ಪಿಲಿಕುಳದಲ್ಲಿ ಪತ್ನಿಯ ಪಿಲಿಗೊಬ್ಬು!!ಟಾಯ್ಲೆಟ್ ಗೆ ಹೋಗಿ ಬರ್ತೆ ಎಂದಾಕೆ ಮಾಯ!!

ಮಂಗಳೂರು: “ಒಂಜಿ ನಿಮಿಷ ಬತ್ತೆ. ಟಾಯ್ಲೆಟ್ ಪೋದು ಬರ್ಪೆ” ಅಂತ ಶೌಚಾಲಯಕ್ಕೆ ಅಂತ ಹೋದವಳು ಪತಿಯನ್ನು ಬಸ್‌ ನಿಲ್ದಾಣದಲ್ಲೇ ಬಿಟ್ಟು ಪತ್ನಿ ಪರಾರಿಯಾಗಿರುವ ಘಟನೆ ನಡೆದಿದ್ದು, ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಾರಿಯಾದವರು ಶಿಲ್ಪಾ (30) ಎಂದು ತಿಳಿದು ಬಂದಿದೆ.
ಅವರು ತನ್ನ ಪತಿಯೊಂದಿಗೆ ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದಿಂದ ಪಿಲಿಕುಳ ನಿಸರ್ಗಧಾಮಕ್ಕೆ ಟೂರ್ ಹೋಗುವುದಕ್ಕಾಗಿ ಮಂಗಳೂರಿನ ಸರ್ವೀಸ್‌ ಬಸ್‌ ನಿಲ್ದಾಣಕ್ಕೆ ಬಂದಿದ್ದಳು. ಉಡುಪಿ ಬಸ್‌ ನಿಲ್ದಾಣದಲ್ಲಿ ಪಿಲಿಕುಳದ ಬಸ್‌ ಹತ್ತುವ ಮೊದಲು ” ಈಗ ಬರ್ತೆ” ಅಂತ ‘ 1’ ಸಿಂಬಲ್ ಮಾಡಿ ಶೌಚಾಲಯಕ್ಕೆ ಹೋಗಿ ಬರುವೆನೆಂದು ಹೇಳಿ ಹೋಗಿದ್ದ ಶಿಲ್ಪಾ, ಅಲ್ಲಿಂದ ತಪ್ಪಿಸಿಕೊಂಡು ಎಲ್ಲೋ ಹೋಗಿದ್ದಾಳೆ.

ಆಕೆಯ ಪತಿ, ಪತ್ನಿ ಈಗ ಬರ್ತಾಳೆ, ಇನ್ನೇನು ಬರ್ತಾಳೆ ಅಂತ ಕಾದದ್ದೆ ಬಂತು. ಕಡೆಗೆ ಲೇಡೀಸ್ ಟಾಯ್ಲೆಟ್ ಗೆ ಇಣುಕಿ ನೋಡಿ ಅಲ್ಲಿಗೆ ಬಂದಿದ್ದ ಲೇಡೀಸ್ ಕೈಲಿ ಬೈಸಿಕೊಂದದ್ದೂ ಆಯ್ತು. ಪತ್ನಿದ್ದು ಸುದ್ದಿಲ್ಲ. ಶಿಲ್ಪಾ ಅವರ ಮೊಬೈಲ್‌ಗೆ ಕರೆ ಮಾಡಿದರೂ, ಆಕೆ ಉತ್ತರಿಸಲಿಲ್ಲ. ಅನಂತರ ಮೊಬೈಲ್‌ ಸ್ವಿಚ್ ಆಫ್ ಆಗಿತ್ತು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಆನಂತರ ಸಿಸಿಟಿವಿ ಗಮನಿಸಿದಾಗ ಆಕೆ ಉಡುಪಿ ಬಸ್ ಹತ್ತಿದ್ದಾಗಿ ವಿಷಯ ತಿಳಿದು ಬಂದಿದೆ.

ಶಿಲ್ಪಾ ಅವರು 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಬಿಳಿ ಮತ್ತು ಕೆಂಪು ಬಣ್ಣದ ಚೂಡಿದಾರದ ಟಾಪ್‌ ಮತ್ತು ಹಸುರು ಬಣ್ಣದ ಪ್ಯಾಂಟ್‌ ಧರಿಸಿದ್ದರು. ಕನ್ನಡ ಭಾಷೆ ಮಾತನಾಡುತ್ತಾರೆ. ಅವರ ಬಗ್ಗೆ ಮಾಹಿತಿ ದೊರೆತವರು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆ (0824-2220518) ಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.