ಬಾಡಿಗೆಗೆ ಕಾರು ಪಡೆದು ಬೀಚ್ ನಲ್ಲಿ ಮುಳುಗಿಸಿದ ಭೂಪ !!- ವೀಡಿಯೋ ವೈರಲ್

ಬಾಡಿಗೆಗೆ ಕಾರು ಪಡೆದ ಪ್ರವಾಸಿಗನೊಬ್ಬ ಅದನ್ನು ಗೋವಾದ ಬೀಚ್‍ನಲ್ಲಿ ಮುಳುಗಿಸಿ ಹುಚ್ಚಾಟ ಮೆರೆದಿದ್ದು, ಘಟನೆಯ ವೀಡಿಯೋ ಇದೀಗ ವೈರಲ್ ಆಗಿದೆ.

ದೆಹಲಿ ಮೂಲದ ಲಲಿತ್ ಕುಮಾರ್ ದಯಾಳ್ ಎಂಬಾತನೇ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿ ಪೇಚಿಗೆ ಸಿಲುಕಿರುವ ವ್ಯಕ್ತಿ. ಬಾಡಿಗೆಗೆ ಕಾರು ಪಡೆದುಕೊಂಡಿದ್ದ ಲಲಿತ್ ಕುಮಾರ್ ಅದನ್ನು ಕಡಲ ತೀರದಲ್ಲಿ ಚಲಾಯಿಸಿದ್ದಾನೆ. ಈ ವೇಳೆ ಕಾರು ನೀರಿನಲ್ಲಿ ಮುಳುಗಡೆಯಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಲಲಿತ್‍ಕುಮಾರ್ ಚಲಾಯಿಸುತ್ತಿದ್ದ ಕ್ರೇಟಾ ಕಾರು ಶೇಟಯೆವಾಡಾದ ಸಂಗೀತಾ ಗವಂಡಾಳಕರ್ಗೆ ಸೇರಿದೆ ಎಂದು ತಿಳಿದು ಬಂದಿದೆ. ಈ ಘಟನೆಯ ವೀಡಿಯೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಬಿರುಗಾಳಿಯ ವಾತಾವರಣದಲ್ಲಿ ಗೋವಾ ಕಡಲತೀರದಲ್ಲಿ ಹ್ಯುಂಡೈ ಕ್ರೆಟಾವನ್ನು ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಅದು ನೀರಿನಲ್ಲಿ ಮುಳುಗಡೆಯಾಗಿದೆ. ಅದನ್ನು ಮೆಲಕ್ಕೆತ್ತಲು ಯುವಕರ ಗುಂಪು ಹರಸಾಹಸಪಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

‘ಗೋವಾ ನೋಂದಣಿಯ ಹ್ಯುಂಡೈ ಕ್ರೆಟಾವನ್ನು ಬಾಡಿಗೆಗೆ ತೆಗೆದುಕೊಂಡು ಅದನ್ನು ಗೋವಾದ ನಿಷೇಧಿತ ಪ್ರದೇಶದಲ್ಲಿ ಓಡಿಸಲಾಗಿದೆ. ಕಾರು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಈ ಬಗ್ಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 ಮತ್ತು 336ರಡಿ ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದಲ್ಲದೆ ಕಾರು ಮಾಲೀಕರಾದ ಸಂಗೀತಾ ಗಾವಡಾಳ್ಕರ್ ವಿರುದ್ಧ ಮಾಪುಸಾದ ಪೊಲೀಸರು ಆರ್‌ಟಿಒಗೆ ವರದಿ ಸಲ್ಲಿಸಿದ್ದಾರೆ. ವಾಹನ ಮಾಲೀಕರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ದೇಶದ ದಕ್ಷಿಣ ಭಾಗದಲ್ಲಿ ಮುಂಗಾರು ಮಳೆ ಅಬ್ಬರವಿದ್ದು, ಗೋವಾದ ಭಾಗಗಳಲ್ಲಿಯೂ ಮಳೆಯಾಗುತ್ತಿದೆ. ಹೀಗಾಗಿ ಗೋವಾದ ಕಡಲತೀರಗಳಲ್ಲಿ ವಾಹನ ಚಲಾವಣೆ ನಿಷೇಧಿಸಲಾಗಿದೆ. ಆದರೆ, ಹೊರಗಿನ ಪ್ರವಾಸಿಗರು ನಿಷೇಧಿತ ಪ್ರದೇಶಗಳಲ್ಲಿ ವಾಹನ ಚಲಾಯಿಸಿ ಹುಚ್ಚಾಟ ಮೆರೆಯುತ್ತಿದ್ದಾರೆ.

error: Content is protected !!
Scroll to Top
%d bloggers like this: