ವಿಶ್ವದ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದ ಐಪಿಎಲ್ !! | ಒಂದು ಪಂದ್ಯದ ಮೌಲ್ಯ ಎಷ್ಟು ಗೊತ್ತಾ !??

ಐಪಿಎಲ್ ವಿಶ್ವದಲ್ಲೇ ಅತಿಹೆಚ್ಚು ವೀಕ್ಷಿಸುವ ಲೀಗ್ ಆಗಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಟಿವಿ ಮತ್ತು ಡಿಜಿಟಲ್ ಮಾಧ್ಯಮದ ಹಕ್ಕುಗಳಿಗಾಗಿ ಭಾರಿ ಬಿಡ್ಡಿಂಗ್ ಇತ್ತು. ಈ ಬಿಡ್ಡಿಂಗ್ ನಲ್ಲಿ ಐಪಿಎಲ್‌ ಪ್ರಸಾರದ ಪ್ರತಿ ಪಂದ್ಯದ ಮೌಲ್ಯ 105.5 ಕೋಟಿ ರೂ.ಗಳಿಗೆ (13.5 ಮಿಲಿಯನ್‌ ಡಾಲರ್‌) ಹರಾಜಾಗಿದ್ದು, ವಿಶ್ವದ 2ನೇ ದುಬಾರಿ ಕ್ರೀಡೆಯಾಗಿ ಹೊರಹೊಮ್ಮಿದೆ.

ಹೌದು 2023-2027ರ ಅವಧಿಗೆ ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕಿಗಾಗಿ ನಡೆದ ಎರಡು ದಿನಗಳ ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ಪಂದ್ಯದ ಮೌಲ್ಯ 105.5 ಕೋಟಿ ರೂ.ಗೆ ಬಿಕರಿಯಾಗಿದ್ದು, ಈ ಮೂಲಕ ಐಪಿಎಲ್‌ ವಿಶ್ವದ ದುಬಾರಿ ಕ್ರೀಡೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

2018-2022ರ ಅವಧಿಗೆ 16,348 ಕೋಟಿ ರೂ.ಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್‌ ಇಂಡಿಯಾ ಪ್ರತಿ ಪಂದ್ಯಕ್ಕೆ 54.5 ಕೋಟಿ ರೂ. ಪಾವತಿಸಿತ್ತು. ಈಗ ಮುಂದಿನ 5 ವರ್ಷಗಳಿಗೆ ಬಿಸಿಸಿಐ 32,890 ಕೋಟಿ ರೂ. ಮೂಲಬೆಲೆ ನಿಗದಿ ಮಾಡಿತ್ತು. ಆದರೆ ಈಗ ವಾಹಿನಿಯೊಂದು 43,000 ಕೋಟಿ ರೂ.ಗೆ ಬಿಡ್‌ ಮಾಡಿ ಖರೀದಿಸಿದೆ ಎಂದು ವರದಿಯಾಗಿದೆ. ಟಿವಿ ಪ್ರಸಾರಕ್ಕೆ 57.5 ಕೋಟಿ ಹಾಗೂ ಡಿಜಿಟಲ್‌ ಪ್ರಸಾರಕ್ಕೆ 48 ಸಾವಿರ ಕೋಟಿ ರೂ.ಗಳಿಗೆ ಬಿಡ್‌ ಮಾಡಲಾಗಿದೆ.

ಪ್ರಸ್ತುತ ವಿಶ್ವದ ಅತಿ ದುಬಾರಿ ಕ್ರೀಡಾ ಲೀಗ್‌ ಎನ್ನುವ ಹಿರಿಮೆ ಅಮೆರಿಕದ ನ್ಯಾಷನಲ್‌ ಫುಟ್ಬಾಲ್‌ ಲೀಗ್‌ (ಎನ್‌ಎಫ್‌ಎಲ್‌)ಗೆ ಇದೆ. ಪ್ರತಿ ಎನ್‌ಎಫ್‌ಎಲ್‌ ಪಂದ್ಯದ ಮೌಲ್ಯ 134 ಕೋಟಿ ರೂ. ಇದೆ. 2ನೇ ಸ್ಥಾನದಲ್ಲಿ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಫುಟ್ಬಾಲ್‌(ಇಪಿಎಲ್‌) ಇದ್ದು, ಪ್ರತಿ ಪಂದ್ಯದ ಮೌಲ್ಯ 81 ಕೋಟಿ ರೂ. ಆಗಿತ್ತು. ಇದೀಗ ಬಿಸಿಸಿಐ ಲೆಕ್ಕಾಚಾರದಂತೆ ಐಪಿಎಲ್‌ ಪ್ರಸಾರ 100 ಕೋಟಿ ಗಳನ್ನು ದಾಟಿದ್ದು, 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದು, ಇಪಿಎಲ್‌ ಮೌಲ್ಯವನ್ನು ಹಿಂದಿಕ್ಕಿದೆ.

Leave A Reply

Your email address will not be published.