ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗಾವಕಾಶ, ಡಿಗ್ರಿ
ಪಾಸಾದವರು ಅರ್ಜಿ ಸಲ್ಲಿಸಿ, ಅರ್ಜಿಗೆ ಜುಲೈ 10 ಕೊನೆ ದಿನ!

ಭಾರತದ ಸುಪ್ರೀಂ ಕೋರ್ಟ್ (SCI)ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿಯಿರುವ ಜೂನಿಯರ್ ಕೋರ್ಟ್ ಅಸಿಸ್ಟೆಂಟ್ (ಗುಂಪು ‘ಬಿ’ ನಾನ್-ಗೆಜೆಟೆಡ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು :
ಆನ್‌ಲೈನ್ ನೋಂದಣಿ ಪ್ರಾರಂಭವಾಗುವ ದಿನಾಕ: ಜೂನ್ 18, 2022
ಆನ್‌ಲೈನ್ ನೋಂದಣಿ ಕೊನೆಯ ದಿನಾಂಕ : ಜುಲೈ 10,
2022

ಹುದ್ದೆಯ ವಿವರಗಳು :
ಜೂನಿಯರ್ ಕೋರ್ಟ್ ಅಸಿಸ್ಟೆಂಟ್ (ಗ್ರೂಪ್ ‘ಬಿ’ ನಾನ್ ಗೆಜೆಟೆಡ್): 210 ಹುದ್ದೆಗಳು

ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ವೇತನ : ಆಯ್ಕೆಯಾದ ಅಭ್ಯರ್ಥಿಗಳನ್ನು ಪೇ ಮ್ಯಾಟ್ರಿಕ್ಸ್‌ನ ಹಂತ 6 ರಲ್ಲಿ ಆರಂಭಿಕ ಮೂಲ ವೇತನ ರೂ. 35,400/ ಸೇರಿದಂತೆ ಭತ್ಯೆಗಳ ಅಸ್ತಿತ್ವದಲ್ಲಿರುವ ದರದ ಪ್ರಕಾರ ಅಂದಾಜು ಒಟ್ಟು ವೇತನವು ರೂ. 63,068/ ತಿಂಗಳಿಗೆ (ಪೂರ್ವ-ಪರಿಷ್ಕೃತ ವೇತನ ಶ್ರೇಣಿ PB-2 ಗ್ರೇಡ್ ಪೇ ರೂ. 4200/-) ಸಿಗಲಿದೆ.

ಅರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪಡೆದಿರಬೇಕು. ಕನಿಷ್ಠ ಟೈಪಿಂಗ್ ವೇಗ 35 wpm ಇರಬೇಕು. ಇಂಗ್ಲಿಷ್‌ನಲ್ಲಿ ಕಂಪ್ಯೂಟರ್ ಟೈಪಿಂಗ್ ಜ್ಞಾನ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ?

100 ಅಂಕಗಳಿಗೆ ಆಪ್ಟೆಕ್ಟಿವ್ ಮಾದರಿ ಪ್ರಶ್ನೆಗಳ ಪ್ರಶ್ನೆ ಪತ್ರಿಕೆ, ಕಂಪ್ಯೂಟರ್ ಕುರಿತು 25 ಪ್ರಶ್ನೆಗಳು (ಅಬ್ಜೆಕ್ಟಿವ್ ಟೈಪ್), 10 ನಿಮಿಷ ಇಂಗ್ಲಿಷ್ ಟೈಪಿಂಗ್ ಟೆಸ್ಟ್, 2 ಗಂಟೆಗಳು ಇಂಗ್ಲಿಷ್ ಭಾಷೆಯಲ್ಲಿ (ಪ್ಯಾಸೇಜ್, ಪ್ರೀಸೈಸ್ ರೈಟಿಂಗ್, ಪ್ರಬಂಧ ಬರವಣಿಗೆ) ಡಿಸ್‌ಸ್ಕ್ರಿಪ್ಟಿವ್ ರೈಟಿಂಗ್ ಇರುತ್ತದೆ. ಈ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್ ಲಿಸ್ಟ್ ಸಿದ್ಧಪಡಿಸಿ, ಆಯ್ಕೆಪಟ್ಟಿ ಸಿದ್ಧಪಡಿಸಲಾಗುತ್ತದೆ.

ಅರ್ಜಿ ಶುಲ್ಕ : ಸಾಮಾನ್ಯ ಮತ್ತು OBC ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ರೂ. 500/-
ಎಸ್‌ಸಿ/ಎಸ್‌ಟಿ/ಮಾಜಿ ಸೈನಿಕರು/ಪಿಎಚ್/ಸ್ವಾತಂತ್ರ್ಯ ಹೋರಾಟಗಾರರ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ರೂ. 250

ಈ ಸದರಿ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಹೊರತುಪಡಿಸಿ ಇನ್ಯಾವುದೇ ವಿಧಾನದಲ್ಲಿ ಅರ್ಜಿ ಹಾಕಲು ಅವಕಾಶ ಇಲ್ಲ. ಅರ್ಜಿ ತುಂಬುವಾಗ ಸರಿಯಾದ ಮಾಹಿತಿಗಳನ್ನು ನೀಡಬೇಕು. ಹಾಗೂ ಕೇಳಲಾದ ದಾಖಲೆಗಳನ್ನು ತಪ್ಪದೇ ಅಪ್‌ಲೋಡ್ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.