ನಿಮ್ಮ ಸೆಕ್ಸ್ ಲೈಫ್ ಸ್ಪೈಸೀ ಆಗಿರಬೇಕಾದರೆ ಅದರ ಬಣ್ಣ ಬದಲಿಸಿ !

ಯಾವುದೇ ನವದಂಪತಿಗಳಿಗೆ ಇರಲಿ ಸೆಕ್ಸ್ ಲೈಫ್ ಬಹಳ ಮುಖ್ಯವಾಗಿರುತ್ತದೆ. ಹೊಸದಾಗಿ ಮದುವೆಯಾದವರಿಗೆ ಅದರಲ್ಲಿ ಸಹಜವಾಗಿ ಒಂದು ತೀವ್ರ ಆಸಕ್ತಿ ಇದ್ದೇ ಇರುತ್ತದೆ. ಏನಾದ್ರೂ ಮಾಡಿ, ಹೇಗಾದ್ರೂ ಸರಿ ಸೆಕ್ಸ್ ಅನ್ನು ಇನ್ನಷ್ಟು ಸ್ಪೈಸಿ ಮಾಡಿ, ಅದರ ಪೂರ್ತಿ ಸವಿ ಅನುಭವಿಸುವ ಆತುರ ಅವರಲ್ಲಿ ಇರುತ್ತದೆ. ಅದಕ್ಕೆ ನೂರಾರು ಟೆಕ್ನಿಕ್ ಗಳಿವೆ. ಅಂತಹ ಒಂದು ಸಣ್ಣ ಟಿಪ್ಸ್ ಇವತ್ತು ನಾವಿಲ್ಲಿ ಕೊಡ್ತಿದ್ದೇವೆ ಕೇಳಿ.

ನಿಮ್ಮ ಸೆಕ್ಸ್ ಲೈಫ್ ಯಾಕೋ ಸರಿಹೋಗ್ತಾ ಇಲ್ಲ ಅಂದರೆ ನೀವು ತಕ್ಷಣ ಅದರ ಬಣ್ಣ ಬದಲಿಸುವ ಕಡೆ ಗಮನ ಕೊಡಬೇಕು. ಪ್ರತಿ ಬಣ್ಣಗಳಿಗೂ ಅದರದ್ದೇ ಆದ ಆದ ಮೂಡು ಇರುತ್ತದೆ. ಈಗ ನಿಮ್ಮ ಮಲಗುವ ಕೋಣೆಯ ಗೋಡೆಗಳ ಬಣ್ಣಕ್ಕೆ ಸ್ವಲ್ಪ ಗಮನ ಕೊಡುವುದು ತೀರಾ ಅಗತ್ಯ. ಮಲಗುವ ಕೋಣೆಯ ಗೋಡೆಗಳ ಬಣ್ಣ ಮತ್ತು ಲೈಂಗಿಕತೆಯ ನಡುವೆ ಸಂಬಂಧವಿದೆ ಎಂದು ಇತ್ತೀಚಿನ ಅಧ್ಯಯನ‌ ಹೇಳುತ್ತೆ. ಬೆಡ್‌ರೂಮ್‌ನಲ್ಲಿ ಬಳಸುವ ಒಂದಿಷ್ಟು ಬಣ್ಣಗಳು, ನಿಮ್ಮ ಸೆಕ್ಸ್ ಲೈಫ್ ಮೇಲೆ ವರ್ಣ ವರ್ಣದ ಚಿತ್ತಾರ ಹೇಗೆ ಬೀರಬಲ್ಲುದು ಎಂಬ ಡೀಟೇಲ್ ಇಲ್ಲಿದೆ.

ಹೆಚ್ಚಿನವರಿಗೆ ಕೆಂಪು ಅಥವಾ ಗುಲಾಬಿ ಬಣ್ಣವನ್ನು ಬೆಡ್ ರೂಮ್‌ನ ಗೋಡೆಗೆ ಹಾಕಿದರೆ ಸೆಕ್ಸ್ ಲೈಫ್ ಚೆನ್ನಾಗಿರುತ್ತೆ ಎಂಬ ಭಾವನೆ ಇರುತ್ತೆ. ಆದರೆ ನೀಲಿ ಬಣ್ಣದ ಬಗ್ಗೆ ಯಾರೂ ಚಿಂತಿಸುವುದಿಲ್ಲ. ಬೆಡ್ ರೂಮ್‌ನ ಗೋಡೆ ಬಣ್ಣ ನೀಲಿ ಆಗಿದ್ದರೆ ಶಾಂತತೆ ಜೊತೆಗೆ, ಚೆನ್ನಾಗಿ ನಿದ್ದೆ ಮನಸ್ಸಿನ ಕಿರಿಕಿರಿ ಕಡಿಮೆ ಆಗೋದು ಪಕ್ಕಾ. ಜೊತೆಗೆ ನೀಲಿ ರಕ್ತದೊತ್ತಡ ಮತ್ತು ಹೃದಯ ಬಡಿತದ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ನೀಲಿ ಬಣ್ಣದ ಗೋಡೆಯಲ್ಲಿ ಕ್ಯಾರಮಲ್ ಡೆಕೊರೇಶನ್ ಇದ್ದರೆ ದಂಪತಿಗಳ ನಡುವೆ ಲೈಂಗಿಕತೆ ಚೆನ್ನಾಗಿರುತ್ತದೆಯಂತೆ. ಹೀಗಿದ್ದರೆ ದಂಪತಿಗಳು ವಾರಕ್ಕೆ ಕನಿಷ್ಟ ಸರಾಸರಿ ಮೂರು ಬಾರಿ ಭರ್ಜರಿಯಾಗಿ ಕೇಳಿ ಆಚರಿಸುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ.

ನೇರಳೆ ಬಣ್ಣ ಬೆಡ್ ರೂಮ್‌ಗೆ ಹೇಳಿ ಮಾಡಿಸಿದ್ದು. ಇದು ಐಷಾರಾಮಿ, ಗುಣಮಟ್ಟ, ಸಂಪತ್ತು ಮತ್ತು ರಾಜ ಧನವನ್ನು ಸೂಚಿಸುತ್ತದೆ. ಇದು ಗಂಡ ಹೆಂಡತಿ ನಡುವಿನ ಅನ್ಯೋನ್ಯತೆಗೆ ಕಾರಣವಾಗುತ್ತದೆ. ಆದ್ದರಿಂದ, ಈ ಬಣ್ಣವನ್ನು ಇಷ್ಟಪಡುವವರು ಮರು ಯೋಚಿಸದೇ ಬೆಡ್ ರೂಮ್‌ಗೆ ಈ ಬಣ್ಣ ಬಳಿಯಬಹುದು. ಈ ಬಣ್ಣ ನಿಮ್ಮ ಲೈಂಗಿಕತೆಯ ಆಸಕ್ತಿಯನ್ನು ಹೆಚ್ಚಿಸುತ್ತದೆ. ಸೆಕ್ಸ್ ಲೈಫ್ ಚೆನ್ನಾಗಿರಲು ಈ ಬಣ್ಣ ಅತ್ಯುತ್ತಮ. ಲೈಂಗಿಕ ಬದುಕು ಚೆನ್ನಾಗಿಲ್ಲ ಎಂದು ಕೊರಗುವವರು, ಇನ್ನಷ್ಟು ಚೆನ್ನಾಗಾಗಬೇಕು ಅನ್ನೋ ಆಸೆಬುರುಕರು ಬೆಡ್ ರೂಮ್‌ನ ಗೋಡೆಗೆ ಈ ಬಣ್ಣ ಬಳಿದು ನೋಡಿ. ಆಕೆ ನಿಮ್ಮನ್ನು ಬಳ್ಳಿಯಂತೆ ಬಿಗಿಯಾಗಿ ಸುತ್ತಿ ಕೊಳ್ಳುತ್ತಾಳೆ. ಆ ನಂತರ ನಿಮ್ಮ ಪತಿ ರಾತ್ರಿಗಳು ಕೂಡ ನಿದ್ರಾಹೀನ ರಾತ್ರಿಗಳಾಗುವುದರಲ್ಲಿ ಅನುಮಾನವಿಲ್ಲ.

ಇನ್ನೊಂದು ಬಣ್ಣವಿದೆ. ಇದು ಲೈಂಗಿಕ ಶಕ್ತಿಯನ್ನು ಪ್ರಚೋದಿಸುವ ಬಣ್ಣ. ಮದುವೆಯಾಗಿ ಕೊಂಚ ಸಮಯವಾದ ಬಳಿಕ ಹೆಚ್ಚಿನ ದಂಪತಿಗಳಲ್ಲಿ ಲೈಂಗಿಕ ಆಸಕ್ತಿ ಕಡಿಮೆ ಆಗುತ್ತಾ ಬರುತ್ತದೆ. ಆದರೆ ಈ ನೇರಳೆ ಬಣ್ಣ ಉಂಟಲ್ಲ, ಅದು ಲೈಂಗಿಕ ಆಸಕ್ತಿ ಕಡಿಮೆ ಆಗೋದಕ್ಕೆ ಬಿಡಲ್ಲ. ಅದನ್ನು ಪ್ರಚೋದಿಸುತ್ತಲೇ ಇರುತ್ತದೆ ಎನ್ನುತ್ತದೆ ಅಧ್ಯಯನ. ಇನ್ನೇನು ಬೇಕು, ಕಾಮಣ್ಣ ಫುಲ್ ಖುಷ್ !

