ಪುತ್ತೂರು : ಕೋಳಿ ಫಾರ್ಮ್ ರೈಟರ್ ನಿಂದ ಕೆಲಸದಾಕೆಯ ಮೇಲೆ ಅತ್ಯಾಚಾರ

ಪುತ್ತೂರು: ಕೋಳಿ ಫಾರ್ಮ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವಳ ಮೇಲೆ ಫಾರ್ಮ್ ನೋಡಿಕೊಳುತ್ತಿದ್ದ ರೈಟರ್ ಅತ್ಯಾಚಾರಗೈದು ವೀಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿದ ಘಟನೆ ಸಂಪ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅರಿಯಡ್ಕ ಗ್ರಾಮದ ಮಡ್ಯಂಗಳದ ಕೋಳಿ ಫಾರ್ಮ್‌ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೈಟರ್, ಉಮ್ಮರ್ ವಿರುದ್ಧ ದೂರು ನೀಡಲಾಗಿದೆ. ಆರೋಪಿ ಅತ್ಯಾಚಾರ ನಡೆಸಿ ಬಳಿಕ ವೀಡಿಯೋ ಚಿತ್ರಿಕರಿಸಿದ್ದು ಮಾತ್ರವಲ್ಲದೇ ಅದನ್ನು ಸಂತ್ರಸ್ತೆಯ ಪತಿಗೆ ಕಳುಹಿಸಿದ್ದಾನೆ. ಇದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಂತ್ರಸ್ತೆ ಮಹಿಳೆಯು ಪತಿ ಹಾಗೂ ಮಗುವಿನೊಂದಿಗೆ ಅರಿಯಡ್ಕದ ಮಡ್ಯಂಗಳದಲ್ಲಿ ವಾಸಿಸುತ್ತಿದ್ದಾರೆ. ಕೃತ್ಯವು ಮೇ 5 ರಂದು ನಡೆದಿದ್ದು, ಜೀವ ಬೆದರಿಕೆ ಇದ್ದ ಕಾರಣ ಜೂ.14 ರಂದು ದೂರು ನೀಡಿದ್ದೇನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.