ಪಡುಬಿದ್ರಿ: ಮತ್ತೆ ಗೊಂದಲದ ವಾತಾವರಣದಲ್ಲಿ ಗುಳಿಗನ ಕಟ್ಟೆ ವಿವಾದ !! | ತಡರಾತ್ರಿ ಎರಡು ಬಣಗಳ ನಡುವೆ ಮಾತಿನ ಚಕಮಕಿ, ಪೊಲೀಸ್ ಬಿಗಿ ಬಂದೋಬಸ್ತ್

ಉಡುಪಿ ಜಿಲ್ಲೆಯ ಪಡುಬಿದ್ರಿಯ ಕಂಚಿನಡ್ಕ ಮಿಂಚಿನಬಾವಿ ಕ್ಷೇತ್ರದಲ್ಲಿ ನಿನ್ನೆ ತಡರಾತ್ರಿ ಎರಡು ಬಣಗಳ ನಡುವೆ ಮತ್ತೆ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ಬೆಳಕಿಗೆ ಬಂದಿದೆ.

ಹಿಂದೂಪರ ಸಂಘಟನೆಗಳಿಂದ ನಿನ್ನೆ ಕರ ಸೇವೆಗೆ ಕರೆ ನೀಡಲಾಗಿತ್ತು. ಕರಸೇವೆಯ ಪ್ರಯುಕ್ತ ಪಡುಬಿದ್ರಿ ಸಮೀಪದ ಕಂಚಿನಡ್ಕದ ಮಿಂಚಿನಬಾವಿ ಕ್ಷೇತ್ರಕ್ಕೆ ತಗಡು ಚಪ್ಪರ ಕಾಮಗಾರಿ ಪೂರ್ಣಗೊಳಿಸಿ ಕಾರ್ಯಕರ್ತರು ಸ್ಥಳದಿಂದ ವಾಪಸ್ಸಾಗಿದ್ದರು. ಕಾಮಗಾರಿಯ ದಿನ ಹೊಸತಾಗಿ ನಿರ್ಮಾಣವಾದ ಗುಳಿಗ ಕಟ್ಟೆ ನಿರ್ಮಾಣದ ವಿರೋಧವಾಗಿ ಸ್ಥಳೀಯ ಮುಸ್ಲಿಮರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಮುಸ್ಲಿಮರು ನೂತನ ಕಟ್ಟೆ ಕೂಡಲೇ ತೆರವುಗೊಳಿಸವಂತೆ ಆಗ್ರಹಿಸಿದರು. ಕಟ್ಟೆ ನಿರ್ಮಾಣದ ಜಾಗದಲ್ಲಿ ಮನೆಗೆ ಹೋಗಲು ಗೇಟ್ ನಿರ್ಮಿಸಲು ನಿರ್ಧಾರಿಸಿದರು. ಕಟ್ಟೆ ನಿರ್ಮಿಸಿದಲ್ಲಿ ಈ ಹಿಂದೆ ಯಾವುದೇ ದೈವದ ಕಲ್ಲು ಇರಲಿಲ್ಲ ಎಂಬುವುದು ಮುಸ್ಲಿಮರ ವಾದ. ಅಲ್ಲದೆ ಸುಮ್ಮನೆ ವಿವಾದ ಸೃಷ್ಟಿಸಲು ಇದೊಂದು ದಾರಿ ಎಂಬುವುದು ಇವರ ವಾದ.

ಇನ್ನು ಅನಾದಿಕಾಲದಿಂದಲೂ ಅದೇ ಜಾಗದಲ್ಲಿ ಗುಳಿಗನ ಕಲ್ಲು ಇತ್ತು. ಆ ಜಾಗ ಗಲೀಜು ಆಗಬಾರದೆಂಬ ಉದ್ದೇಶದಿಂದ ಒಂದೂವರೆ ಅಡಿ ಎತ್ತರದ ಕಟ್ಟೆ ನಿರ್ಮಿಸಿದೆ ಹೊರತು ಯಾವುದೇ ವಿವಾದ ನಿರ್ಮಿಸಲು ಅಲ್ಲ ಎಂಬುವುದು ಹಿಂದೂ ಕಾರ್ಯಕರ್ತರ ವಾದ. ಅಲ್ಲದೆ ಯಾವುದೇ ಸಂದರ್ಭದಲ್ಲಿ ಕೂಡಾ ಕಟ್ಟೆ ತೆರವು ಗೊಳಿಸಲು ಬಿಡಲಾರೆವು ಎಂದು ಕಾರ್ಯಕರ್ತರು ಪಟ್ಟು ಹಿಡಿದರು. ಸ್ಥಳದಲ್ಲಿದ್ದ ಪೋಲೀಸರಿಂದ ಎರಡೂ ಬಣಗಳ ಮನವೊಲಿಕೆಗೆ ಯತ್ನಿಸಲಾಯಿತು.

ಪೋಲೀಸರ ಮನವೊಲಿಕೆಯ ಬಳಿಕ ಎರಡೂ ತಂಡಗಳು ಸ್ಥಳದಿಂದ ನಿರ್ಗಮಿಸಿದರು. ಆದರೆ ಕೆಲವೇ ನಿಮಿಷದಲ್ಲಿ ಮತ್ತೆ ಸ್ಥಳದಲ್ಲಿ ಜಮಾಯಿಸಿದ ಮುಸ್ಲೌಮರು ಕಟ್ಟೆ ತೆರವು ಮಾಡದೆ ಈ ಸ್ಥಳದಿಂದ ಕದಲಲಾರೆವು ಎಂದು ಪಟ್ಟು ಹಿಡಿದು ಕುಳಿತರು. ಇದಕ್ಕೆ ಮಣಿದು ಮರಳಿದ ಹಿಂದೂ ಕಾರ್ಯಕರ್ತರು ಮರಳುವ ಮುನ್ನವೇ ಕಮಿಟಿಯ ಮೂರು ಸದಸ್ಯರ ಸಮ್ಮುಖದಲ್ಲಿ ಕಟ್ಟೆ ತೆರವು ಗೊಳಿಸಲಾಯಿತು. ವಿಷಯ ತಿಳಿದು ಕ್ಷೇತ್ರದ ಭಕ್ತರು ಆಗಮಿಸಿ ಕಟ್ಟೆಯ ಮುಂದೆ ತೆಂಗಿನಕಾಯಿ ಒಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡೀ ರಾತ್ರಿ ಪೋಲೀಸರು ಸ್ಥಳದಲ್ಲಿ ಬಂದೋಬಸ್ತ್ ನಡೆಸಿದ್ದು, ಒಟ್ಟಾರೆ ಸ್ಥಳದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

Leave A Reply

Your email address will not be published.