ವೀಸಾ ಇಲ್ಲದೆಯೇ ದೇಶ ಸುತ್ತೋ ಅವಕಾಶ !! | ಯಾವೆಲ್ಲ ದೇಶಕ್ಕೆ ಹೋಗಲು ವೀಸಾ ಬೇಕಿಲ್ಲ ಗೊತ್ತೇ ??

ಜೀವನದಲ್ಲಿ ಒಮ್ಮೆಯಾದರೂ ವಿದೇಶ ಪ್ರವಾಸ ಮಾಡಬೇಕೆಂಬುದು ಹಲವರ ಕನಸು. ಆದರೆ ವಿದೇಶ ಪ್ರವಾಸ ಸುಲಭವಲ್ಲ. ಕೈಯಲ್ಲಿ ದುಡ್ಡು ಇದ್ದ ಮಾತ್ರಕ್ಕೆ ಆಗುವುದಿಲ್ಲ. ಮೊದಲು ಪಾಸ್ ಪೋರ್ಟ್ ಹೊಂದಬೇಕು. ಜತೆಗೆ ವೀಸಾಕ್ಕೆ ಅರ್ಜಿ ಹಾಕಬೇಕು ಮತ್ತು ಆ ದೇಶ ಯಾವಾಗ ಪರವಾನಗಿ ನೀಡುತ್ತೆ ಎಂದು ನಿರೀಕ್ಷಿಸುತ್ತಿರಬೇಕು. ಇವೆಲ್ಲಾ ಪ್ರೋಸೆಸ್ ಮುಗಿಯುವ ತನಕ ತಾಳ್ಮೆಯಿಂದ ಕಾಯುತ್ತಾ ಕೂರಬೇಕು. ಇವೆಲ್ಲ ಸಾಕಷ್ಟು ಮಾನಸಿಕ ಒತ್ತಡ ನೀಡುವ ಸಂಗತಿಗಳಾಗಿವೆ.

ಆದರೆ ನೀವು ವಿಮಾನ ಹತ್ತಿ ಹೊಸ ವಿದೇಶಿ ಸ್ಥಳಗಳನ್ನು ಅನ್ವೇಷಿಸಲು ಉತ್ಸುಕರಾಗಿದ್ದರೆ, ಕೆಲವು ದೇಶಗಳು‌ ವೀಸಾ ಇಲ್ಲದೆ ನಿಮ್ಮನ್ನು ತಮ್ಮ ದೇಶದ ಒಳಗೆ ಬಿಟ್ಟುಕೊಳ್ಳುತ್ತವೆ.
ಆ ದೇಶಗಳು ಆಗಮನದ ವೀಸಾವನ್ನು ನೀಡಿ ಅಲ್ಲಿಗೆ ಬರುವ ಅತಿಥಿಗಳನ್ನು ಆಹ್ವಾನಿಸಿಕೊಳ್ಳುತ್ತಾರೆ. ಅಂದರೆ ನಾವು ವೀಸಾ ಇಲ್ಲದೆ ಆ ರಾಷ್ಟಗಳಿಗೆ ಹೋಗಿ ಬರಬಹುದು. ಅಂತಹ ಜನಪ್ರಿಯ ರಾಷ್ಟ್ರಗಳ ಮಾಹಿತಿ ಇಲ್ಲಿದೆ ನೋಡಿ.

