3 ರೂಪಾಯಿಗೆ ಸಾವಿರಾರು ರೂ ದಂಡ ನೀಡಿದ ಸ್ವಿಗ್ಗಿ

ಸ್ವಿಗ್ಗಿ ಮತ್ತು ಝೊಮ್ಯಾಟೋ ಮೂಲಕ ತಾವು ಬಯಸಿದ ರೆಸ್ಟೋರೆಂಟ್‌ನಲ್ಲಿ ತಯಾರಿಸಿದ ತಮ್ಮಿಷ್ಟರ ಊಟವನ್ನು ಜನರು ಆರ್ಡರ್ ಮಾಡಿ ತರಿಸಿಕೊಳ್ಳುತ್ತಾರೆ. ಇದರಿಂದ ಅದೆಷ್ಟೋ ಸಾವಿರ ಸಾವಿರ ಮಂದಿಗೆ ಉಪಕಾರವಾಗಿದೆ. ಆದರೆ ಈಗ ಅತಿಆಸೆಯಿಂದ ಕಂಪನಿ ಸಾವಿರಾರು ರೂಪಾಯಿ ದಂಡ ಪಾವತಿಸಬೇಕಾಗಿದೆ.

3 ರೂಪಾಯಿ ಆಸೆಗೆ ಬಿದ್ದ ಸ್ವಿಗ್ಗಿ ಈಗ ಸಾವಿರಾರು ರೂಪಾಯಿ ದಂಡ ನೀಡಬೇಕಾಗಿದೆ.  ಗ್ರಾಹಕನಿಂದ 3 ರೂಪಾಯಿ ಹೆಚ್ಚುವರಿ ಆಗಿ ಸ್ವೀಕರಿಸಿದವರಿಗೆ 2,000 ರೂಪಾಯಿ ದಂಡ ವಿಧಿಸಲಾಗಿದೆ.

ಹೈದ್ರಾಬಾದ್ ಮೂಲದ ವಿದ್ಯಾರ್ಥಿ ಮುರುಳಿ ಕುಮಾರ್ ರೆಡ್ಡಿ ಎನ್ನುವವರು ಇತ್ತೀಚಿಗೆ ತಮ್ಮಿಷ್ಟದ ರೆಸ್ಟೋರೆಂಟ್ ಮೂಲಕ ಬಿರಿಯಾನಿ ಖರೀದಿಸುವುದಕ್ಕೆ ಸ್ವಿಗ್ಗಿಯಲ್ಲಿ ಆರ್ಡರ್ ಕೊಟ್ಟಿದ್ದರು. 200 ರೂಪಾಯಿ ಬಿರಿಯಾನಿಗೆ ಕೂಪನ್ ಆಫರ್ ಪಡೆದುಕೊಂಡಿದ್ದ ವಿದ್ಯಾರ್ಥಿಯು ಒಂದು ಪ್ಲೇಟ್ ಬಿರಿಯಾನಿಗಾಗಿ 140 ರೂಪಾಯಿ ಹಣ ಪಾವತಿ ಮಾಡಿದ್ದರು.

ಸ್ವಿಗ್ಗಿ ಅಪ್ಲಿಕೇಷನ್ ತನ್ನ ಗ್ರಾಹಕನಿಂದ ಹೆಚ್ಚುವರಿ ತೆರಿಗೆಯನ್ನು ಪಡೆದುಕೊಂಡಿತು. ಸರಕು ಸೇವೆ ತೆರಿಗೆ(ಜಿಎಸ್‌ಟಿ) ಹೆಸರಿನಲ್ಲಿ ಹೆಚ್ಚುವರಿ ಆಗಿ 3 ರೂಪಾಯಿ ಅನ್ನು ಸ್ವೀಕರಿಸಲಾಯಿತು. ಅಂದರೆ 7 ರೂಪಾಯಿ ತೆರಿಗೆಯ ಬದಲಿಗೆ 10 ರೂಪಾಯಿ ಅನ್ನು ಗ್ರಾಹಕ ಮರುಳಿ ಕುಮಾರ್ ರೆಡ್ಡಿಯಿಂದ ಪಡೆದುಕೊಳ್ಳಲಾಗಿತ್ತು.

7ರ ಬದಲಿಗೆ 10 ರೂಪಾಯಿ ಪಡೆದುಕೊಂಡ ಸ್ವಿಗ್ಗಿ ಮಶೀರಾಬಾದ್ ಪ್ರದೇಶದಲ್ಲಿರುವ ಬಿರಿಯಾನಿ ಹೌಸ್ ಮತ್ತು ಸ್ವಿಗ್ಗಿ ಡೆಲಿವರಿ ಅಪ್ಲಿಕೇಷನ್ ವಿರುದ್ಧ ಮುರುಳಿ ಕುಮಾರ್ ರೆಡ್ಡಿ ದೂರು ನೀಡಿದರು. ವಿದ್ಯಾರ್ಥಿಯು ನೀಡಿದ ದೂರನ್ನು ಸ್ವೀಕರಿಸಿದ ಹೈದರಾಬಾದ್ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ-3ವು ರೆಸ್ಟೋರೆಂಟ್ ಮತ್ತು ಸ್ವಿಗ್ಗಿಗೆ ದಂಡ ವಿಧಿಸಿದೆ.

Leave A Reply

Your email address will not be published.