ಅವಳಿ ಮಕ್ಕಳ ಪಾದ ಹಿಡಿದು ಮುದ್ದಾಡಿದ ನಟಿ ಅಮೂಲ್ಯ !!- ಫೋಟೋ ವೈರಲ್

ಚಂದನವನದ ನಟಿ ಅಮೂಲ್ಯ ಮೊದಲ ಬಾರಿಗೆ ತಮ್ಮ ಮುದ್ದು ಮಕ್ಕಳ ಫೋಟೋ ಶೇರ್ ಮಾಡಿದ್ದಾರೆ. ಮಾರ್ಚ್‌ನಲ್ಲಿ ಅವಳಿ ಮಕ್ಕಳಿಗೆ ತಾಯಿಯಾದ ಅಮೂಲ್ಯ ಇಲ್ಲಿಯವರೆಗೆ ಮಕ್ಕಳ ಯಾವುದೇ ಫೋಟೋ ಹಂಚಿಕೊಂಡಿರಲಿಲ್ಲ. ಇದೀಗ ನಟಿ ಶೇರ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಬಾಲನಟಿಯಾಗಿ, ಚಂದನವನದ ಗೋಲ್ಡನ್ ಕ್ವೀನ್ ಆಗಿ ಸಾಕಷ್ಟು ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದ ನಟಿ ಅಮೂಲ್ಯ, ಗಾಂಧಿನಗರದಲ್ಲಿ ಡಿಮ್ಯಾಂಡ್ ಇರುವಾಗಲೇ 2017ರಲ್ಲಿ ಜಗದೀಶ್ ಆರ್. ಚಂದ್ರ ಜೊತೆ ಹಸೆಮಣೆ ಏರಿದ್ದರು. ಬಳಿಕ ಮದುವೆ, ಸಂಸಾರ ಅಂತಾ ಬ್ಯುಸಿಯಿದ್ದ ನಟಿ ಈ ವರ್ಷ ಮಾರ್ಚ್‌ನಲ್ಲಿ ಅವಳಿ ಮಕ್ಕಳಿಗೆ ತಾಯಿಯಾದರು. ಇದೀಗ ಮೊದಲ ಬಾರಿಗೆ ಮಕ್ಕಳ ಜೊತೆಯಿರುವ ಫೋಟೋ ರಿವೀಲ್ ಮಾಡಿದ್ದಾರೆ. ಆದರೆ ಈ ವೇಳೆ ಕೆಲ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

ಸದ್ಯ ನಟಿ ಅಮೂಲ್ಯ ಮಕ್ಕಳ ಪಾದ ಕಾಣುವಂತೆ ಫೋಟೋ ಹಾಕಿದ್ದಾರೆ. ಅವರು ಮಕ್ಕಳ ಮುಖ ತೋರಿಸಿಲ್ಲ. ಇದು ಫ್ಯಾನ್ಸ್ ಬೇಸರಕ್ಕೆ ಕಾರಣವಾಗಿದೆ. ಮಕ್ಕಳ ಮುಖ ತೋರಿಸುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಮಕ್ಕಳ ಪಾದ ಹಿಡಿದು ಮುದ್ದಾಡುತ್ತಿರುವ ಅಮೂಲ್ಯ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

error: Content is protected !!
Scroll to Top
%d bloggers like this: