ಕಳ್ಳತನಕ್ಕೆ ಏನೂ ಸಿಗದೆ ಖಾಲಿ ಕೈಯಲ್ಲಿ ವಾಪಸ್ಸಾದ ಖದೀಮ ಮಾಡಿದ್ದೇನು ಗೊತ್ತಾ!?

ಸಾಮಾನ್ಯವಾಗಿ ಕಳ್ಳರು ಕಳ್ಳತನಕ್ಕೆಂದು ಹೋದಾಗ ಏನೂ ಸಿಗದೆ ಖಾಲಿ ಕೈಯಲ್ಲಿ ಮರಳುತ್ತಾರೆ. ಆದ್ರೆ ಇನ್ನು ಯಾರ ಕಣ್ಣಿಗೂ ಬೀಳಬಾರದು ಅಂದುಕೊಂಡು ಎಸ್ಕೇಪ್ ಆಗುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ಕಳ್ಳತನಕ್ಕೆ ಏನೂ ಸಿಗದೆ ಕೋಪಗೊಂಡು ಅಂಗಡಿ ಮಾಲೀಕನಿಗೆ ಪತ್ರ ಬರೆಬೇಕೆ!!

ಹೌದು. ಶಾಪಿಂಗ್​ ಕಾಂಪ್ಲೆಕ್ಸ್​ಗೆ ನುಗ್ಗಿದ ಖದೀಮನೊಬ್ಬ ಏನು ಸಿಗದೇ ಖಾಲಿ ಕೈಯಲ್ಲಿ ವಾಪಸ್​ ಬರುವಾಗ ‘ಹಣ ಇಲ್ಲಾ ಅಂದ್ರೆ ಬಾಗಿಲಿಗೆ ಬೀಗ ಯಾಕೆ ಹಾಕ್ತೀರಾ?’ ಎಂಬ ಸೊಕ್ಕಿನ ಬರಹವುಳ್ಳ ಪತ್ರ ಬರೆದಿಟ್ಟಿರುವ ಪ್ರಸಂಗ ಕೇರಳದ ಕುಂಡಮಕುಲಂನಲ್ಲಿ ನಡೆದಿದೆ. ಈಗ ಮಾತ್ರ ಈ ಖತರ್ನಾಕ್​ ಕಳ್ಳ ಪೊಲೀಸ್ ಅತಿಥಿಯಾಗಿದ್ದಾನೆ.

ಬಂಧಿತ ಖದೀಮ ವಿಶ್ವರಾಜ್​ (40)ಎಂದು ತಿಳಿದು ಬಂದಿದ್ದು, ಈತ ಪುಲ್​ಪಲ್ಲಿಯ ನಿವಾಸಿ. ಈತ ಕುಂಡಮಕುಲಂನ ಶಾಪಿಂಗ್​ ಕಾಂಪ್ಲೆಕ್ಸ್​ಗೆ ನುಗ್ಗಿ ಮೊದಲ ಅಂಗಡಿಯಲ್ಲಿ 12 ಸಾವಿರ ರೂ., ಎರಡನೇ ಅಂಗಡಿಯಲ್ಲಿ 500 ರೂ. ಕದ್ದಿದ್ದಾನೆ. ಇದಾದ ಬಳಿಕ ಮೂರನೇ ಅಂಗಡಿಗೆ ನುಗ್ಗಿದ ಖದೀಮ ಖಾಲಿ ಕೈಯಲ್ಲಿ ವಾಪಸ್​ ಬಂದಿದ್ದಾನೆ. ಹೀಗೆ ಬರುವಾಗ ಹಣ ಇಲ್ಲಾ ಅಂದ್ರೆ ಬಾಗಿಲು ಯಾಕೆ ಹಾಕ್ತೀರಾ? ಎಂದು ಪತ್ರ ಬರೆದಿಟ್ಟು ಬಂದಿದ್ದಾನೆ. ಇದೀಗ ಅಹಂಕಾರಿ ಕಳ್ಳ ಬರೆದಿಟ್ಟಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​​ ಆಗುತ್ತಿದೆ.

ಖದೀಮ ವಿಶ್ವರಾಜ್, ಈ ಹಿಂದೆ ಕಲ್ಪೆಟ್ಟಾದಲ್ಲಿ ಕಳ್ಳತನಕ್ಕೆ ಯತ್ನಿಸಿ ಬಂಧಿತನಾಗಿದ್ದ. ಈತ ಕೇರಳದ ವಿವಿಧ ಜಿಲ್ಲೆಗಳಲ್ಲಿ ಸುಮಾರು 53 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಕಲ್ಪೆಟ್ಟ, ಕೊಯಿಲಾಂಡಿ, ಫಾರೂಕ್, ಗುರುವಾಯೂರು, ಕಣ್ಣೂರು, ಕಾಸರಗೋಡು, ಬತ್ತೇರಿ ಸೇರಿದಂತೆ ಹಲವು ಕಡೆ ಪ್ರಕರಣಗಳಿವೆ.

Leave A Reply

Your email address will not be published.