಶಾರೆಗೆ ಥಕ ಥಕ ಕುಣಿಯುತ್ತವೆ. ಆತನ ಒಂದು ಬೆರಳ ಸ್ಪರ್ಶಕ್ಕೆ ಕಾದು ಕೂತಂತಿರುವ ಬಿಳಿಯ ಪಾನು ಆತನ ಬೆರಳ ಸಣ್ಣ ಏಟಿಗೇ ತತ್ತರಿಸಿ ಓಡುತ್ತದೆ. ಕ್ಯಾರಂ ಬೋರ್ಡಿನ ಊರಗಲಕ್ಕೆ ದಿಕ್ಕು ತಪ್ಪಿದ ಕುದುರೆಯಂತೆ ಗಿರಗಿಟ್ಲೆ ಹೊಡಿತಾನೆ ಇರುತ್ತೆ ಆ ಸ್ಟ್ರೈಕರ್. ಅಲ್ಲಿಗೆ ತಾಗಿ, ಇಲ್ಲಿಂದ ರಿಬೌಂಡ್ ಆಗಿ, ದಾರಿಯ ಮಧ್ಯೆ ರಿಲೆ ಆಟಕ್ಕೊಸ್ಕರ ಕಾದಿರುವ ಒಬ್ಬಾತನ ಪಕ್ಕೆಗೆ ಮೆಲ್ಲಗೆ ಮೆಲ್ಲಗೆ ಟಚ್ ಕೊಟ್ಟ ಕೂಡಲೇ ಆತ ಓಡುತ್ತಾನೆ ಮತ್ತು ಗುರಿ ಎಂದೂ ತಪ್ಪುವುದಿಲ್ಲ. ಆ ರೀತಿ ಸ್ಟೈಲ್ ಬೆರೆಸಿ ಎಕ್ಯುರೇಟ್ ಆಗಿ, ಗನ್ ಶೂಟ್ ಹೊಡೆದಂತೆ ಕೇರಂ ಆಡುವವನ ಹೆಸರು ಹಾಜಿ ಅಲಿ ಅಗಾರಿಯ !

ಹಾಜಿ ಅಲಿಗೆ ಯಾವುದೋ ಬ್ಯುಸಿನೆಸ್ ಮಾಡುತ್ತಿದ್ದ. ಆದ್ರೆ ಆತನಿಗೆ ಏನಾದರಾಗಲಿ ಫೇಮಸ್ ಆಗಬೇಕೆಂದು ಆಸೆಯಿತ್ತು. ಅದಕ್ಕಾಗಿ ಏನಾದರೂ ಮಾಡಬೇಕೆಂದು ಆತ ಇನ್ಸ್ಟಾದಲ್ಲಿ ಒಂದಷ್ಟು ಪ್ರಯತ್ನಿಸಿದ. ಆದರೆ ಅದು ವರ್ಕ್ ಔಟ್ ಆಗಲಿಲ್ಲ. ಹಾಗಾಗಿ ಬೇಜಾರ್ ಆಗಿ ಇನ್ಸ್ಟಾಗ್ರಾಮ್ ಅನ್ ಇನ್ಸ್ಟಾಲ್ ಮಾಡಿ 6 ತಿಂಗಳು ಸುಮ್ಮನಿದ್ದ. ಅತ್ತ ಆತನ ಅಮ್ಮ ಹೋಗೋ ಏನಾದ್ರೂ ದುಡ್ಡುಮಾಡು ಎಂದು ಬೈಯುತ್ತಿದ್ದಳು. ಆದರೆ ಆತನಿಗೆ ಸಾಧನೆ ಮಾಡುವ ಮನಸ್ಸು. ಆಗ ಆತನ ಮನಸ್ಸಿಗೆ ಐಡಿಯಾ ಒಂದು ಸ್ಟ್ರೈಕ್ ಆಗಿತ್ತು. ‘ಹೇಗೂ ನಾನು ಚೆನ್ನಾಗಿ ಕೇರಮ್ ಆಡ್ತಿದ್ದೇನೆ ಅಲ್ವಾ, ಅದನ್ನೇ ವೀಡಿಯೋ ಮಾಡಿ ಹಾಕಿದ್ರೆ ಹೇಗೆ ‘ ಎಂಬ ಯೋಚನೆ ಬಂದಿತ್ತು. ಹಾಗೆ ತನಗೆ ಗೊತ್ತಿದ್ದ ಕೇರಂ ಟ್ರಿಕ್ ಜತೆ ಸ್ಟೈಲ್ ಬೆರೆಸಿ ಬಿಟ್ಟ ನೋಡಿ. ಅಲ್ಲಿಂದ ಇಲ್ಲಿಯವರೆಗೆ ಆತ ಟ್ರೆಂಡಿಂಗ್ ನಲ್ಲಿದ್ದಾನೆ. ಆತನಿಗೆ ಬೇಕಾಗಿದ್ದ ಫೇಮ್ ಮತ್ತು ಆತನ ಅಮ್ಮನಿಗೆ ಬೇಕಿದ್ದ ದುಡ್ಡು ಎರಡೂ ಒಟ್ಟಿಗೇ ದೊರೆಯಿತು.

ಇವತ್ತು ಆತ ಕ್ಯಾರಂ ಕಿಂಗ್ ಆಗಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾನೆ. ಸಾಕಷ್ಟು ಫಾಲೋವರ್ಸ್ ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿರುವುದರಿಂದ, ಸಾಕಷ್ಟು ಹಣ ಸಂಪಾದನೆ ಮಾಡುತ್ತಿದ್ದಾನೆ. ಕೇರಮ್ ಕಿಂಗ್ ಈಗ ದಿನಕ್ಕೆ 1 ಲಕ್ಷ ಸಂಪಾದಿಸ್ತಿದ್ದಾನೆ. ಆತನ ಒಂದು ವೀಡಿಯೋ 20,000 ರೂ. ಗಳಿಸಿಕೊಡ್ತಿದೆ. ಇಂತಹ ಅದೆಷ್ಟೋ ಚಮತ್ಕಾರಿಗಳು ನಮ್ಮ ನಡುವೆಯೂ ಇದ್ದಾರೆ, ಆದರೆ ಅವರ ಪ್ರತಿಭೆ ಹೊರಬರುವಲ್ಲಿ ವಿಫಲವಾಗಿದೆ ಅಷ್ಟೇ. ವಿಶೇಷವಾಗಿ ಈಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ಇಂತಹ ಚಮತ್ಕಾರಗಳನ್ನು ಹೊರತರಲು ಬೆಸ್ಟ್ ವೇದಿಕೆ ಎಂದೇ ಹೇಳಬಹುದು. ನಮ್ಮ ಕ್ಯಾರಮ್ ಕಿಂಗ್ ಕೂಡ ಈ ವೇದಿಕೆಯನ್ನು ಬಹಳ ಚೆನ್ನಾಗಿ ಬಳಸಿಕೊಂಡು ಇದೀಗ ರಾಜನಾಗಿ ದರ್ಬಾರ್ ನಡೆಸುತ್ತಿದ್ದಾನೆ.

Leave A Reply