ಮಂಗಳೂರು: ಚಲಿಸುತ್ತಿದ್ದ ಜೀಪ್ ಪಲ್ಟಿ ; ಯುವತಿ ಸಾವು, ಮೂವರಿಗೆ ಗಾಯ!

ಮಂಗಳೂರು: ತಿರುವಿನಲ್ಲಿ ಚಲಿಸುತ್ತಿದ್ದ ಜೀಪ್ ಪಲ್ಟಿಯಾಗಿ
ಯುವತಿಯೊಬ್ಬರು ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ಮುಂಡೂರು ಸಂಕಲಕರಿಯದಲ್ಲಿ ನಡೆದಿದೆ.

ಬೆಳ್ವಣ್ -ಸಂಕಲಕರಿಯ ರಸ್ತೆ ಕಾಮಗಾರಿ ನಡೆಯುತ್ತಿದ್ದು, ತಿರುವಿನಲ್ಲಿ ಆಕಸ್ಮಿಕವಾಗಿ ಜೀಪ್ ಸ್ಕಿಡ್ ಆಗಿ ರಸ್ತೆಗೆ ಪಲ್ಟಿಯಾಗಿದೆ. ಘಟನೆಯ ವೇಳೆ ಜೀಪ್ ನಲ್ಲಿ ಚಾಲಕ ಸೇರಿ ಐದು ಜನರಿದ್ದರು. ಈ ಜೀಪ್ ನಾನಿಲ್ತಾರ್ ನ ಜಯರಾಮ ಎಂಬವರಿಗೆ ಸೇರಿದ್ದಾಗಿದ್ದು, ಜೀಪನ್ನು ಭಾಸ್ಕರ ಎಂಬವರು
ಚಲಾಯಿಸುತ್ತಿದ್ದರು.

ಅಪಘಾತದ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

Leave A Reply

Your email address will not be published.