ರೈಲಿಗೆ ಬೆಂಕಿ ಹಾಕಿ ಸುಡುವವರು ಸೇನೆಗೆ ಬೇಡ – ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ವಿ. ಪಿ ಮಲ್ಲಿಕ್

ದೇಶದಲ್ಲಿ ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ ಅಗ್ನಿಪಥ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ನಡುವೆ ‘ಅಗ್ನಿಪಥ್ ನೇಮಕಾತಿ ಯೋಜನೆಗೆ’ ಕಾರ್ಗಿಲ್ ಯುದ್ಧದಲ್ಲಿ ವಿಜಯಸಾಧಿಸಲು ಕಾರಣವಾದ ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ. ಪಿ ಮಲ್ಲಿಕ್ ಅವರು ಬೆಂಬಲಿಸಿದ್ದು, ಯೋಜನೆ ವಿರುದ್ಧ ಪ್ರತಿಭಟನೆ ನಡೆಸಲು ಕಾರಣರಾದವರನ್ನು ಅಲ್ಪಾವಧಿ ಸೇವೆಗೆ ನೇಮಕ ಮಾಡಿಕೊಳ್ಳುವ ಆಸಕ್ತಿ ಭಾರತೀಯ ಸೇನೆಗೆ ಇಲ್ಲ ಎಂದು ಗುಡುಗಿದ್ದಾರೆ.


Ad Widget

Ad Widget

ರಾಷ್ಟ್ರ ರಾಜಧಾನಿ ದೆಹಲಿ, ಬಿಹಾರ್, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಸೇನೆಗೆ ಸೇರಬಯಸಿದ್ದ ಆಕಾಂಕ್ಷಿಗಳು ಕೇಂದ್ರ ರಕ್ಷಣಾ ಇಲಾಖೆ ತಂದ ಅಲ್ಪಾವಧಿ ನೇಮಕ ನಿಯಮ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ಪ್ರತಿಭಟನೆ ಇದೀಗ ಹಿಂಸಾತ್ಮಕ ಆಯಾಮ ಪಡೆದುಕೊಂಡಿದೆ.


Ad Widget

ಅಗ್ನಿಪಥ್ ನೇಮಕಾತಿ ಯೋಜನೆ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಸಾರ್ವಜನಿಕರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಸ್, ವಾಹನಗಳ ಕಿಟಕಿ ಗ್ಲಾಸು ಒಡೆದು, ರಸ್ತೆ ಹಾಗೂ ರೈಲು ತಡೆದು ಸಂಚಾರಕ್ಕೆ ವ್ಯತ್ಯಯ ಮಾಡಿದ್ದಾರೆ. ಕೆಲವೆಡೆ ಬೆಂಕಿ ಹಚ್ಚಿದ ವರದಿಗಳು ಆಗಿವೆ. ಪ್ರತಿಭಟನೆ ಹೆಸರಿನಲ್ಲಿ ಈ ರೀತಿ ಹಿಂಸಾತ್ಮಕ ಕೃತ್ಯಗಳಿಗೆ ಕಾರಣರಾಗಿರುವ ಆ ಭಾಗದ ಆಕಾಂಕ್ಷಿಗಳನ್ನು ಸೇನೆಗೆ ಸೇರಿಸಿಕೊಳ್ಳುವ ಆಸಕ್ತಿ ಭಾರತೀಯ ಸೇನೆಗೆ ಇಲ್ಲ ಎಂದು ಜನರಲ್ ವಿ.ಪಿ. ಮಲ್ಲಿಕ್ ತಿಳಿಸಿದ್ದಾರೆ.

