ಮೀನುಗಾರರ ಬಲೆಗೆ ಬಿತ್ತು ವಿಶ್ವದ ಅತಿದೊಡ್ಡ ಸಿಹಿ ನೀರಿನ ಮೀನು !! | ಈ ಮೀನು ಎಷ್ಟು ಕೆಜಿ ಇತ್ತು ಗೊತ್ತಾ ??

ವಿಶ್ವದ ಅತಿದೊಡ್ಡ ಸಿಹಿನೀರಿನ ಮೀನು ಕಾಂಬೋಡಿಯಾದ ಮೆಕಾಂಗ್ ನದಿಯಲ್ಲಿ ಮೀನುಗಾರರಿಗೆ ಸಿಕ್ಕಿದ್ದು, ಇದರ ಗಾತ್ರವನ್ನು ನೋಡಿ ಅವರೇ ಆಶ್ಚರ್ಯಚಕಿತರಾದ ಘಟನೆ ನಡೆದಿದೆ.

ಇದು ದೊಡ್ಡ ಸ್ಟಿಂಗ್ರೇ ಮೀನಾಗಿದ್ದು, ಇದರ ತೂಕ ಸುಮಾರು 300 ಕೆಜಿ, ಉದ್ದ 13 ಅಡಿ ಎಂದು ಹೇಳಲಾಗುತ್ತದೆ. ಸಂಶೋಧಕರ ಪ್ರಕಾರ, ಈ ಮೀನು ವಿಶ್ವದಲ್ಲೇ ದಾಖಲಾದ ಅತಿದೊಡ್ಡ ಸಿಹಿನೀರಿನ ಮೀನಾಗಿದೆ. ಈ ದೈತ್ಯ 4 ಮೀಟರ್ ಉದ್ದದ ಸ್ಟಿಂಗ್ರೇ ಮೀನನ್ನು ಮತ್ತೆ ನದಿಗೆ ಬಿಡಲಾಗಿದೆ.

ಸ್ಟಂಗ್ ಟ್ರಾಂಗ್ ಎಂಬ ಸ್ಥಳದ ಬಳಿ ಸ್ಥಳೀಯ ಮೀನುಗಾರರೊಬ್ಬರು ಈ ಮೀನನ್ನು ಜೂನ್ 13 ರಂದು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಮೀನುಗಾರರು ಈ ಮೀನನ್ನು ಹಿಡಿದಾಗ, ಅದರ ಗಾತ್ರವನ್ನು ನೋಡಿ ಅವರು ಆಶ್ಚರ್ಯಚಕಿತರಾಗಿ, ಈ ಬಗ್ಗೆ ವಿಜ್ಞಾನಿಗಳಿಗೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

293 ಕೆಜಿ ತೂಕದ ದೈತ್ಯ ಕ್ಯಾಟ್‌ಫಿಶ್ ಹೆಸರಿನಲ್ಲಿ ಈ ಹಿಂದೆ ಅತಿದೊಡ್ಡ ಸಿಹಿನೀರಿನ ಮೀನುಗಳ ದಾಖಲೆ ಇತ್ತು ಎಂದು ವಿಜ್ಞಾನಿಗಳು ಹೇಳಿದ್ದು, ಈ ಮೀನನ್ನು 2005 ರಲ್ಲಿ ಥೈಲ್ಯಾಂಡ್ನಲ್ಲಿ ಹಿಡಿಯಲಾಯಿತು.

Leave A Reply

Your email address will not be published.