ಥೈಲ್ಯಾಂಡ್‌ :
ಭಾರತೀಯರಿಗೆ ಅತ್ಯಂತ ಜನಪ್ರಿಯ ರಜೆಯ ತಾಣಗಳಲ್ಲಿ ಒಂದಾದ ಥೈಲ್ಯಾಂಡ್‌ ಈಗ ಪ್ರವಾಸಿಗರಿಗೆ ಮುಕ್ತವಾಗಿದೆ. ವೀಸಾ ಇಲ್ಲದೆ ಅಲ್ಲಿ ಹೋಗಿ ವಿಮಾನದಲ್ಲಿ ಇಳಿಬೋದು. ಭಾರತೀಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವವರಿಗೆ ವೀಸಾ ಆನ್ ಅರೈವಲ್‌ ಸೌಲಭ್ಯಗಳನ್ನು, ಅಂದರೆ ಅಲ್ಲಿ ಹೋದ ಮೇಲೆ ತಕ್ಷಣ ವೀಸಾ ನೀಡುವ ಸೌಲಭ್ಯ ಸಿಗುತ್ತದೆ.  ಅಲ್ಲಿಗೆ ಭೇಟಿ ನೀಡಿ ಥೈಲ್ಯಾಂಡ್‌ ದೇಶದ ಸುತ್ತ ಆವರಿಸಿಕೊಂಡಿರುವ ಅನೇಕ ಕಡಲತೀರಗಳು ಮತ್ತು ದ್ವೀಪಗಳನ್ನು ಅನ್ವೇಷಿಸಿ ಜೀವನವನ್ನು ಸಾರ್ಥಕ ಮಾಡಿಕೊಳ್ಳಬಹುದು. ಜತೆಗೆ ಯುವಜನತೆಗೆ ಥಾಯ್ಲಾಂಡ್ ಕರೋಕೆ ರಾತ್ರಿಗಳು ಬೆಚ್ಚಗಿನ ಅನುಭವವನ್ನು ಕಟ್ಟಿಕೊಡಬಹುದು.

ಇಂಡೋನೇಷಿಯಾ:
ಇಂಡೋನೇಷಿಯಾ ಒಂದು ದ್ವೀಪರಾಷ್ಟ್ರ. ದ್ವೀಪರಾಷ್ಟ್ರ ಅಂದರೆ ತಂಪಾದೀತು, ಅದು ಬರೋಬ್ಬರಿ 13500 ದ್ವೀಪಗಳನ್ನು ಒಟ್ಟು ಸೇರಿಸಿ ರಚನೆಯಾದ ಒಂದು ಬಹು ಸಂಸ್ಕೃತಿಯ ರಾಷ್ಟ್ರ. ಬಾಲಿಯ ಕಡಲತೀರಗಳು ಇಂಡೋನೇಷ್ಯಾದ ಅತ್ಯಂತ ಜನಪ್ರಿಯ ವಿಹಾರ ತಾಣವಾಗಿದ್ದು, ಇಂಡೋನೇಷ್ಯಾ ಭಾರತೀಯರನ್ನು ವೀಸಾ ಇಲ್ಲದೆ ಬರಮಾಡಿಕೊಳ್ಳುತ್ತದೆ. ಬಾಲಿಯಲ್ಲಿ ಹಲವಾರು ಸಾಂಸ್ಕೃತಿಕ ಹೆಗ್ಗುರುತುಗಳು ಮತ್ತು ಸಂಪ್ರದಾಯಗಳು ಹಾಸು ಹೊಕ್ಕಾಗಿ ನಿಂತಿದ್ದು, ಎಲ್ಲಾ ಮನಸ್ಥಿತಿಯ ಜನರೂ ಕೂಡ ಇಷ್ಟಪಡುವ ದೇಶ ಬಾಲಿ. ಕಡಲತೀರದ ರಜೆಯನ್ನು ನೀವು ಹುಡುಕುತ್ತಿದ್ದರೆ, ನೀವು ಬಾಲಿಯ ಐಷಾರಾಮಿ ಬೀಚ್ ರೆಸಾರ್ಟ್‌ಗಳಲ್ಲಿ ಒಂದಕ್ಕೆ ಹೋಗಬಹುದು. ತಮ್ಮ ಮನಸ್ಸಿನಲ್ಲಿ ಬೆಚ್ಚಗಿನ ಮರಳು ಮತ್ತು ಕಡು ನೀಲಿ ನೀರನ್ನು ನೋಡಿ ಪುಳಕಗೊಳ್ಳುವ ಜನರಿಗೆ ಬಾಲಿ ಮತ್ತು ಒಟ್ಟಾರೆ ದ್ವೀಪವು ನಿರಾಶೆಗೊಳ್ಳುವುದಿಲ್ಲ. ಕುಟಾವು ಅತ್ಯಂತ ಪ್ರಸಿದ್ಧವಾದ ಬೀಚ್ ಆಗಿದೆ ಮತ್ತು ಸೂರ್ಯ, ಸರ್ಫಿಂಗ್ ಮತ್ತು ಸಾಮಾಜಿಕತೆಯನ್ನು ಏಕಕಾಲಕ್ಕೆ ಅನುಭವಿಸಲು ಇಷ್ಟಪಡುವವರಿಗೆ ಈ ದೇಶ ಉತ್ತಮ ಆಯ್ಕೆ. ಇಲ್ಲಿ ಕುಟ ಬೀಚು, ಗಿಳಿ ಐಲ್ಯಾಂಡ್, ಬೋರೋಬುದೂರ್ ದೇವಾಲಯದ ಸಂಕುಲ, ಕುದಿ ಏಳುತ್ತಿರುವ ಕ್ರಕತಾವ್ ಜ್ವಾಲಾಮುಖಿ – ಇಲ್ಲಿ ಏನುಂಟು ಏನಿಲ್ಲ ಎಂದಿಲ್ಲ.

ಕಾಂಬೋಡಿಯಾ:
ಕಾಂಬೋಡಿಯಾದ ಕುಲುಕುವ ಅದ್ಭುತವಾದ ಕಡಲ ತೀರಗಳು ಎಂದೂ ತೀರದ ಆಕರ್ಷಣೆಗಳು. ಅಲ್ಲಿನ ಭವ್ಯವಾದ ದೇವಾಲಯಗಳು, ಮತ್ತು ಭಾರತದಂತೆಯೇ ಶ್ರೀಮಂತ ಪರಂಪರೆಯ ತಾಣಗಳ ಕಾಂಬೋಡಿಯಾ ನಿಮ್ಮನ್ನು ಕೂಗಿ ಕರೆದು ಮನೆಗೆ ಕರೆಸಿಕೊಳ್ಳುತ್ತದೆ. ನೀವು ಭಾರತೀಯ ಪಾಸ್‌ಪೋರ್ಟ್‌ ಹೊಂದಿದ್ದರೆ, ಆಗಮನದ ವೀಸಾವನ್ನು ಪಡೆಯುವ ಮೂಲಕ ನಿಮ್ಮ ವಿದೇಶ ಪ್ರಯಾಣದ ವಿಶೇಷ ಆನಂದವನ್ನು ನೀವು ಅನುಭವಿಸಬಹುದು.

ಮ್ಯಾನ್ಮಾರ್‌ :
ಭಾರತದ ನೆರೆ ರಾಷ್ಟ್ರವಾದ ಮ್ಯಾನ್ಮಾರ್‌ ಅಂದರೆ ಬಾಂಗ್ಲಾದೇಶ ಪ್ರವಾಸಕ್ಕೆ ಸುಂದರ ತಾಣವಾಗಿದೆ. ಅದರಲ್ಲೂ ಲೋ ಬಜೆಟ್‌ ಬಗ್ಗೆ ಯೋಚಿಸುವವರಿಗೂ ಉತ್ತಮವಾಗಿದೆ. ಈ ದೇಶವು ಸಂಪೂರ್ಣವಾಗಿ ದೇವಸ್ಥಾನಗಳು, ರುಚಿಕರವಾದ ವ್ಯಂಜನಗಳು ಮತ್ತು ವೈವಿಧ್ಯಮಯ ಭೂದೃಶ್ಯದೊಂದಿಗೆ ತುಂಬಿಕೊಂಡು ನಿಂತಿದೆ. ಇದು ಏಕಾಂಗಿಯಾಗೂ ಸರಿ ಮತ್ತು ಗುಂಪುಗಳಲ್ಲಿ ಕೂಡಾ ಪ್ರಯಾಣಿಸಲು ಉತ್ತಮವಾದ ತಾಣವಾಗಿದೆ.

ಜಮೈಕಾ:
ಬಿಳಿಯ ನೊರೆಯಂತಹ ಮರಳುಗಳ ಕಡಲ ತೀರಗಳು, ಸ್ಫಟಿಕದಂತೆ ಸ್ಪಷ್ಟವಾದ ಜಲ – ಇವು ಜಮೈಕಾ ದೇಶದ ಪ್ರಮುಖ ಆಕರ್ಷಣೆ. ಹೇಳಿಕೇಳಿ ಜವರ ವಿಶ್ವದ ದೈತ್ಯ ದೇಹಿಗಳುಳ್ಳ, ಕ್ರೀಡೆಯಲ್ಲಿ ಸದಾ ಮುಂದಿರುವ ದೇಶ. ಸ್ನಾರ್ಕೆಲಿಂಗ್, ಸ್ಕೂಬಾ ಡವಿಂಗ್, ಸರ್ಫಿಂಗ್ ಇತ್ಯಾದಿ ಜಲಕ್ರೀಡೆಗಳನ್ನು ಇಲ್ಲಿ ಅದ್ಭುತವಾಗಿ ಆನಂದಿಸಬಹುದಾಗಿದೆ. ಹಲವಾರು ಅದ್ದೂರಿ ರಿಸಾರ್ಟುಗಳು ಇಲ್ಲಿದ್ದು ಪ್ರವಾಸಿಗರು ಅದ್ಭುತವಾಗಿ ಸಮಯವನ್ನು ಇಲ್ಲಿ ಕಳೆಯಬಹುದು. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ವೀಸಾ ಇಲ್ಲದೆ ಇಲ್ಲಿ 30 ದಿನಗಳವರೆಗೆ ಸುಖವಾಗಿ ಕಳೆಯಬಹುದು.

ನೇಪಾಳ:
ಭಾರತದಿಂದ ನೇಪಾಳಕ್ಕೆ ಭೇಟಿ ನೀಡುವುದು ತೀರಾ ಸುಲಭ. ನೀವು ಕಠ್ಮಂಡುವಿಗೆ ವಿಮಾನವನ್ನು ಬುಕ್‌ ಮಾಡಬಹುದು ಅಥವಾ ಬಸ್ ಹತ್ತಿ ರಸ್ತೆಯ ಮುಲಕವೂ ಈ ಹಿಮಾಚಾದಿತ ದೇಶವನ್ನು ತಲುಪಬಹುದು. ಎಲ್ಲಾ ಪ್ರಯಾಣದ ದಾಖಲೆಗಳು ನಿಮ್ಮ ಜೊತೆ ಇಟ್ಟುಕೊಂಡರೆ ಸಾಕು, ನೀವು ಹೆಚ್ಚು ತೊಂದರೆಯಿಲ್ಲದೆ, ವೀಸಾ ಇಲ್ಲದೆ ಅಲ್ಲಿಗೆ ಪ್ರವೇಶ ಪಡೆಯಬಹುದು. ಈ ದೇಶವು ಪ್ರಯಾಣದ ಅನುಭವಗಳ ವಿಷಯದಲ್ಲಿ ನೀಡುವ ಕೊಡುಗೆಗಳು ಅನನ್ಯ ಅನುಭವಗಳೇ ಸರಿ.

ಮಲೇಷ್ಯಾ:
ಮತ್ತೊಂದು ಉತ್ತಮ ತಾಣವೆಂದರೆ ಭಾರತಕ್ಕೆ ಸಮೀಪವಿರುವ ಮಲೇಷ್ಯಾ. ಇದು ಇತ್ತೀಚೆಗೆ ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವವರಿಗೆ ವೀಸಾ ಆನ್‌ ಅರೈವಲ್‌ ಸೌಲಭ್ಯ ಪ್ರಾರಂಭಿಸಿದೆ. ನಿಮಗೆ ಬೇಕಾಗಿರುವುದು ಒಂದು ದೃಢೀಕೃತ ವಿಮಾನ ಟಿಕೆಟ್‌. ಸೀದಾ ಎದ್ದೊಗಿ ವಿಮಾನದಲ್ಲಿ ಕೂತರೆ ಸಾಕು, ಅಲ್ಲಿ ಸೀದಾ ಹೋಗಿ ಕೌಲ ಲಾಂಪೂರ್ ನಲ್ಲಿ ಇಳಿದು ಪ್ರಕೃತಿಯ ದೃಶ್ಯವೈಭವವನ್ನು ಬೆರಗೂ ಕಣ್ಣುಗಳಲ್ಲಿ ತುಂಬಿಕೊಳ್ಳಬಹುದು.

ಮಾರಿಶಸ್‌ :
ಸ್ವಚ್ಛ ನೀಲಿ ನೀರು, ಆಳ ಸಮುದ್ರ ಡೈವಿಂಗ್‌, ಅತ್ಯಾಕರ್ಷಕ ರೆಸಾರ್ಟ್‌, ರುಚಿಯಾದ ಊಟ ಇವೆಲ್ಲವೂ ನೀವು ಮಾರಿಶಸ್‌ಗೆ ಭೇಟಿ ನೀಡುವಂತೆ ಮಾಡುತ್ತದೆ. ಭಾರತೀಯರು ಆಗಮನದ ಮೊದಲು ವೀಸಾವನ್ನು ಹೊಂದುವ ಅಗತ್ಯವಿಲ್ಲದ ಪ್ರವಾಸಿ ತಾಣವಾಗಿದೆ. ರಜೆಯ ಮಜಾ ಸವಿಯಲು ಉತ್ತಮ ಆಯ್ಕೆಯ ದೇಶವಾಗಿದೆ.

ಭೂತಾನ್‌:
ಸಾಹಸವನ್ನು ಬಯಸುವವರಿಗೆ ಭೂತಾನ್‌ ಮತ್ತೊಂದು ಉತ್ತಮ ತಾಣವಾಗಿದೆ. ನೀವು ಭಾರತೀಯ ಪಾಸ್‌ಪೋರ್ಟ್‌ ಹೊಂದಿದ್ದರೆ ಆಗಮನದ ವೀಸಾವನ್ನು ಸುಲಭವಾಗಿ ಪಡೆಯಬಹುದು. ಇಂತಹಾ , ವೀಸಾ ಇಲ್ಲದೆ ಮನೆಗೆ ದೇಶದೊಳಕ್ಕೆ ಬಿಟ್ಟುಕೊಳ್ಳುವ ದೇಶಗಳಿವೆ. ಬಾರ್ಬಡೋಸ್, ಡೊಮಿನಿಕಾ, ಕೂಕ್ ಐಲ್ಯಾಂಡ್ , ಎಲ್ ಸಾಲ್ವಡಾರ್, ಫಿಜಿ, ಹೈಟಿ, ಗಾಂಬಿಯಾ , ಜಮೈಕಾ, ಸೆನೆಗಲ್ ಇತ್ಯಾದಿ ಇನ್ನೂ ಹಲವು ದೇಶಗಳಿಗೆ ಹೋಗಲು ವೀಸಾ ಬೇಕಾಗಿಲ್ಲ.
ಹಾಗಾದರೆ ಇನ್ನೇಕೆ ತಡ, ನಿಮ್ಮ ನಿಮ್ಮ ಬಜೆಟ್ ದೃಷ್ಟಿಯಲ್ಲಿಟ್ಟುಕೊಂಡು ಆದಷ್ಟು ಬೇಗ ವೀಸಾ ಇಲ್ಲದೆಯೇ ವಿಮಾನ ಹತ್ತಿ ಈ ಸುಂದರ ದೇಶಗಳಲ್ಲಿ ರಜಾದ ಮಜಾ ಅನುಭವಿಸಿ !

Leave A Reply

Your email address will not be published.