ಸಶಸ್ತ್ರ ಪಡೆ ಎಂಬುದು ಅದೊಂದು ಕಲ್ಯಾಣ ಸಂಘಟನೆಯಲ್ಲಿ ದೇಶಕ್ಕಾಗಿ ಹೋರಾಡುವ ವ್ಯಕ್ತಿಗಳನ್ನು ಹೊಂದಿರುವ ಪಡೆ. ಹೀಗಾಗಿ ಸಶಸ್ತ್ರ ಪಡೆಯನ್ನು ನಾವು ಸ್ವಯಂ ಸೇವಕ ಪಡೆ ಎಂದು ಭಾವಿಸೋಣ. ದೇಶಭಕ್ತರೇ ಹೊಂದಿರಬೇಕಾದ ಇಂತಹ ಸಶಸ್ತ್ರ ಪಡೆಗೆ ಗೂಂಡಾಗಿರಿಗೆ, ಪ್ರತಿಭಟನೆ ಹೆಸರಿನಲ್ಲಿ ಬೆಂಕಿ ಹಚ್ಚುವುದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿ ಹಿಂಸಾಚಾರಕ್ಕೆ ಕಾರಣವಾದವರು ಸೇನೆಗೆ ಅಗತ್ಯವಿಲ್ಲ. ಅಲ್ಲದೇ ಪ್ರತಿಭಟನೆಯಲ್ಲಿ ಕೆಲವರು ಅಲ್ಪಾವಧಿ ಸೇವೆ ಸಲ್ಲಿಸಲು ಅರ್ಹರಲ್ಲದ, ನಿಗದಿತ ವಯಸ್ಸು ಮೀರಿದವರು ಇದ್ದಾರೆ ಎಂದು ಇದೇ ವೇಳೆ ಹೇಳಿದ್ದಾರೆ.

Ad Widget

Ad Widget

Ad Widget

ಕೆಲವು ವರ್ಷಗಳ ಹಿಂದೆ ಒಂದು ಶ್ರೇಣಿ ಮತ್ತು ಒಂದು ಪಿಂಚಣಿ ಯೋಜನೆ ಜಾರಿಗೆ ತಂದಾಗಿ ಇದೇ ರೀತಿ ಹಲವೆಡೆ ಪ್ರತಿಭಟನೆ ನಡೆದಿದ್ದವು. ಆಗ ಪ್ರಧಾನಿ ನರೇಂದ್ರ ಮೋದಿ ಇದೊಂದು ಸಶಸ್ತ್ರ ಪಡೆಯು ನಿವೃತ್ತರಿಗೆ ನೀಡುವ ಏಕರೂಪದ ಪಿಂಚಣಿ ಯೋಜನೆಯಾಗಿದೆ ಎಂದಿದ್ದರು. ಪೊಲೀಸ್ ಮತ್ತು ಅರೆ ಸೇನಾಪಡೆಗೆ ಉದ್ಯೋಗ ಕುರಿತು ಯಾರು ಆತಂಕಪಡಬಾರದು ಎಂದು ನೀಡಿದ ಹೇಳಿಕೆಯನ್ನು ಮಲ್ಲಿಕ್ ಸ್ಮರಿಸಿದರು.

ಅಗ್ನಿಪಥ್ ನೇಮಕಾತಿ ಯೋಜನೆಯಲ್ಲಿ ಸಾಕಷ್ಟು ಸಕರಾತ್ಮಕ, ಉತ್ತಮ ಅಂಶಗಳು ಇವೆ. ನಾಲ್ಕು ವರ್ಷದ ಬಳಿಕ ಸೇನೆಯಿಂದ ಹೊರಬಂದವರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಕಾರಣ ಅಲ್ಪಾವಧಿಗೆ ಸೇವೆಗೆ ನೇಮಿಸಿಕೊಳ್ಳುವಾಗ ಸುಶಿಕ್ಷಿತ ಮತ್ತು ಪ್ರತಿಭಾನ್ವಿತರನ್ನೇ ಆಯ್ಕೆ ಮಾಡಿಕೊಂಡಿರುತ್ತೇವೆ. ಹೀಗಾಗಿ ಯಾವುದೇ ಸಮಸ್ಯೆ ಆಗುವುದಿಲ್ಲ. ವಿನಾಃ ಕಾರಣ ಗೊಂದಲದ ಅಗತ್ಯತೆ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

error: Content is protected !!
Scroll to Top
%d bloggers like this: