ತಕ್ಷಣದಿಂದ ಭಾರತ್ ಲೈಮ್ ಬಳಸದಂತೆ ಬೆಳೆಗಾರರಿಗೆ ಮನವಿ

ಭಾರತ್ ಲೈಮ್ ಎಂಬ ಬ್ರಾಂಡ್ ನ ಸುಣ್ಣವನ್ನು ಕಾಳುಮೆಣಸು,ಅಡಿಕೆ,ಕಾಫಿಯ ಕೊಳೆ ರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣ ತಯಾರಿಸಲು ಕೆಲವು ಬೆಳೆಗಾರರು ಬಳಸಿದ್ದು,ಬಳಸಿದ ಸಂದರ್ಭ ಬೆಳೆಗಳ ಮೇಲೆ ದುಷ್ಪರಿಣಾಮ ಬೀರಿದ್ದು,ಅಡಿಕೆ ಫಸಲು,ಕಾಳುಮೆಣಸು ಬಳ್ಳಿಗಳು ಮತ್ತು ಕಾಫಿ ಹರಸಿನ ಬಣ್ಣಕ್ಕೆ ತಿರುಗಿ ಎಲೆ ಹಾಗೂ ಫಸಲು ಉದುರಿರುವ ಪ್ರಕರಣ ಕಂಡು ಬಂದಿದೆ.ಆದ್ದರಿಂದ ಈ ಸುಣ್ಣವನ್ನು ಬೆಳೆಗಾರರು ಬಳಸದಂತೆ ಎಚ್ಚರವಹಿಸಬೇಕು.ಈ ನಿಟ್ಟಿನಲ್ಲಿ ಕೃಷಿ ಇಲಾಖೆ ಸಹ ತುರ್ತು ಆದೇಶ ಹೊರಡಿಸಿದ್ದು,ಈ ಬ್ರಾಂಡ್ ನ ಸುಣ್ಣ ಬಳಸದಂತೆ ಮತ್ತು ಏಜೆನ್ಸಿ ಅವರು ಮಾರಟ ಮಾಡದಂತೆ ಪ್ರಕಟಣೆ ಮೂಲಕ ತಿಳಿಸಿದೆ.

ಹಾಗೆಯೇ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು,ಅಧಿಕಾರಿಗಳು ಈ ಸುಣ್ಣ ಬಳಸಿ ಬೆಳೆ ನಷ್ಟಗೊಂಡಿರುವ ಬೆಳೆಗಾರರ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಈ ಸುಣ್ಣದ ಮಾದರಿ ಇರುವವರು ದಯವಿಟ್ಟು ಕೆ.ವಿ.ಕೆ.ಕೇಂದ್ರದ ವಿಜ್ಞಾನಿ/ಅಧಿಕಾರಿಗಳಿಗೆ ನೀಡಿ ಅದರ ph ಮಟ್ಟ ಪರಿಶೀಲನೆ ಮತ್ತು ಬೆಳೆಗಳ ಮೇಲೆ ದುಷ್ಪರಿಣಾಮ ಬೀರಲು ಉಂಟಾಗಿರುವ ಕಾರಣ ಪತ್ತೆಹಚ್ಚಲು ಸಹಕಾರ ನೀಡಲು ಈ ಮೂಲಕ ಕೋರಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಪುತ್ತೂರು ಮೂಲದ ಈ ಸುಣ್ಣವನ್ನು ರಾಜಸ್ತಾನದಿಂದ ತರಿಸಿಕೊಂಡು ಪುತ್ತೂರಿನಲ್ಲಿ ಪ್ಯಾಕ್ ಮಾಡಲಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಕೊಡಗು ಬೆಳೆಗಾರ ಒಕ್ಕೂಟ ತಿಳಿಸಿದೆ.

error: Content is protected !!
Scroll to Top
%d bloggers like this: