ವಾರ ಭವಿಷ್ಯ; ಜೂನ್ 20 ರಿಂದ ಜೂನ್ 26

ಜೂನ್ 21ರಂದು ಸೂರ್ಯನು ಕರ್ಕಾಟಕ ರಾಶಿಗೆ  ಪ್ರವೇಶ ಮಾಡಲಿದ್ದಾನೆ. ಈ ಎಲ್ಲಾ ಕಾರಣಗಳಿಂದ ರಾಶಿಗಳ ಮೇಲೆ ಪರಿಣಾಮ ಉಂಟಾಗುತ್ತದೆ.  ಹಾಗಾಗಿ ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ಅದೃಷ್ಟದ ಬಣ್ಣ ಯಾವುದು? ಇಲ್ಲಿದೆ ಸಕಲ ವಿವರ

ಮೇಷ;
ಹಿರಿಯರ ಸಕಾಲಿಕ ನೆರವಿನಿಂದ ಆಪತ್ತುಗಳು ದೂರವಾಗುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಕೆಲಸದಲ್ಲಿ ಯಶಸ್ಸನ್ನು ಪಡೆಯಲು ನೀವು ಹೆಚ್ಚಿನ ಶ್ರಮವಹಿಸಬೇಕಾಗುತ್ತದೆ. ನೀವು ವಾರದ ಕೊನೆಯಲ್ಲಿ ಹಣಕಾಸಿನ ಪ್ರಯೋಜನಗಳನ್ನು ಪಡೆಯುವ ನಿರೀಕ್ಷೆಯಿದೆ. ಅದೃಷ್ಟ ಬಣ್ಣ: ಹಸಿರು


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ವೃಷಭ

ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಪ್ರಗತಿ ಇರುತ್ತದೆ. ಸರ್ಕಾರದಿಂದ ಆಗುವ ಕೆಲಸ ಕಾರ್ಯಗಳು ಸುಗಮವಾಗಿ ಆಗುತ್ತವೆ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆವಹಿಸುವುದು ಒಳ್ಳೆಯದು. ಈ ವಾರ ಭಾವುಕತೆಯ ಬದಲು ಜಾಣ್ಮೆ ಮತ್ತು ವಿವೇಚನೆಯಿಂದ ಕೆಲಸ ಮಾಡಿ. ಇದರಿಂದ ನೀವು ಯಾವುದೇ ಸಮಸ್ಯೆಯನ್ನು ಸರಿಯಾಗಿ ಪರಿಹರಿಸಬಹುದು.  ಅತಿಯಾದ ಒತ್ತಡವು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಚ್ಚರಿಕೆಯಿಂದ ಇರಿ. ಅದೃಷ್ಟ ಬಣ್ಣ: ಹಳದಿ

ಮಿಥುನ
ಕುಟುಂಬದ ಹಿರಿಯ ಸದಸ್ಯರ ಸಲಹೆಯನ್ನು ಅಗತ್ಯವಾಗಿ ಪಡೆದುಕೊಳ್ಳಿ, ಅದು ನಿಮಗೆ ಪ್ರಯೋಜನಕಾರಿ.‌ ಉದ್ಯೋಗದಲ್ಲಿ ಸ್ವಲ್ಪಮಟ್ಟಿನ ಪ್ರಗತಿಯನ್ನು ಕಾಣಬಹುದು. ಸಂತೋಷದ ದಾಂಪತ್ಯ ಜೀವನವನ್ನು ಆನಂದಿಸಲು ಬಯಸಿದರೆ, ನಿಮ್ಮ ಸ್ವಭಾವವನ್ನು ನೀವು ಬದಲಾಯಿಸಬೇಕಾಗಿದೆ. ಅದೃಷ್ಟ ಬಣ್ಣ: ಕೆಂಪು

ಕಟಕ
ಆರ್ಥಿಕ ದೃಷ್ಟಿಯಿಂದ ಈ ವಾರ ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಈ ಅವಧಿಯಲ್ಲಿ ಹೆಚ್ಚಿನ ಹಣಕಾಸಿನ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಕೆಲಸದಲ್ಲಿ ಈ ವಾರ ಸವಾಲುಗಳು ತುಂಬಿರುತ್ತವೆ. ಅದೃಷ್ಟ ಬಣ್ಣ: ನೇರಳೆ

ಸಿಂಹ
ಸರ್ಕಾರಿ ಕಚೇರಿಯ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು. ವೃತ್ತಿಯಲ್ಲಿ ಏಳಿಗೆಯನ್ನು ಕಾಣಬಹುದು. ಹಣದ ಒಳಹರಿವು ಸಮಾಧಾನಕರವಾಗಿ ಇರುತ್ತದೆ. ನಿಮ್ಮ ಕೋಪವನ್ನು ನಿಯಂತ್ರಿಸಲು ನಿಮಗೆ ಸೂಚಿಸಲಾಗುತ್ತದೆ.  ಅದೃಷ್ಟ ಬಣ್ಣ: ಗುಲಾಬಿ

ಕನ್ಯಾ

ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಏರುಪೇರುಗಳನ್ನು ಕಾಣಬಹುದು. ಸಂಗಾತಿಯನ್ನು ಅರಸುತ್ತಿರುವವರಿಗೆ ಸಂಬಂಧ ಕೂಡಿ ಬರುವ ಸಾಧ್ಯತೆ ಇದೆ. ಕೆಲಸಗಳತ್ತ ಗಮನ ಹರಿಸುವ ಅವಶ್ಯಕತೆಯಿದೆ. ವ್ಯವಹಾರದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷೆ ಮಾಡಬಹುದು. ಅದೃಷ್ಟ ಬಣ್ಣ: ಗಾಢ ಹಸಿರು

ತುಲಾ
ಹಿರಿಯರ ಸಲಹೆ-ಸೂಚನೆಗಳನ್ನು ಪಾಲಿಸುವುದು ಉತ್ತಮ. ಆರ್ಥಿಕ ಸ್ಥಿತಿಯು ಮಂದಗತಿಯಲ್ಲಿ ಇರುತ್ತದೆ. ಅದೃಷ್ಟ ಬಣ್ಣ: ಬಿಳಿ

ವೃಶ್ಚಿಕ

ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಯಶಸ್ಸು ಸಿಗುವ ಸಾಧ್ಯತೆ ಇದೆ. ಹಣದ ಒಳಹರಿವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಅದೃಷ್ಟ ಬಣ್ಣ: ಹಳದಿ

ಧನು
ಉದ್ಯೋಗದಲ್ಲಿ ಯಶಸ್ಸನ್ನು ಕಾಣಬಹುದು. ಕುಟುಂಬದಲ್ಲಿ ಕಲಹ ಇದ್ದವರಿಗೆ ಅದರಿಂದ ಮುಕ್ತಿ ಸಿಗುತ್ತದೆ. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆಯನ್ನು ಕಾಣಬಹುದು. ಹಣದ ಒಳಹರಿವು ಸಾಮಾನ್ಯವಾಗಿ ಇರುತ್ತದೆ. ಅದೃಷ್ಟ ಬಣ್ಣ: ನೀಲಿ

ಮಕರ
ಹಣಕಾಸಿನ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ಖರ್ಚಿಗೆ ಸಾಕಷ್ಟು ಕಡಿವಾಣ ಹಾಕುವುದು ಅತಿ ಅಗತ್ಯ. ಮನೆಯಲ್ಲಿ ಮಂಗಳ ಕಾರ್ಯಗಳು ಆಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಯಶಸ್ಸು ಸಿಗುವ ಕಾಲ. ಅದೃಷ್ಟ ಬಣ್ಣ: ಆಕಾಶ

ಕುಂಭ
 ಪಿತ್ರಾರ್ಜಿತ ಆಸ್ತಿಗಳಿಗಾಗಿ ಕಾಯುತ್ತಿರುವವರೆಗೆ ಆಸ್ತಿ ದೊರಕುವ ಸಾಧ್ಯತೆ ಇದೆ. ಹೊಸ ವ್ಯವಹಾರಗಳನ್ನು ಆರಂಭಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ. ಹಣದ ಒಳಹರಿವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ವೈಯಕ್ತಿಕ ವ್ಯವಹಾರಗಳಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಅದೃಷ್ಟ ಬಣ್ಣ: ಹಳದಿ

ಮೀನ
ಪ್ರೀತಿ ಪ್ರೇಮದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಬಹುದು ಹಾಗೂ ಹಿರಿಯರ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ. ವಿವಾಹದ ಬಗ್ಗೆ ಕನಸನ್ನು ಕಾಣುತ್ತಿರುವವರಿಗೆ ಸಂಬಂಧ ಕೂಡಿಬರುವ ಸಾಧ್ಯತೆ ಇದೆ. ಹಣದ ಒಳಹರಿವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಅದೃಷ್ಟ ಬಣ್ಣ: ಕಂದು

Leave a Reply

error: Content is protected !!
Scroll to Top
%d bloggers like this: