ಆಧಾರ್ ಕಾರ್ಡ್ ಮೂಲಕವೂ ಸಲ್ಲಿಸಬಹುದು ವೈಯಕ್ತಿಕ ಸಾಲಕ್ಕಾಗಿ ಅರ್ಜಿ!, ಹೇಗೆ!?

ಸಾಲವಿಲ್ಲದೆ ಮನುಷ್ಯ ಬದುಕಲು ಅಸಾಧ್ಯ ಎಂಬ ಮಟ್ಟಿಗೆ ಜಗತ್ತು ಬೆಳೆದು ನಿಂತಿದೆ. ಯಾಕಂದ್ರೆ ಈ ದುಬಾರಿ ದುನಿಯಾದಲ್ಲಿ ದುಡ್ಡಿದ್ದವನೆ ದೊಡ್ಡಪ್ಪ. ಹೀಗಾಗಿ ಸಾಲದ ಮೊರೆ ಹೋಗೋರೆ ಹೆಚ್ಚು. ಆದ್ರೆ ಸಾಲವೇನೋ ಪಡೆಯಬಹುದು. ಆದ್ರೆ ಕೊಡೋರು ಯಾರು ಎಂಬುದೇ ದೊಡ್ಡ ಪ್ರಶ್ನೆ.

ಜನರು ತಮಗೆ ತುರ್ತಾಗಿ ಏನಾದರೂ ಹಣದ ಅವಶ್ಯಕತೆ ಇದ್ದರೆ ತಕ್ಷಣಕ್ಕೆ ಅಂತ ಅವರ ಸ್ನೇಹಿತರ ಮತ್ತು ಸಂಬಂಧಿಕರ ಬಳಿ ಸಾಲ ತೆಗೆದುಕೊಳುತ್ತಾರೆ. ಇಲ್ಲವೇ, ಮನೆಯಲ್ಲಿರುವ ಆಭರಣಗಳನ್ನು ಈ ಫೈನಾನ್ಸ್ ಗಳಲ್ಲಿ ಅಡವಿಟ್ಟು ಸಾಲ ಪಡೆಯುತ್ತಾರೆ. ಆಮೇಲೆ ಹಣ ಬಂದ ನಂತರ ಆ ಇರಿಸಿದಂತಹ ಆಭರಣಗಳನ್ನು ಹಿಂದಕ್ಕೆ ಪಡೆಯುತ್ತಾರೆ. ಅಲ್ಲದೆ, ಬ್ಯಾಂಕ್ ಗಳು ಸಹ ನಿಮಗೆ ನಿಮ್ಮ ಸಂಬಳದ ಮೇಲೆ ಸಾಲ ನೀಡುತ್ತವೆ. ಆದರೆ, ಆಧಾರ್ ಕಾರ್ಡ್ ಮೇಲೆ ಸಾಲ ಪಡೆಯಬಹುದು ಎಂಬ ಮಾಹಿತಿ ಯಾರಿಗೆ ತಿಳಿದಿತ್ತು ಹೇಳಿ?

ಹೌದು. ನೀವು ಆಧಾರ್ ಕಾರ್ಡ್ ಗಳ ಮೇಲೆ ಸಹ ಸಾಲ ಪಡೆಯಬಹುದು. ಆಧಾರ್ ಕಾರ್ಡ್ ಈಗ ಒಂದು ಪ್ರಮುಖವಾದ ಗುರುತಿನ ದಾಖಲೆಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಪ್ರತಿಯೊಂದು ಕೆಲಸಕ್ಕೂ ಅಗತ್ಯವಾಗಿದೆ. ಅದೇ ಆಧಾರ್ ಕಾರ್ಡ್ ನಿಮಗೆ ತ್ವರಿತವಾಗಿ ಹಣ ಬೇಕಾದಾಗ ಸಾಲ ಪಡೆಯಲು ಸಹ ಸಹಾಯ ಮಾಡುತ್ತದೆ. ನಿಮ್ಮ ಆಧಾರ್ ಕಾರ್ಡ್ ಸಹಾಯದಿಂದ, ನೀವು ಯಾವುದೇ ತೊಂದರೆಯಿಲ್ಲದೆ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಅನೇಕ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಆಧಾರ್ ಕಾರ್ಡ್ ಗಳ ಮೇಲೆ ಸಹ ಸಾಲ ನೀಡುತ್ತವೆ. 750 ಕ್ಕಿಂತ ಹೆಚ್ಚು ಕ್ರೆಡಿಟ್ ಸ್ಕೋರ್ ಹೊಂದಿರುವ ಯಾವುದೇ ಗ್ರಾಹಕರು ಆಧಾರ್ ಕಾರ್ಡ್ ಮೇಲೆ ಸಾಲ ಪಡೆಯಲು ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಗಮನಾರ್ಹವಾಗಿ, ಬ್ಯಾಂಕುಗಳು ಅಂತಹ ಸಂದರ್ಭಗಳಲ್ಲಿ ಕಡಿಮೆ ಬಡ್ಡಿದರವನ್ನು ವಿಧಿಸುತ್ತವೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಬ್ಯಾಂಕುಗಳು ಮತ್ತು ಹಣಕಾಸು ಕಂಪನಿಗಳು ‘ನೋ ಇವರ್ ಕ್ಲೈಂಟ್’ (ಕೆವೈಸಿ) ಪ್ರಕ್ರಿಯೆ ಆದ ನಂತರವೇ ವೈಯಕ್ತಿಕ ಸಾಲಗಳನ್ನು ಈ ಬ್ಯಾಂಕುಗಳು ಸುಲಭವಾಗಿ ಅನುಮೋದಿಸುತ್ತವೆ ಎಂದು ಹೇಳಲಾಗುತ್ತಿದೆ.

ಆಧಾರ್ ಕಾರ್ಡ್ ಮೂಲಕ ವೈಯಕ್ತಿಕ ಸಾಲಕ್ಕಾಗಿ ನೀವು ಹೇಗೆ ಅರ್ಜಿ ಸಲ್ಲಿಸಬಹುದು ಎಂಬುದು ಇಲ್ಲಿದೆ ನೋಡಿ

*ಮೊದಲಿಗೆ ಆಧಾರ್ ಕಾರ್ಡ್ ಮೂಲಕ ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ. ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್ ಮೂಲಕವೂ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.
*ನಂತರ ನಿಮ್ಮ ಮೊಬೈಲ್ ಫೋನ್ ನಲ್ಲಿ ನೀವು ಸ್ವೀಕರಿಸಿದ ಒಟಿಪಿಯನ್ನು ಅಲ್ಲಿ ನಮೂದಿಸಿರಿ.
*ವೈಯಕ್ತಿಕ ಸಾಲದ ಆಯ್ಕೆಯನ್ನು ಆರಿಸಿಕೊಳ್ಳಿರಿ.
*ನಿಮ್ಮ ಜನ್ಮ ದಿನಾಂಕ ಮತ್ತು ವಿಳಾಸದೊಂದಿಗೆ ಸಾಲದ ಮೊತ್ತ ಮತ್ತು ಇತರ ಅಗತ್ಯ ಮಾಹಿತಿಯನ್ನು ಅದರಲ್ಲಿ ನಮೂದಿಸಿರಿ.
*ನಂತರ, ನೀವು ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ನಂತಹ ಪ್ರಮುಖ ಗುರುತಿನ ದಾಖಲೆಗಳ ಪ್ರತಿಯನ್ನು ಆ ವೆಬ್‌ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು.
*ಕೊನೆಯದಾಗಿ ನೀವು ಸಲ್ಲಿಸಿದ ವಿವರಗಳನ್ನು ಬ್ಯಾಂಕುಗಳು ಮತ್ತೊಮ್ಮೆ ಪರಿಶೀಲಿಸಿಕೊಂಡು ತದ ನಂತರವೇ ಅವರು ನಿಮ್ಮ ಸಾಲವನ್ನು ಅನುಮೋದಿಸುತ್ತಾರೆ.

Leave A Reply

Your email address will not be published.