ಬಿಜೆಪಿಯಿಂದ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಹೆಸರು ಘೋಷಣೆ!

ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹೆಸರನ್ನು ಘೋಷಿಸಿದ ಬಿಜೆಪಿ ನೇತೃತ್ವದ ಎನ್ಡಿಎ ಘೋಷಿಸಿದೆ.

ಈಗಾಗಲೇ ವಿಪಕ್ಷಗಳಿಂದ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಯಶವಂತ ಸಿನ್ಹ ಅವರ ಹೆಸರನ್ನು ಘೋಷಣೆ ಮಾಡಲಾಗಿತ್ತು. ಇದೀಗ ಬಿಜೆಪಿ ನೇತೃತ್ವದ ಎನ್ ಡಿ ಎ ಪಕ್ಷದಿಂದ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನಾಗಿ ದ್ರೌಪದಿ ಮುರ್ಮು ಅವರ ಹೆಸರನ್ನು ಘೋಷಿಸಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಬಿಜೆಪಿಯ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರು ಕಣಕ್ಕೆ ಇಳಿಯಲಿದ್ದಾರೆ. ಅವರು ಚುನಾಯಿತರಾದರೆ, 
ಭಾರತದ ರಾಷ್ಟ್ರಪತಿಯಾದ ಮೊದಲ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

64 ವರ್ಷದ ದ್ರೌಪದಿ ಮುರ್ಮು ಅವರು ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಬೈದಾಪೋಸಿ ಗ್ರಾಮದಲ್ಲಿ 1958 ರ ಜೂನ್ 20 ರಂದು ಜನಿಸಿದರು. ಇವರು ನವೀನ್ ಪಟ್ನಾಯಕ್ ನೇತೃತ್ವದ ಸರ್ಕಾರದಲ್ಲಿ 2000 ದಿಂದ 2004 ರವರೆಗೆ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನು ಅವರು 2015 ರಿಂದ 2021 ರವರೆಗೆ ಜಾರ್ಖಂಡ್ ನ ರಾಜ್ಯಪಾಲೆಯಾಗಿದ್ದರು.

ಜಾರ್ಖಂಡ್ ನ ಮೊದಲ ಮಹಿಳಾ ರಾಜ್ಯಪಾಲರಾದ ದ್ರೌಪದಿ ಮುರ್ಮು ಕೌನ್ಸಿಲರ್ ಆಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ರಾಯರಂಗಪುರ ರಾಷ್ಟ್ರೀಯ ಸಲಹಾ ಮಂಡಳಿಯ ಉಪಾಧ್ಯಕ್ಷರಾದರು.

ಈಗಾಗಲೇ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಅತ್ತ ಬಿಜೆಪಿಯ ಹಳೆಯ ಹುಲೀ, ಸದ್ಯ ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ್ಸಿನ್ಹಾ ರನ್ನು ಹೊಡೆದು ಮಲಗಿಸಲು ಮಹಿಳಾ ಅಭ್ಯರ್ಥಿಯನ್ನು ಮತ್ತು ಓರ್ವ ಬುಡಕಟ್ಟು ಜನಾಂಗದ ಅಷ್ಟೇನೂ ಪರಿಚಿತರಲ್ಲದ ಮಹಿಳೆಯನ್ನು ಮುಂದೆ ತಂದಿಟ್ಟಿದೆ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು.

ತಮಗೆ ಟಕ್ಕರ್ ಕೊಡುವ ವಿರೋಧಿಗಳನ್ನು ಅನಾಮಧೇಯ ಮುಖಗಳನ್ನು ಮುಂದೆ ತಂದು, ಅವರ ಮುಂದೆ ಸೋಲಿಸಿ ಬುದ್ದಿ ಕಲಿಸುವುದು ಬಿಜೆಪಿಯ ಹಿಂದೆಯಿಂದಲೂ ಪಾಲಿಸಿಕೊಂಡು ಬಂದಿರುವ ಪರಿಪಾಠ.

Leave a Reply

error: Content is protected !!
Scroll to Top
%d bloggers like this: