ಬುಶ್ರಾ ವಿದ್ಯಾಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಬುಶ್ರಾ ವಿದ್ಯಾಸಂಸ್ಥೆ ಕಾವು ಇಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದ್ದು ,ಬುಶ್ರಾ ವಿದ್ಯಾ ಸಂಸ್ಥೆಯ ಸ್ಥಾಪಕಧ್ಯಕ್ಷರೂ ಸಂಚಾಲಕರೂ ಆದ ಅಬ್ದುಲ್ ಅಝೀಝ್ ಬುಶ್ರಾ ವಿದ್ಯುಕ್ತವಾಗಿ ಉದ್ಘಾಟಿಸಿ,ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು .ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಶೇಖರ್ ಹಾಗೂ ಶಿಕ್ಷಕ ಪ್ರದೀಪ್ ವಿದ್ಯಾರ್ಥಿ ಗಳಿಗೆ ತರಬೇತಿಯನ್ನು ನೀಡಿದರು.ಶಾಲಾ ಮುಖ್ಯ ಗುರುಗಳಾದ ಅಮರನಾಥ್ ಪ್ರಾಸ್ತಾವಿಕ ಮಾತುಗಳನ್ನಾಡಿ ,ಯೋಗ ದಿನಾಚರಣೆಯ ಮಹತ್ವತೆ ಕುರಿತು ಮಾತನಾಡಿದರು.ಶಾಲಾ ಶಿಕ್ಷಕ ಚಂದ್ರಮೋಹನ್ , ಶಿಕ್ಷಕಿಯರಾದ ದೀಪಿಕ , ಝುಬೈದಾ , ಶರ್ಮಿಳಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಹಲವಾರು ವಿದ್ಯಾರ್ಥಿಗಳು ಇದರ ಪ್ರಯೋಜನ ವನ್ನು ಪಡೆದುಕ್ಕೊಂಡರು.ಶಿಕ್ಷಕ ಚಂದ್ರಮೋಹನ್ ಸ್ವಾಗತಿಸಿ ವಂದಿಸಿದರು.

Leave a Reply

error: Content is protected !!
Scroll to Top
%d bloggers like this: