ಯೋಗ ಡೇ ಪ್ರಯುಕ್ತ ನಾಳೆ ಶಾಲೆ ಕಾಲೇಜುಗಳಿಗೆ ರಜೆ ಇದ್ಯಾ?!

ನಾಳೆ ಎಲ್ಲಾ ಶಾಲೆಗಳಿಗೆ ಅರ್ಧ ದಿನ ರಜೆ ಎಂದು ಎಲ್ಲಾ ಕಡೆ ಒಂದು ಸುದ್ದಿ ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆಯ ವಿವರಗಳನ್ನು ನಾವು ನಿಮಗೆ ಇಲ್ಲಿ ನೀಡಿದ್ದೇವೆ.

ನಾಳೆ ಯೋಗದಿನದ ಪ್ರಯುಕ್ತ ಅರ್ಧ ದಿನ ಶಾಲೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ದಿನಾಂಕ 21-06-2022 ಮಂಗಳವಾರದಂದು ಅಂತರಾಷ್ಟ್ರೀಯ ಯೋಗ ದಿನದಂದು ಅರ್ಧ ದಿನದ ಶಾಲೆಯನ್ನು ನಡೆಸಲು ತಿಳಿಸಿದೆ. ( ಶನಿವಾರ ವೇಳಾಪಟ್ಟಿಯಂತೆ) ಹಾಗೂ ಸದರಿ ದಿನದ ಮೊದಲ ಒಂದೂವರೆ ಗಂಟೆಯ ಅವಧಿಯಲ್ಲಿ ವಿದ್ಯಾರ್ಥಿಗಳ ವಯಸ್ಸಿಗೆ ಅನುಗುಣವಾದ‌ ಯೋಗಾಸನಗಳ ಅಭ್ಯಾಸ ಹಮ್ಮಿಕೊಂಡಿದೆ. ಹಾಗೂ ನಾಳೆ ಮತ್ತೆ ಕ್ಲಾಸ್ ಇದೆಯಾ ಅಥವಾ ಅರ್ಧ ದಿನದ ಕ್ಲಾಸ್ ನಂತರ ಯೋಗ ಕ್ಲಾಸ್ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಮಾಹಿತಿ ಬಗ್ಗೆ ಆಯಾ ಶಾಲೆಗಳಿಗೆ ಸಂಬಂಧಪಟ್ಟಂತೆ ವಿದ್ಯಾರ್ಥಿಗಳಿಗೆ ಮಾಹಿತಿ ತಿಳಿಯಬಹುದು.

ನಾಳೆ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಎಲ್ಲಾ ಶಾಲೆಗಳಲ್ಲೂ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಲು ಸೂಚಿಸಲಾಗಿದ್ದು, ಎಸ್‌ಡಿಎಂಸಿ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಯೋಗ ತರಬೇತಿ ಸಂಸ್ಥೆಗಳಿಂದ ಮಂಗಳವಾರ ಮಧ್ಯಾಹ್ನದ ತನಕ ಶಾಲಾ ಮಕ್ಕಳಿಗೆ ಯೋಗ ತರಬೇತಿ ನಡೆಯಲಿದೆ. ಹೀಗಾಗಿ ಮಂಗಳವಾರ ಶನಿವಾರದ ವೇಳಾಪಟ್ಟಿಯಂತೆ ಅರ್ಧ ದಿನ ಶಾಲೆಗಳು ನಡೆಯಲಿವೆ.

ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ದಿ.21 ರಂದು ರಾಜ್ಯದ ಎಲ್ಲ ಶಾಲೆಗಳಲ್ಲಿ ಯೋಗದಿನವನ್ನು ಆಚರಿಸಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಅಂದು ದಿನದ ಮೊದಲ ಒಂದೂವರೆ ಗಂಟೆಯ ಅವಧಿಯಲ್ಲಿ ವಿದ್ಯಾರ್ಥಿಗಳ ವಯಸ್ಸಿಗೆ ಅನುಗುಣವಾದ‌ ಯೋಗಾಸನಗಳ ಅಭ್ಯಾಸಗಳನ್ನು ಹಾಗೂ ಪ್ರದರ್ಶನಗಳನ್ನು ಹಮ್ಮಿಕೊಳ್ಳಲು ತಿಳಿಸಿದೆ. ಈ ದಿನದ ಪಾಠವನ್ನು ದಿನಾಂಕ 25-06-2022 ಶನಿವಾರದಂದು ಇಡೀ ದಿನ ಶಾಲೆ ನಡೆಸಿ ಸರಿದೂಗಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

Leave A Reply

Your email address will not be published.