ಮಗುವಿನೊಂದಿಗೆ ಮಹಿಳೆ ನಾಪತ್ತೆ!!!

ಎರಡು ವರ್ಷ ಏಳು ತಿಂಗಳ ಹೆಣ್ಣು ಮಗುವಿನೊಂದಿಗೆ ಮಹಿಳೆಯೊಬ್ಬರು ಮನೆಯಿಂದ ಹೊರ ಹೋಗಿದ್ದು ಮರಳಿ ಬಂದಿಲ್ಲ. ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆ ಮಂದಿಯಲ್ಲಿ ಹೇಳಿದ್ದಾರೆ. ಈ ನಾಪತ್ತೆ ಘಟನೆ ಕೊಡಗು ಜಿಲ್ಲೆ ಶುಂಠಿಕೊಪ್ಪ ಸಮೀಪದ ಗರಗಂದೂರು ಗ್ರಾಮದ ಮಲ್ಲಿಕಾರ್ಜುನ ಕಾಲೋನಿಯಲ್ಲಿ ನಡೆದಿದೆ.

ದಿನೇಶ್ ರವರ ಪತ್ನಿ ಸೌಮ್ಯ ರವರು ದಿನಾಂಕ 14-06 2022ರಂದು ಬೆಳಗ್ಗೆ 10 ಗಂಟೆಗೆ ಶುಂಠಿಕೊಪ್ಪ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ, ಎರಡು ವರ್ಷ ಏಳು ತಿಂಗಳ ಹೆಣ್ಣು ಮಗುವಿನೊಂದಿಗೆ ಹೊರ ಹೋದವರು ನಂತರ ಮನೆಗೆ ಹಿಂತಿರುಗಿ ಬಾರದೇ ಕಾಣೆಯಾಗಿದ್ದಾರೆ. ಇವರ ಇರುವಿಕೆಯ ಬಗ್ಗೆ ಮಾಹಿತಿ ತಿಳಿದಲ್ಲಿ ಈ ಕೆಳಗಿನ ಮೊಬೈಲ್ ಅನ್ನು ಸಂಪರ್ಕಿಸಲು ಕೋರಿಕೊಳ್ಳಲಾಗಿದೆ. ಮೊಬೈಲ್: 8197690456, 6360631885


Ad Widget

Ad Widget

Ad Widget

Ad Widget

Ad Widget

Ad Widget
error: Content is protected !!
Scroll to Top
%d bloggers like this: