6 ಮಂದಿ ಬೀದಿ ಕಾಮುಕರನ್ನು ಹೊಡೆದುರುಳಿಸಿದ ಧೀರ ಯುವತಿ, ವೀಡಿಯೋ ವೈರಲ್!!!

ಸಮಾಜ ಎಷ್ಟೇ ಮುಂದುವರಿದರೂ, ಮಹಿಳೆಯರು ತಮ್ಮ ಆತ್ಮರಕ್ಷಣೆಗಾಗಿ ಸದಾ ಸಿದ್ಧವಾಗಿರಬೇಕು. ಹೌದು.  ಏಕೆಂದರೆ ಯಾವಾಗ ಏನಾಗುತ್ತದೆ ಎಂದು ಹೇಳಲಾಗುವುದಿಲ್ಲ. ಅಂತಹ ಒಂದು ಭಯದ ಸಮಾಜದಲ್ಲಿ ನಾವೆಲ್ಲರೂ ಇದ್ದೇವೆ. ಏಕೆಂದರೆ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧ  ಪ್ರಕರಣಗಳು ದಿನದಿಂದ ದಿನಕ್ಕೆ‌ ಹೆಚ್ಚುತ್ತಲೇ ಇದೆ.  ಅದರಲ್ಲೂ ಒಂಟಿಯಾಗಿ ಓಡಾಡವ ಹೆಂಗಸರು ಈ ವಿಷಯವನ್ನು ಮೊದಲು ಮನದಟ್ಟು ಮಾಡಬೇಕು.  ಹೀಗಾಗಿ ಆತ್ಮರಕ್ಷಣೆಗಾಗಿ ಸದಾ ಸಿದ್ಧವಾಗಿರಬೇಕು ಎಂಬುದಕ್ಕೆ ಈ ವೀಡಿಯೋವೇ ಸಾಕ್ಷಿ. ಈ ವೀಡಿಯೋದಲ್ಲಿ ಯುವತಿಯೊಬ್ಬಳಿಗೆ ಆರು ಮಂದಿ ಯುವಕರು ಕಿರುಕುಳ‌ನೀಡುತ್ತಿದ್ದಾರೆ. ಮೊದಲಿಗೆ ಆಕೆ  ಭಯಗೊಂಡರೂ ಆ ಬಳಿಕ ಯುವತಿ ಆರು ಮಂದಿ ಬೀದಿ ಕಾಮುಕರನ್ನು ಸದೆಬಡಿದಿದ್ದಾಳೆ.

ಈ ವೀಡಿಯೋದಲ್ಲಿ ಒಬ್ಬಂಟಿಯಾಗಿ ಹೋಗುತ್ತಿದ್ದ ಈ ಯುವತಿಯನ್ನು ಯುವಕರ ಗುಂಪೊಂದು ಹಿಂಬಾಲಿಸಿದ್ದು, ಈ ವೇಳೆ ತನ್ನ ಸಮರಕಲೆಯನ್ನು ಪ್ರದರ್ಶಿಸಿ ತನ್ನ ಧೀರತನವನ್ನು ಮೆರೆದಿದ್ದಾಳೆ. ಈ ಮೂಲಕ ಯುವತಿ ಸ್ವಯಂ ರಕ್ಷಣೆ ಪಡೆದುಕೊಂಡಿದ್ದಾಳೆ. ಅದರಲ್ಲೂ 6 ಮಂದಿಯನ್ನು ಹಟ್ಟಾ ಕಟ್ಟಾ ಯುವಕರನ್ನು ಫೈಯಿಂಗ್ ಕಿಕ್ ಮೂಲಕ ಹೊಡೆದುರುಳಿಸಿದ್ದು ವಿಶೇಷ. ಅಂದರೆ ಯುವತಿಯು ಅತ್ಯುತ್ತಮ ಸಮರ ಕಲೆಯನ್ನು ಕರಗತ ಮಾಡಿಕೊಂಡಿರುವುದು ಸ್ಪಷ್ಟ. ಈ ಮೂಲಕ ಪುಂಡರ ಗ್ಯಾಂಗ್‌ನಿಂದ ತನ್ನನ್ನು ತಾನೇ ರಕ್ಷಿಸಿಕೊಂಡಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಯಾವ ದೇಶದ್ದು ಎಂಬುದು ಸ್ಪಷ್ಟವಾಗಿಲ್ಲ. ಆದರೂ ಯುವತಿಯ ಸಾಹಸಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

error: Content is protected !!
Scroll to Top
%d bloggers like this: