ಚಾರ್ಲಿ777 ಚಿತ್ರಕ್ಕೆ ತೆರಿಗೆ ವಿನಾಯಿತಿ ಮಾಡಿದ ರಾಜ್ಯದ ಸಿಎಂ ! ಏಕೆ ಗೊತ್ತೆ ?

ರಕ್ಷಿತ್ ಶೆಟ್ಟಿ ಅಭಿಯನದ ಚಾರ್ಲಿ 777 ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.  ತೆರಿಗೆ ವಿನಾಯಿತಿ ಪಡೆದ ಎರಡನೇ ಚಿತ್ರ ಇದಾಗಿದೆ.

ಸಿನಿಮಾದ ನಿರ್ಮಾಪಕರೂ ಆಗಿರುವ ರಕ್ಷಿತ್ ಶೆಟ್ಟಿ ಅವರು, ಚಿತ್ರ ಪ್ರದರ್ಶನಕ್ಕೆ ಶೇ 100ರ ತೆರಿಗೆ ವಿನಾಯಿತಿ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದರು. ಇನ್‌ಬ್ರೀಡಿಂಗ್‌ನಿಂದಾಗಿ ಶ್ವಾನಗಳ ಸ್ವಾಸ್ಥ್ಯದ ಮೇಲಾಗುವ ಪರಿಣಾಮದ ಬಗ್ಗೆ ಸಿನಿಮಾದಲ್ಲಿ ಜಾಗೃತಿ ಮೂಡಿಸಲಾಗಿದ್ದು, ಬೀದಿ ನಾಯಿಗಳನ್ನು ದತ್ತು ಪಡೆಯುವ ಸಂದೇಶವನ್ನೂ ಸಾರಲಾಗಿದೆ. ಪ್ರಾಣಿ ಹಿಂಸೆಯ ಸೂಕ್ಷ್ಮವನ್ನೂ ಎತ್ತಿಹಿಡಿಯಲಾಗಿದೆ ಎಂದು ಮನವಿ ಪತ್ರದಲ್ಲಿ ನಿರ್ಮಾಪಕರು ಉಲ್ಲೇಖಿಸಿದ್ದರು. ಇದನ್ನು ಪರಿಗಣಿಸಿರುವ ಮುಖ್ಯಮಂತ್ರಿಗಳು, ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿದರೆ ಇನ್ನಷ್ಟು ಜನರಿಗೆ ಸಂದೇಶವನ್ನು ತಲುಪಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ರಕ್ಷಿತ್ ಶೆಟ್ಟಿ ಅಭಿನಯದ ಕನ್ನಡ ಸಿನಿಮಾ ‘777 ಚಾರ್ಲಿ’ಗೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ವಿನಾಯಿತಿ ನೀಡಿ ಕರ್ನಾಟಕ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.

ಜೂನ್ 19ರಿಂದ ಮೊದಲ್ಗೊಂಡು ಆರು ತಿಂಗಳವರೆಗೆ ‘777 ಚಾರ್ಲಿ’ ಸಿನಿಮಾಗೆ ಕೆಲವು ಷರತ್ತುಗಳೊಂದಿಗೆ ಎಸ್‌ಜಿಎಸ್‌ಟಿ ವಿನಾಯಿತಿ ನೀಡಲಾಗುತ್ತದೆ ಎಂದು ರಾಜ್ಯ ಹಣಕಾಸು ಇಲಾಖೆ ಬಿಡುಗಡೆ ಮಾಡಿರುವ ಆದೇಶದಲ್ಲಿ ತಿಳಿಸಲಾಗಿದೆ.

ಪ್ರದರ್ಶಕರು ಚಾರ್ಲಿ ಸಿನಿಮಾ ಟಿಕೆಟ್‌ಗೆ ರಾಜ್ಯ ಸರಕು ಮತ್ತು ಸೇವಾ ತೆರಿಗೆ ವಿಧಿಸಬಾರದು. ಜೂನ್ 19ರಿಂದ ಎಸ್‌ಜಿಎಸ್‌ಟಿ ಒಳಗೊಳ್ಳದ ಹೊಸ ದರ ಮುದ್ರಿಸಿರುವ ಟಿಕೆಟನ್ನೇ ಮಾರಾಟ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ.

Leave A Reply

Your email address will not be published.