46 ವರ್ಷ ಇತಿಹಾಸವುಳ್ಳ ಪ್ರಸಿದ್ಧ ರೆಸ್ಟೋರೆಂಟ್ ತೇಲುವ ಹಡಗು,ಇನ್ನು ಮುಂದೆ ನೆನಪು ಮಾತ್ರ !!!

ಅಬರ್ ಡೀನ್ ಬಂದರಿನಿಂದ ಹಾಂಕಾಂಗ್‌ ನ ಐಕಾನಿಕ್ ಜಂಬೋ ಫ್ಲೋಟಿಂಗ್ ರೆಸ್ಟೋರೆಂಟ್ ಅನ್ನು 46 ವರ್ಷಗಳ ನಂತರ ಹೊರತೆಗೆಯುವ ನಿರ್ಧಾರ ಮಾಡಲಾಗಿದೆ. ಈ ರೆಸ್ಟೋರೆಂಟ್‌ ಬಹಳ ಹೆಸರುವಾಸಿಯಾಗಿದ್ದು, ಚೀನೀ ಸಾಮ್ರಾಜ್ಯಶಾಹಿ ಅರಮನೆಯ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಕ್ಯಾಂಟೋನೀಸ್ ಮತ್ತು ಸಮುದ್ರಾಹಾರ ಭಕ್ಷ್ಯಗಳಿಗೆ ಬಹಳ ಹೆಸರುವಾಸಿಯಾಗಿತ್ತು.

ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ 2020ರಲ್ಲಿ ಮುಚ್ಚಲ್ಪಟ್ಟಿದ್ದ ಈ ರೆಸ್ಟೋರೆಂಟ್ ನಂತರ ತೆರೆದಿರಲಿಲ್ಲ. ಹಾಂಕಾಂಗ್‌ ಹೊರಗೆ ಈ ರೆಸ್ಟೋರೆಂಟ್ ಅನ್ನು ಸ್ಥಳಾಂತರ ಮಾಡಲಾಗಿದ್ದು, ಎಲ್ಲಿ ಹೋಗಿ ನಿಲ್ಲಲಿದೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.


Ad Widget

Ad Widget

Ad Widget

Ad Widget

Ad Widget

Ad Widget

ಈ ತೇಲುವ ರೆಸ್ಟೋರೆಂಟ್ ಹಲವು ವರ್ಷಗಳಿಂದ ಹಾಂಗ್ ಕಾಂಗ್‌ನಲ್ಲಿ ಐತಿಹಾಸಿಕ ಮತ್ತು ವಿಶಿಷ್ಟ ಸಂಸ್ಥೆಯಾಗಿದೆ. ಈ ರೆಸ್ಟೋರೆಂಟ್‌ಗೆ ಕ್ವೀನ್ ಎಲಿಜಬೆತ್ ಮತ್ತು ಹಾಲಿವುಡ್ ಸೂಪ‌ರ್ ಸ್ಟಾರ್ ಟಾಮ್ ಕ್ರೂಸ್‌ನಂತಹ ಪ್ರಸಿದ್ಧ ವ್ಯಕ್ತಿಗಳು ಆಗಮಿಸಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಆದರೆ ಜಗತ್ತಿಗೆ ಕೊರೊನಾ ಬಂದ ಬಳಿಕ ಈ ರೆಸ್ಟೋರೆಂಟ್‌ನ್ನು ಮುಚ್ಚಲಾಗಿತ್ತು. ಅಂದಿನಿಂದ ಇದು ತೆರೆದಿಲ್ಲ. ಮುಂದೆ ಇದನ್ನು ಓಪನ್ ಮಾಡುವ ಯಾವುದೇ ಸುದ್ದಿ ಕೂಡಾ ಇಲ್ಲ ಎನ್ನಲಾಗಿದೆ.

ವ್ಯವಹಾರವನ್ನು ನಡೆಸುವ ವೆಚ್ಚವು ದಿನದಿಂದ ದಿನಕ್ಕೆ ಹೆಚ್ಚು, ರೆಸ್ಟೋರೆಂಟ್‌ನಲ್ಲಿ ನಿರಂತರವಾಗಿ ಹಣ ಹೂಡುವುದು ಅವರಿಗೆ ಅಸಾಧ್ಯ ಎಂದು ಈ ರೆಸ್ಟೋರೆಂಟ್ ಅನ್ನು ನಿರ್ವಹಿಸುವ ಕಂಪನಿಯಾದ ಅಬರ್ಡೀನ್ ರೆಸ್ಟೋರೆಂಟ್ ಎಂಟರ್‌ಪ್ರೈಸಸ್ ಹೇಳಿದೆ.
ಕಂಪನಿಯು ಪ್ರತಿ ವರ್ಷ ನಿರ್ವಹಣಾ ಮತ್ತು ತಪಾಸಣೆ ವೆಚ್ಚಗಳಿಗಾಗಿ ಲಕ್ಷಾಂತರ ಡಾಲರ್‌ಗಳನ್ನು ಖರ್ಚು ಮಾಡುತ್ತಿದೆ. ಆದರೆ ಗಳಿಸಿದ ಆದಾಯಕ್ಕಿಂತ ಖರ್ಚಾದ ವೆಚ್ಚವೇ ಹೆಚ್ಚು ಎಂದು ಕಂಪನಿ ಹೇಳುತ್ತದೆ.

error: Content is protected !!
Scroll to Top
%d bloggers like this: