ಸೌದಿಅರೇಬಿಯಾದಿಂದ ಕೋಟ್ಯಾಂತರ ಭಾರತೀಯರ ಮೇಲಿದ್ದ ನಿಷೇಧ ಹಿಂತೆಗೆತ!!!

ಕೊರೊನಾ ತಡೆಯುವ ಸಲುವಾಗಿ, ಭಾರತ, ಟರ್ಕಿ, ಇಥಿಯೋಪಿಯಾ, ವಿಯೆಟ್ನಾಂ ಸೇರಿದಂತೆ 16 ದೇಶಗಳ ಪ್ರಜೆಗಳ ಮೇಲೆ ಸೌದಿ ಪ್ರವೇಶಿಸದಂತೆ ಹೇರಲಾಗಿದ್ದ ನಿಷೇಧವನ್ನು ಸೌದಿ ಅರೇಬಿಯಾ ಹಿಂಪಡೆದಿದೆ.

ಭಾರತ ಸೇರಿದಂತೆ 16 ದೇಶಗಳಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಇದ್ದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ತನ್ನ ನಾಗರಿಕರ ಪ್ರಯಾಣವನ್ನು ನಿಷೇಧಿಸಿತ್ತು. ಸೌದಿ ಅರೇಬಿಯಾದ ಪಾಸ್‌ಪೋರ್ಟ್‌ಗಳ ಜನರಲ್ ಡೈರೆಕ್ಟರೇಟ್ ತನ್ನ ಆದೇಶದಲ್ಲಿ ಈ ಪ್ರಯಾಣ ನಿಷೇಧವನ್ನು ವಿಧಿಸಿತ್ತು. ಭಾರತವನ್ನು ಹೊರತುಪಡಿಸಿ, ಈ ದೇಶಗಳಲ್ಲಿ ಇರಾನ್, ಟರ್ಕಿ, ಯೆಮೆನ್, ವಿಯೆಟ್ನಾಂ, ಕಾಂಗೋ, ಇಥಿಯೋಪಿಯಾ, ವೆನೆಜುವೆಲಾ ಇತ್ಯಾದಿ ಸೇರಿತ್ತು.

ಈ ಕೊರೊನಾ ಪ್ರಸರಣವನ್ನು ತಡೆಯುವ ಉದ್ದೇಶದಿಂದ ಜೂ. 20ರಿಂದ ಜಾರಿಗೆ ಬರುವಂತೆ ನಿಷೇಧ ಹೇರಲಾಗಿತ್ತು. ಈಗ, ಕೊರೊನಾ ತಡೆಗೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ನಿರ್ಬಂಧವನ್ನು ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

Leave A Reply

Your email address will not be published.