ಉತ್ತಮ ನಿದ್ರೆಯನ್ನು ಉತ್ತೇಜಿಸುವಲ್ಲಿ ಹಳದಿ ಶೇಡ್ ಎರಡನೇ ಪಡೆದುಕೊಂಡಿದೆ. ಬೆಚ್ಚಗಿನ ಫೀಲ್ ಕೊಡುವ ಹಳದಿ ಬಣ್ಣ ನರಮಂಡಲವನ್ನು ಉತ್ತೇಜಿಸುವ ಮತ್ತು ನರಗಳನ್ನು ಶಾಂತಗೊಳಿಸುವ ಮೂಲಕ ದೇಹವನ್ನು ವಿಶ್ರಾಂತಿ ಮಾಡುತ್ತದೆ. ಈ ಬಣ್ಣ ಲೈಂಗಿಕ ಬದುಕಿನ ಮೇಲೆ ಹೆಚ್ಚು ಪರಿಣಾಮ ಬೀರಲ್ವಂತೆ. ಹಾಗಾಗಿ ಈ ಬಣ್ಣವನ್ನು ಹಿರಿಯರ ಕೋಣೆಗೆ, ಸಿಂಗಲ್ ಆಗಿರುವವರ ಕೋಣೆಗೆ ಬಳಿಬಹುದು. ಆದರೆ ಮದುವೆಯಾದವರ ಬೆಡ್‌ರೂಮ್‌ಗೆ ಈ ಬಣ್ಣ ಬಳಸಿದರೆ ಸೆಕ್ಸ್ ಲೈಫ್ ಮೇಲೆ ಅಂಥಾ ಪರಿಣಾಮ ಬೀರೋದಿಲ್ಲ.

ಬೂದು ಅಥವಾ ಬೆಳ್ಳಿ ಬಣ್ಣ ಇದು ಚಂದ್ರನನ್ನು ನೆನಪಿಸುವ ಬಣ್ಣ. ಹಿತವಾದ ಬೆಳ್ಳಿಯ ಬಣ್ಣದ ಮಲಗುವ ಕೋಣೆ ಚಂದ್ರನ ಬೆಳಕನ್ನು ಪ್ರತಿಬಿಂಬಿಸುತ್ತದೆ ಎಂದು ಸಮೀಕ್ಷೆಯು ಹೇಳುತ್ತದೆ. ಇದು ನಿದ್ರೆಗೆ ಅನುಕೂಲ. ಒಂದಿಷ್ಟು ಜನ ಈ ಬಣ್ಣದ ಬೆಡ್ ರೂಮ್ ಇದ್ದಾಗ ವ್ಯಾಯಾಮಗಳನ್ನು ಹೆಚ್ಚೆಚ್ಚು ಮಾಡುತ್ತಾರೆ. ಇದರಲ್ಲಿ ಸೆಕ್ಸ್ ಲೈಫ್ ಸಾಧಾರಣವಾಗಿರುತ್ತೆ. ಆದರೆ ಸೆಕ್ಸ್ ನಲ್ಲಿ ಹೊಸ ಹೊಸ ಪ್ರಯೋಗ ಮಾಡಲು ಈ ಬಣ್ಣ ಪ್ರೇರಣೆ ನೀಡುತ್ತದೆ.
ಎಲ್ಲಾ ಸರಿ, ಪದೇ ಪದೇ ರೂಮಿನ ಬಣ್ಣ ಮತ್ತು ಬೆಡ್ಡಿನ ಬಣ್ಣ ಬದಲಿಸಿದರೆ ಹೇಗೆ ? ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ, ಅದಕ್ಕೆ ನಮ್ಮ ಉತ್ತರ ಒಂದೇ : ನಿಮ್ಮಷ್ಟು ರಸಿಕ ಮಹಾಶಯ ಬೇರೆ ಯಾರೂ ಇರಲಿಕ್ಕಿಲ್ಲ !!!

Leave A Reply

Your email address will not be published.