RBI ನಿಂದ ಕರ್ನಾಟಕದ ಮತ್ತೊಂದು ಬ್ಯಾಂಕ್ ನ ಪರವಾನಗಿ ರದ್ದು | ಇದರಲ್ಲಿ ನಿಮ್ಮ ಖಾತೆ ಇದೆಯೇ?

ಆರ್‌ಬಿಐ ( ಭಾರತೀಯ ರಿಸರ್ವ್ ಬ್ಯಾಂಕ್)ಕರ್ನಾಟಕದ ಸಹಕಾರಿ ಬ್ಯಾಂಕ್ ನ ಪರವಾನಗಿಯನ್ನು ರದ್ದು ಮಾಡಿದೆ. ದಾವಣಗೆರೆ ಮೂಲದ ‘ಮಿಲ್ಲತ್ ಕೋ ಆಪರೇಟಿವ್ ಬ್ಯಾಂಕ್ ಪರವಾನಿಗೆಯನ್ನು ಅಮಾನತುಗೊಳಿಸಿದೆ. ಸಹಕಾರಿ ಬ್ಯಾಂಕ್ ಬಂಡವಾಳ ಹೊಂದಿಲ್ಲ ಕಾರಣ ಮತ್ತು ಪ್ರಸ್ತುತ ಠೇವಣಿದಾರರಿಗೆ ಪೂರ್ಣ ಮೊತ್ತವನ್ನು ಮರುಪಾವತಿಸಲು ಸಾಕಾಷ್ಟು ಆದಾಯ ಹೊಂದಿಲ್ಲ ಎಂಬ ಕಾರಣದಿಂದಾಗಿ, ರಿಸರ್ವ್ ಬ್ಯಾಂಕ್ ಈ ಕ್ರಮ ಕೈಗೊಂಡಿದೆ.

ಜೂನ್ 17ರಂದೇ ಆರ್‌ಬಿಐ ಈ ಆದೇಶ ನೀಡಿದೆ. ಜೂನ್ 18ರ ಶನಿವಾರದಿಂದಲೇ ಬ್ಯಾಂಕಿಂಗ್ ವ್ಯವಹಾರ ಸ್ಥಗಿತಗೊಳಿಸುವಂತೆ ಆರ್‌ಬಿಐ ಆದೇಶದಲ್ಲಿ ತಿಳಿಸಿದೆ.
ಮಿಲ್ಲತ್ ಕೋ ಆಪರೇಟಿವ್ ಬ್ಯಾಂಕ್ ಸಾಕಷ್ಟು ಬಂಡವಾಳ ಹೊಂದಿಲ್ಲ. ಜತೆಗೆ ಠವಣಿದಾರರ ಹಣವನ್ನು ಪೂರ್ಣವಾಗಿ ಮರುಪಾವತಿಸುವಷ್ಟು ಸಾಮರ್ಥ್ಯ ಹೊಂದಿಲ್ಲ. ಅಲ್ಲದೆ, ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ರ ಸೆಕ್ಷನ್ 56 ರ ನಿಬಂಧನೆಗಳನ್ನು ಅನುಸರಿಸಲು ವಿಫಲವಾಗಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ
ತಿಳಿಸಿದೆ.

ಕರ್ನಾಟಕ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕೂಡ ಬ್ಯಾಂಕ್ ವ್ಯವಹಾರವನ್ನು ಸ್ಥಗಿತ ಮಾಡಲು ಮತ್ತು ಬ್ಯಾಂಕ್‌ಗೆ ಲಿಕ್ವಿಡೇಟರ್ ಅನ್ನು ನೇಮಿಸಲು ಆದೇಶ ನೀಡುವಂತೆ ಮನವಿ ಮಾಡಿದೆ ಎಂದು ಆರ್‌ಬಿಐ ಜೂನ್
18 ರ ಪ್ರಕಟಣೆಯಲ್ಲಿ ತಿಳಿಸಿದೆ.

ಬ್ಯಾಂಕ್ ನೀಡಿರುವ ವಿವರಗಳ ಪ್ರಕಾರ, ಠೇವಣಿದಾರರು ತಮ್ಮ ಸಂಪೂರ್ಣ ಠೇವಣಿಯನ್ನು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಮೂಲಕ ಪಡೆಯುತ್ತಾರೆ ಎಂದು ಹೇಳಿದರು. ಲಿಕ್ವಿಡೇಟರ್ ನೇಮಕಗೊಂಡರೆ ಪ್ರತಿ ಠೇವಣಿದಾರರು DICGC ಯಿಂದ ಠೇವಣಿ ವಿಮೆಯನ್ನು ಕ್ರೈಮ್ ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಗರಿಷ್ಠ 5 ಲಕ್ಷ ರೂಪಾಯಿವರೆಗೆ ಠೇವಣಿ ವಿಮೆ ಪಡೆಯಬಹುದು. ಈ ಬ್ಯಾಂಕ್ ತನ್ನ ಬ್ಯಾಂಕಿಂಗ್ ವ್ಯವಹಾರ ಮುಂದುವರಿಸಲು ಅವಕಾಶ ನೀಡಿದರೆ, ಸಾರ್ವಜನಿಕ ಹಿತಾಸಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ
ಎಂದು ಆರ್‌ಬಿಐ ತಿಳಿಸಿದೆ.

Leave A Reply

Your email address will not be published.