ಶಾಲಾ ಮಕ್ಕಳಲ್ಲಿ ಹೆಚ್ಚಿದ ಕೊರೊನಾ, ವಿದ್ಯಾಸಂಸ್ಥೆ, ಪೋಷಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ !!!

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಏರಿಕೆ ಕಂಡಿದೆ. ಎರಡು ದಿನಗಳ ಹಿಂದೆ ಶಾಲಾಮಕ್ಕಳಲ್ಲಿ ಹೆಚ್ಚಿನ ಕೊರೊನಾ ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಿಗೆ ಕೊರೊನಾ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

ಶಾಲೆಗಳಿಗೆ ಮಾತ್ರವಲ್ಲದೆ ಸಾರ್ವಜನಿಕರಿಗೂ ಕೊರೊನಾ ಮುಂಜಾಗ್ರತ ಕ್ರಮ ಪಾಲನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೂಚನೆ ನೀಡಿದೆ. ಮಕ್ಕಳಿಗೆ, ಪೋಷಕರಿಗೆ ಪ್ರತ್ಯೇಕ ಮುಂಜಾಗ್ರತಾ ಕ್ರಮಗಳು ಹಾಗೂ ವಿದ್ಯಾಸಂಸ್ಥೆಗಳಿಗೆ ಮಾರ್ಗಸೂಚಿ ಪ್ರಕಟಿಸಿರೋ ಬಿಬಿಎಂಪಿ, ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಸಲಹೆ ನೀಡಿದೆ.

ವಿದ್ಯಾಸಂಸ್ಥೆಗಳು ಅನುಸರಿಸಬೇಕಾದ ಕ್ರಮಗಳು

ವಿದ್ಯಾ ಸಂಸ್ಥೆಯ ದ್ವಾರದಲ್ಲಿ ಪ್ರತಿ ದಿನ ಬೆಳಗ್ಗೆ ಎಲ್ಲ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಾಡುವುದು.

ಸಂಸ್ಥೆಯ ಯಾವುದೇ ವಿದ್ಯಾರ್ಥಿಗಳು/ ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕಿನ ಯಾವುದೇ ರೀತಿಯ ಲಕ್ಷಣ ಕಂಡುಬಂದರೆ, ಅಂತವರಿಗೆ ತಕ್ಷಣವೇ ಕೋವಿಡ್ ಟೆಸ್ಟ್ ನಡೆಸಿ, ನಂತರ ಫಲಿತಾಂಶ ಬರುವವರೆಗೂ ಅವರನ್ನು ಪ್ರತ್ಯೇಕವಾಗಿ ಇರಿಸುವುದು.

ಸಂಸ್ಥೆಯ ಆವರಣದಲ್ಲಿ ಕಡ್ಡಾಯ ಮಾಸ್ಕ್ ಧರಿಸುವುದು.

ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಪಾಡುವುದು.

ಸಂಸ್ಥೆಯ ಆವರಣದಲ್ಲಿ ಸ್ಯಾನಿಟೈಸ‌ರ್ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು.

ಸಂಸ್ಥೆಯ ಆವರಣದಲ್ಲಿ ಸ್ವಚ್ಛತೆ ಕಾಪಾಡುವುದು.

ಸಂಸ್ಥೆಯ ಎಲ್ಲ ಸಿಬ್ಬಂದಿಗಳು ಸಪೂರ್ಣವಾಗಿ ಕೋವಿಡ್-19 ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳುವುದು.

ಲಸಿಕೆ ಪಡೆಯದ ಯಾವುದೇ ಸಿಬ್ಬಂದಿ ಇದ್ದಲ್ಲಿ, ಅವರಿಗೆ ಕೂಡಲೇ ಲಸಿಕೆ ಪಡೆಯುವಂತೆ ವ್ಯವಸ್ಥೆ ಮಾಡುವುದು.

ಸಂಸ್ಥೆಯ ಎಲ್ಲಾ ಅರ್ಹ ವಿದ್ಯಾರ್ಥಿಗಳು ಸಂಪೂರ್ಣವಾಗಿ ಕೋವಿಡ್ ಲಸಿಕೆ ಪಡೆಯುವಂತೆ ಪ್ರೇರೆಪಿಸುವುದು.

ನಾಗರೀಕರು/ಪೋಷಕರು ಅನುಸರಿಸಬೇಕಾದ
ಕ್ರಮಗಳು

ಮನೆಯಲ್ಲಿರುವ ಎಲ್ಲಾ ಸದಸ್ಯರುಗಳು ಕೋವಿಡ್-19 ಲಸಿಕೆ ಪಡೆದಿರುವುದನ್ನು ಖಚಿತಪಡಿಸಿಕೊಳ್ಳುವುದು.

ಮನೆಯಲ್ಲಿ ಯಾವುದೇ ಸದಸ್ಯರಿಗೆ ಕೋವಿಡ್-19 ಸೋಂಕು ಲಕ್ಷಣ ಕಂಡು ಬಂದಲ್ಲಿ ತಕ್ಷಣವೇ ಸಮೀಪದ ಉಚಿತ ಕೋವಿಡ್-19 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡುವುದು.

ಮನೆಯಲ್ಲಿರುವ ಎಲ್ಲಾ ಮಕ್ಕಳು ಕೋವಿಡ್-19 ಲಸಿಕೆ ಕೊಡಿಸುವುದು.

ಮನೆಯಲ್ಲಿರುವ ಶಾಲಾ ವಯಸ್ಸಿನ ಮಕ್ಕಳಲ್ಲಿ ಕೋವಿಡ್ ಸೋಂಕಿನ ಲಕ್ಷಣ ಕಂಡು ಬಂದಲ್ಲಿ ತಕ್ಷಣವೇ ಸಮೀಪದ ಉಚಿತ ಕೋವಿಡ್ -19 ಪರೀಕಾ ಕೇಂದ್ರದಲ್ಲಿ ಪರೀಕ್ಷೆಗೆ ಒಳಪಡಿಸುವುದು.

ಫಲಿತಾಂಶ ಬರುವವರೆಗೂ ಅವರನ್ನು ಶಾಲೆಗೆ ಕಳುಹಿಸದೇ ಪ್ರತ್ಯೇಕವಾಗಿ ಇರಿಸುವುದು.

ಮನೆಯಲ್ಲಿರುವ ಹಿರಿಯ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು.

Leave A Reply

Your email address will not be published.