ಅಗ್ನಿಪಥ್ ವಿರೋಧದ ನಡುವೆಯೂ ಅಗ್ನಿವೀರರಿಗೆ ಬಂಪರ್ ಆಫರ್ ನೀಡಿದ ಆನಂದ್ ಮಹೀಂದ್ರಾ !!

ದೇಶದಲ್ಲೆಡೆ ‘ಅಗ್ನಿಪಥ್’ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಈ ನಡುವೆ ಕೈಗಾರಿಕೋದ್ಯಮಿ, ಮಹೀಂದ್ರಾ ಗ್ರೂಪ್‍ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಸೋಮವಾರ ಬೆಳಗ್ಗೆ ಟ್ವಿಟ್ಟರ್‌ನಲ್ಲಿ ಅಗ್ನಿಪಥ್ ಯೋಜನೆಯನ್ನು ಕೇಂದ್ರವು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದರಲ್ಲದೆ, ಅಗ್ನಿ ವೀರರಿಗೆ ಬಿಗ್ ಆಫರ್ ಕೂಡ ನೀಡಿದ್ದಾರೆ.

ಅಗ್ನಿಪಥ್ ಸುತ್ತಲಿನ ಹಿಂಸಾಚಾರದಿಂದ ನಾನು ದುಃಖಿತನಾಗಿದ್ದೇನೆ ಎಂದು ಹೇಳಿದ ಅವರು, ನಾಲ್ಕು ವರ್ಷಗಳಲ್ಲಿ ಅಗ್ನಿವೀರರು ಗಳಿಸುವ ಕೌಶಲ್ಯ ಮತ್ತು ಶಿಸ್ತು ಅವರನ್ನು ಉದ್ಯೋಗಿಗಳನ್ನಾಗಿ ಮಾಡುತ್ತದೆ. ಮಹೀಂದ್ರಾ ಗ್ರೂಪ್ ಅಂತಹ ತರಬೇತಿ ಪಡೆದ ಮತ್ತು ಸಮರ್ಥ ಜನರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಸ್ವಾಗತಿಸುತ್ತದೆ ಎಂದು ದೊಡ್ಡ ಆಫರ್ ಕೊಟ್ಟಿದ್ದಾರೆ.

ಅಗ್ನಿಪಥ್ ಯೋಜನೆಯ ಸುತ್ತ ನಡೆಯುತ್ತಿರುವ ಹಿಂಸಾಚಾರದಿಂದ ನನಗೆ ಬೇಸರವಾಗಿದೆ. ಕಳೆದ ವರ್ಷ ಈ ಯೋಜನೆಯನ್ನು ಪ್ರಸ್ತಾಪಿಸಿದಾಗ ನಾನು ಹೇಳಿದ್ದೇನೆ. ಅದನ್ನು ನಾನು ಮತ್ತೆ ಹೇಳಲು ಬಯಸುತ್ತೇನೆ. ಅಗ್ನಿವೀರರು ಗಳಿಸಿರುವ ಶಿಸ್ತು ಮತ್ತು ಕೌಶಲ್ಯಗಳು ಅವರನ್ನು ಅತ್ಯುತ್ತಮ ಉದ್ಯೋಗ ಪಡೆಯಲು ಸಹಾಯ ಮಾಡುತ್ತದೆ. ಅಂತಹ ತರಬೇತಿ ಪಡೆದ ಸಮರ್ಥ ಯುವಕರನ್ನು ನೇಮಿಸಿಕೊಳ್ಳುವ ಅವಕಾಶವನ್ನು ಮಹೀಂದ್ರಾ ಗ್ರೂಪ್ ಸ್ವಾಗತಿಸುತ್ತದೆ ಎಂದು ಬರೆದು ಉದ್ಯೋಗದ ಆಫರ್ ಕೊಟ್ಟಿದ್ದಾರೆ.

ಈ ಟ್ವೀಟ್ ಮಾಡಿದ ಒಂದು ನಿಮಿಷದಲ್ಲಿ, ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಅದಕ್ಕೆ ಉತ್ತರಿಸಿದ್ದು, ಅಗ್ನಿವೀರರಿಗೆ ಮಹೀಂದ್ರಾ ಗ್ರೂಪ್ ಯಾವ ರೀತಿಯ ಪೋಸ್ಟ್‌ಗಳನ್ನು ನೀಡುತ್ತದೆ? ಎಂದು ಪ್ರಶ್ನೆ ಕೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರಾ, ಕಾರ್ಪೊರೇಟ್ ವಲಯದಲ್ಲಿ ಅಗ್ನಿವೀರರಿಗೆ ಹೆಚ್ಚಿನ ಉದ್ಯೋಗಾವಕಾಶವಿದೆ.

ಕಾರ್ಪೊರೇಟ್ ವಲಯದಲ್ಲಿ ಅಗ್ನಿವೀರರಿಗೆ ಉದ್ಯೋಗಕ್ಕೆ ದೊಡ್ಡ ಸಾಮರ್ಥ್ಯವಿದೆ. ನಾಯಕತ್ವ, ಟೀಮ್‍ವರ್ಕ್ ಮತ್ತು ದೈಹಿಕ ತರಬೇತಿಯೊಂದಿಗೆ ಅಗ್ನಿವೀರರು ಉದ್ಯಮಕ್ಕೆ ಬೇಕಾದ ಮಾರುಕಟ್ಟೆ-ಸಿದ್ಧ ವೃತ್ತಿಪರ ಪರಿಹಾರಗಳನ್ನು ಒದಗಿಸುತ್ತಾರೆ. ಕಾರ್ಯಾಚರಣೆಗಳಿಂದ ಆಡಳಿತ ಮತ್ತು ಪೂರೈಕೆ ಸರಪಳಿ ನಿರ್ವಹಣೆಯವರೆಗಿನ ಸಂಪೂರ್ಣ ಶಕ್ತಿಯನ್ನು ಅವರು ಹೊಂದಿದ್ದಾರೆ ಎಂದು ಉತ್ತರ ಕೊಟ್ಟಿದ್ದಾರೆ.

Leave A Reply

Your email address will not be published.