ಇನ್ನು ಮುಂದೆ ಕಾಮನಬಿಲ್ಲು ಬಣ್ಣದ ಆಟಿಕೆ ಹಾಗೂ ಉಡುಪುಗಳಿಗೆ ನಿರ್ಬಂಧ

ಸೌದಿ ಅರೇಬಿಯಾ : ಸೌದಿ ಅರೇಬಿಯಾದಲ್ಲಿ ಅಧಿಕಾರಿಗಳು ಕಾಮನಬಿಲ್ಲಿನ ಬಣ್ಣದ ಆಟಿಕೆಗಳು ಹಾಗೂ ಮಕ್ಕಳ ಉಡುಪುಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಸರ್ಕಾರಿ ಸುದ್ದಿ ವಾಹಿನಿ ಅಲ್ ಎರಿಯಾ ತಿಳಿಸಿದೆ.

ಈ ಬಣ್ಣದ ವಸ್ತುಗಳು ಇಸ್ಲಾಮಿಕ್ ನಂಬಿಕೆ ಹಾಗೂ ಸಾರ್ವಜನಿಕರ ನೈತಿಕತೆಗೆ ವಿರುದ್ಧವಾಗಿದೆ. ಇದೊಂದು ಸಲಿಂಗಕಾಮಿ ಬಣ್ಣವಾಗಿದ್ದು ಯುವ ಪೀಳಿಗೆಯನ್ನು ಉತ್ತೇಜಿಸುತ್ತದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಹೀಗಾಗಿ ಈ ಬಣ್ಣದ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ದಂಡ ತೆರಬೇಕಾಗುತ್ತದೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.”ಸಲಿಂಗಕಾಮ ಧ್ವಜವು ರಿಯಾದ್ ಮಾರುಕಟ್ಟೆಯೊಂದರಲ್ಲಿದೆ.” ಈ ಬಣ್ಣಗಳು ಮಕ್ಕಳಿಗೆ ಕೆಟ್ಟ ಸಂದೇಶವನ್ನು ರವಾನಿಸುತ್ತವೆ ಎಂದು ವರದಿ ಹೇಳಿದೆ.

Leave A Reply

Your email address will not be published.