ಪಾಕ್ ಹೋಟೆಲ್ ಗೆ ಕೈಬೀಸಿ ಕರೆಯುತ್ತಿರುವ ಬಾಲಿವುಡ್ ನಟಿ ಆಲಿಯಾ | ಪುರುಷ ಗ್ರಾಹಕರಿಗೆ 25% ಆಫರ್ ಬೇರೆ !!

ಗ್ರಾಹಕರನ್ನು ಸೆಳೆಯಲು ಹೋಟೆಲ್ ಗಳು ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಲೇ ಇರುತ್ತವೆ. ಅಂತೆಯೇ ಪಾಕಿಸ್ತಾನದ ರೆಸ್ಟೋರೆಂಟ್‌ವೊಂದು ಮಾಡಿರುವ ಯೋಜನೆ ನೋಡಿ, ಗ್ರಾಹಕರು ಬೆರಗಾಗಿದ್ದಾರೆ. ಅದರಲ್ಲೂ ಪುರುಷ ಗ್ರಾಹಕರೇ ಹೆಚ್ಚಾಗಿ ಬರಬೇಕೆಂದು, ಚಿತ್ರದಲ್ಲಿ ಆಲಿಯಾ ಭಟ್ ನಟಿಸಿರುವ ದೃಶ್ಯವೊಂದನ್ನು ಬಳಸಿಕೊಂಡಿದ್ದಾರೆ.

ಇದೇ ವರ್ಷ ತೆರೆಕಂಡ ಗಂಗೂಬಾಯಿ ಕಾಥಿಯಾವಾಡಿ ಚಿತ್ರದಲ್ಲಿ ಆಲಿಯಾ ವೇಶ್ಯೆ ಪಾತ್ರದಲ್ಲಿ ನಟಿಸಿದ್ದರು. ಇದೀಗ ಈ ಚಿತ್ರದ ಆಲಿಯಾ ಚಿತ್ರವನ್ನು ಹೋಟೆಲ್ ಮುಂದೆ ಅಂಟಿಸಿ ಗ್ರಾಹಕರನ್ನು ಸೆಳೆಯುವ ಯತ್ನ ಮಾಡುತ್ತಿದೆ. ಆದರೆ ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಿಡಿಕಾರಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಈ ವರ್ಷದ ಸೂಪರ್ ಹಿಟ್ ಸಿನಿಮಾ `ಗಂಗೂಬಾಯಿ ಕಾಥಿಯಾವಾಡಿ’ ಅವರ ಜೀವನಾಧಾರಿತ ಚಿತ್ರದಲ್ಲಿ ಆಲಿಯಾ ವೇಶ್ಯೆ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಪಾಕ್‌ನ ಕರಾಚಿಯ ಹೋಟೆಲ್‌ ಈ ದೃಶ್ಯ ಬಳಸಿಕೊಂಡಿರುವುದಲ್ಲದೇ ಹೋಟೆಲ್ ಮುಂದೆ ಪೋಸ್ಟರ್ ಸಹ ಅಂಟಿಸಿದ್ದಾರೆ. ಪುರುಷರಿಗೆ ಮಾತ್ರ 25% ರಿಯಾಯಿತಿ ಕೂಡ ಇದೆ ಎಂದು ಹೋಟೆಲ್ ಹೇಳಿಕೊಂಡಿದೆ. ಚಿತ್ರದಲ್ಲಿ ಪುರುಷರನ್ನು ಕರೆಯುವ ದೃಶ್ಯವನ್ನೇ ಉಪಯೋಗಿಕೊಂಡಿರುವುದರಿಂದ ಗ್ರಾಹಕರು ಹೆಚ್ಚಾಗಿ ಬರುತ್ತಿದ್ದಾರಂತೆ.

ಅದಲ್ಲದೆ ಪಾಕಿಸ್ತಾನ ರೆಸ್ಟೋರೆಂಟ್ ಗ್ರಾಹಕರನ್ನು ಬುಟ್ಟಿಗೆ ಹಾಕಿಕೊಳ್ಳಲು ಚಾಲಾಕಿ ಐಡಿಯಾ ಮಾಡಿದೆ. ಅದಲ್ಲದೆ ಪ್ರಚಾರಕ್ಕಾಗಿ ಪಾಕಿಸ್ತಾನದಲ್ಲಿ ರೂಪದರ್ಶಿಗಳು ಇಲ್ಲವೇ?? ಏನೇ ಆಗಲಿ, ಪ್ರಮೋಷನ್ ಗಾಗಿ ಭಾರತೀಯರನ್ನು ಬಳಸಿಕೊಳ್ಳುತ್ತಿರುವುದು ಮಾತ್ರ ಪಾಕ್ ಗೆ ನಾಚಿಕೆಗೇಡಿನ ಸಂಗತಿ ಅಲ್ಲವೇ !!

Leave a Reply

error: Content is protected !!
Scroll to Top
%d bloggers like this: