ವಿಟ್ಲ : ಬಜರಂಗದಳ ವಿಟ್ಲ ಪ್ರಖಂಡರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆದಿದೆ.
ಇಂದು ಸಂಜೆ ವಿಟ್ಲದ ಭಜರಂಗದಳ ಸಂಚಾಲಕ ಚಂದ್ರಹಾಸ ಕನ್ಯಾನರ ಮೇಲೆ ಹನ್ನೆರಡು ಮಂದಿ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ.
ಇದೀಗ ಗಾಯಾಳುವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಚೂರಿ ಇರಿತ ನಡೆದಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.