ಬೆಂಗಳೂರಿನಲ್ಲಿ ವೀಕೆಂಡ್ ಡ್ರಗ್ಸ್ ಪಾರ್ಟಿಗಳಿಗೇನೂ ಕಮ್ಮಿ ಇಲ್ಲ. ಪೊಲೀಸರು ಇಂತಹ ಪಾರ್ಟಿಗಳಿಗೆ ಎಷ್ಟೇ ಬಿಸಿ ಮುಟ್ಟಿಸಿದರೂ ಅವುಗಳ ಕಾರ್ಯಾಚರಣೆ ನಿಂತಿಲ್ಲ. ಹಲಸೂರಿನ ಜಿಟಿ ಮಾಲ್ ಬಳಿ ಇರುವ ದಿ ಪಾರ್ಕ್ ಹೋಟೆಲ್ನಲ್ಲಿ ತಡರಾತ್ರಿ ಡ್ರಗ್ಸ್ ಪಾರ್ಟಿ ನಡೆಯುತ್ತಿತ್ತು ಎಂಬ ಅನುಮಾನದ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಮಧ್ಯರಾತ್ರಿ 12 ಗಂಟೆ ಸುಮಾರಿಗೆ ದಾಳಿ ನಡೆಸಿದ ಪೊಲೀಸರು, ಬಾಲಿವುಡ್ ನಟ ಮಗ ಸೇರಿದಂತೆ, 50ಕ್ಕೂ ಹೆಚ್ಚು ಯುವಕ, ಯುವತಿಯರನ್ನು ವಶಕ್ಕೆ ಪಡೆದು ಮೆಡಿಕಲ್ ಟೆಸ್ಟ್ಗೆ ಒಳಪಡಿಸಿದ್ದಾರೆ. ಅವರಲ್ಲಿ ಐವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದು, ಅವರನ್ನು ಅರೆಸ್ಟ್ ಮಾಡಲಾಗಿದೆ.
ಮುಂಬೈ ಮೂಲದ ಡಿಜೆಯಿಂದ ಡ್ರಗ್ಸ್ ಸಪ್ಲೈ ಶಂಕೆ ವ್ಯಕ್ತವಾಗಿದೆ. ಈ ಡ್ರಗ್ಸ್ ಪಾರ್ಟಿಯಲ್ಲಿ ರಾಜ್ಯದ ಪ್ರಭಾವಿಗಳ ಮಕ್ಕಳು ಭಾಗಿಯಾಗಿದ್ದು, ಪೊಲೀಸ್ ರೇಡ್ಗೆ ಮುನ್ನವೇ ಅವರೆಲ್ಲಾ ಎಸ್ಕೇಪ್ ಆಗಿದ್ದಾರೆ.
You must log in to post a comment.