ಉಡುಪಿ: ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ !!

ಉಡುಪಿ: ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್
ಸ್ಫೋಟಗೊಂಡು ಇಬ್ಬರು ಗಾಯಗೊಂಡ ಘಟನೆ ಆದಿ ಉಡುಪಿಯ ಮೂಡುಬೆಟ್ಟು ಎಂಬಲ್ಲಿ ನಿನ್ನೆ ಸಂಜೆ ವೇಳೆಗೆ
ನಡೆದಿದೆ.

ಮೂಡುಬೆಟ್ಟು ನಿವಾಸಿ ಗೋಪಾಲ ಎಂಬವರ
ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ಮನೆಯ ಪೀಠೋಪಕರಣಗಳು ಸುಟ್ಟು ಹೋಗಿದ್ದು, ಕಿಟಕಿಯ ಗಾಜುಗಳು ಒಡೆದು ಹೋಗಿದೆ. ಅಲ್ಲದೆ, ಅಡುಗೆ ಕೋಣೆಯ ಪಾತ್ರೆಗಳು, ಇತರ ಸಾಮಗ್ರಿಗಳು ಚೆಲ್ಲಾ ಪಿಲ್ಲಿಯಾಗಿವೆ.

ಅಡುಗೆ ಕೋಣೆಯಲ್ಲಿದ್ದ ಸಿಲಿಂಡರ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಸಿಲಿಂಡರ್ ಸ್ಫೋಟಗೊಂಡು ಸಂಪೂರ್ಣ ಕೋಣೆಗೆ ವ್ಯಾಪಿಸಿದೆ. ಅವಘಡ ಸಂಭವಿಸುತ್ತಿದ್ದಂತೆ ಮನೆಯೊಳಗಿದ್ದವರು ಹೊರಗೆ ಓಡಿ ಬಂದರಾದರೂ, ಸಾವಿತ್ರಿ ಹಾಗೂ ಇನ್ನೊಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಸಮಾಜ ಸೇವಕ ಈಶ್ವರ್ ಮಲ್ಪೆ ಹಾಗೂ ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದಾರೆ.

Leave A Reply

Your email address will not be published.