ವಿಟ್ಲ: ಮತ್ತೆ ಸುದ್ದಿಯಾದ “ಲವ್ ಜಿಹಾದ್”! ಹಿಂದೂ ಎನ್ನುತ್ತಾ ಯುವತಿಯೊಂದಿಗೆ ವಾಸವಿದ್ದ ಯುವಕನ ನಿಜಬಣ್ಣ ಬಯಲು!!

ವಿಟ್ಲ: ಮತ್ತೆ ಹಿಂದೂ ಮೋಸ ಹೋಗಿದ್ದಾನೆ. ಹಿಂದೂ ಯುವತಿಯೊರ್ವಳನ್ನು ತಾನು ಹಿಂದೂ ಎಂದು ಪ್ರೀತಿಸಿ ಸಂಸಾರ ಶುರುಮಾಡಿದ್ದ ಮಾರಾ ಮೋಸಕ್ಕೆ ಹುಡುಗಿ ಒಬ್ಬಳ ಜೀವನ ಮತ್ತೆ ಬರ್ಬಾದ್ ಆಗಿದೆ.

ಇಲ್ಲೇ ವಿಟ್ಲ ಸಮೀಪದ ಪಳಿಕೆ ಎಂಬಲ್ಲಿ ಬಾಡಿಗೆ ಮನೆ ಪಡೆದು, ಒಂದು ಸಂಸಾರ ಹೂಡಿತ್ತು. ತನ್ನ ಹೆಸರು ವಿಜಯ್. ತಾನು ಹಿಂದೂ ಎನ್ನುತ್ತಾ ಎಲ್ಲರನ್ನೂ ನಂಬಿಸಿ ಆತ ಮತ್ತು ಆಕೆ ಕಳೆದ ಒಂದು ವಾರದಿಂದ ಅಲ್ಲಿ ವಾಸವಿದ್ದರು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಕಳೆದ ಕೆಲ ಸಮಯಗಳಿಂದ ಪಳಿಕೆ ಎಂಬಲ್ಲಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಜೋಡಿಯು ಭಿನ್ನಕೋಮಿಗೆ ಸೇರಿದ್ದಾರೆ ಎನ್ನುವ ಗುಸುಗುಸು ಎಲ್ಲೆಡೆ ಹಬ್ಬಿತ್ತು. ಈ ವಿಚಾರವನ್ನು ಹಿಂದೂ ಸಂಘಟನೆಗಳು ಪೊಲೀಸರ ಗಮನಕ್ಕೂ ತಂದಿದ್ದರು ಎನ್ನಲಾಗಿದೆ. ಯುವಕ ವಿಟ್ಲದಲ್ಲಿ ಲಾರಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು,ತನ್ನ ಧರ್ಮ ಹಿಂದೂ ಎನ್ನುತ್ತಾ ಎಲ್ಲರನ್ನೂ ನಂಬಿಸಿದ್ದ.

ಕೈಗೊಂದು ಕೆಂಪು ದಾರ ಕಟ್ಟಿಕೊಂಡು ಸುತ್ತಾಡುತ್ತಿದ್ದ ಬಗ್ಗೆ ಹರಡಿದ್ದ ವದಂತಿಯಿಂದಾಗಿ ವಿಟ್ಲ ಪೊಲೀಸರು ಜೋಡಿಯನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದರು. ವಿಚಾರಣೆಯ ವೇಳೆ ಯುವಕ ಮುಸ್ಲಿಂ ಧರ್ಮಕ್ಕೆ ಸೇರಿದವನೆಂದು, ಆತನ ಹೆಸರು ಹುಸೈನ್ ಎಂಬುವುದು ತಿಳಿಯುತ್ತದೆ. ತನ್ನ ಧರ್ಮ ವನ್ನು ಮರೆ ಮಾಚಿ ತಾನು ಹಿಂದೂ ಎನ್ನುತ್ತಾ ಯುವತಿಯ ಬಾಳಲ್ಲಿ ಆತ ಆಡಿದ್ದಾನೆ ಹುಸೈನ್.

ಯುವತಿಯನ್ನು ಲವ್ ಜಿಹಾದ್ ಬಲೆಗೆ ಕೆಡವಿ ಆಕೆಯೊಂದಿಗೆ ಸಂಸಾರ ನಡೆಸುತ್ತಿದ್ದ ಆತನ ನಿಜಬಣ್ಣ ಬಯಲಾಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: