ರಾಜ್ಯದ ಎಲ್ಲಾ ಜಿಲ್ಲೆಗಳ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್!!

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ವಾಹನ ಸವಾರರಿಗೆ, ಮನೆಗೆ ದಂಡದ ನೋಟಿಸ್ ಕಳುಹಿಸುವ ರೂಲ್ಸ್ ಇದುವರೆಗೆ ರಾಜ್ಯರಾಜಧಾನಿಯಲ್ಲಿ ಮಾತ್ರ ಇತ್ತು. ಇದೀಗ ರಾಜ್ಯದ್ಯಂತ ಈ ನಿಯಮ ಜಾರಿಗೊಳಿಸಲಾಗುತ್ತಿದೆ.

ಹೌದು. ರಾಜ್ಯದ ಎಲ್ಲಾ ಜಿಲ್ಲೆಗಳ ವಾಹನ ಸವಾರರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೇ, ಸಾಕ್ಷ್ಯ ಸಹಿತ ಮನೆಗೆ ನೋಟಿಸ್ ಕಳಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಟ್ರಾಫಿಕ್ ಎನ್ಫೋರ್ಸ್ ಮ್ಯಾನೇಜ್ಮೆಂಟ್ ಸೆಂಟರ್ ಅನ್ನು, ಈಗ ರಾಯಚೂರು ಬಳಿಕ, ಕೊಪ್ಪಳದಲ್ಲಿಯೂ ಅನುಷ್ಠಾನಗೊಳಿಸಲಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಜನರು ಸಂಚಾರ ನಿಯಮ ಉಲ್ಲಂಘಿಸಿದರೆ, ಪೋಟೋ ಸಹಿತ ಮನೆಗೆ ನೋಟಿಸ್ ನೀಡಲಾಗುತ್ತಿದೆ.

ಇನ್ನೂ ಸಂಚಾರ ನಿಯಮ ಉಲ್ಲಂಘನೆಯ ಈ ನೋಟಿಸ್ ತಲುಪಿದ ನಂತರ, ದಂಡವನ್ನು ವಾಹನ ಮಾಲೀಕರು ಕಟ್ಟಬೇಕಾಗಿದೆ. ಒಂದು ವೇಳೆ ಕಟ್ಟದೇ ಇದ್ದಲ್ಲಿ, ಮೋಟಾರು ವಾಹನ ಕಾಯ್ದೆ ಅನುಸಾರ, ಪೊಲೀಸರು ಅಂತಹ ವಾಹನಗಳ ಮಾಲೀಕರ ವಿರುದ್ಧ ಚಾರ್ಜ್ ಶೀಟ್ ಹಾಕಲಿದ್ದಾರೆ.

Leave A Reply

Your email address will not be published.