ಈ ದೊಡ್ಡ ಮೊತ್ತಕ್ಕೆ ಸೇಲಾಯಿತು ಶಿವಣ್ಣ ನಟನೆಯ ಭೈರಾಗಿ ಸಿನಿಮಾದ ಟಿವಿ ರೈಟ್ಸ್

ಬೈರಾಗಿ’ ಚಿತ್ರದ ಟಿವಿ ಹಕ್ಕು ಈಗಾಗಲೇ ಮಾರಾಟವಾಗಿದೆ. ದೊಡ್ಡ ಮೊತ್ತಕ್ಕೆ ಟಿವಿ ಹಕ್ಕು ಮಾರಾಟವಾಗಿದೆ ಎನ್ನುವ ಮಾಹಿತಿಯನ್ನು ‘ಬೈರಾಗಿ’ ತಂಡ ಹಂಚಿಕೊಂಡಿದೆ.

ಇದು ಶಿವರಾಜ್​ಕುಮಾರ್​ ನಟನೆಯ 123ನೇ ಸಿನಿಮಾ. ಇದರಲ್ಲಿ ಅವರು ಡಿಫರೆಂಟ್​ ಗೆಟಪ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹುಲಿ ವೇಷದಲ್ಲಿ ಅಭಿಮಾನಿಗಳಿಗೆ ಮಸ್ತ್​ ಮನರಂಜನೆ ನೀಡಲಿದ್ದಾರೆ. ಅಂಜಲಿ, ಯಶ ಶಿವಕುಮಾರ್​, ಶಶಿ ಕುಮಾರ್​ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. 

ಬೈರಾಗಿ ಸಿನಿಮಾ ಜುಲೈ 1 ಕ್ಕೆ ಬಿಡುಗಡೆ ಆಗುತ್ತಿದೆ. ಈಗಾಗಲೇ ಚಿತ್ರದ ಎರಡು ಹಾಡು ಜನರಿಗೆ ಇಷ್ಟ ಆಗಿದೆ. ಟಿವಿ ಹಕ್ಕು 10‌ ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತಕ್ಕೆ ಸೇಲ್ ಆಗಿದೆ.

Leave A Reply

Your email address will not be published.