ದೇವರ ನಾಡಲ್ಲೊಂದು ಗುಲಾಬಿ ಬಣ್ಣದ ನದಿ !! | ನದಿ ಪಿಂಕ್ ಬಣ್ಣಕ್ಕೆ ತಿರುಗಲು ಕಾರಣ ??

ಹೆಸರಲ್ಲೇ ವಿಭಿನ್ನತೆ ಇರುವ ‘ದೇವರ ನಾಡು’ ಕೇರಳದಲ್ಲಿ ವಿಶೇಷನೀಯತೆಗೆ ಕಡಿಮೆ ಎಂಬುದಿಲ್ಲ. ಪ್ರಾಕೃತಿಕ ಸೌಂದರ್ಯದಿಂದಲೇ ಹೆಸರುವಾಸಿಯಾಗಿರುವ ಈ ನಾಡಿಗೆ ಪ್ರವಾಸಿಗರು ತೆರಳಲು ಕಾತುರದಿಂದ ಕಾಯುತ್ತಾರೆ. ಪ್ರತಿಯೊಂದು ಜಿಲ್ಲೆಯೂ ಅತ್ಯದ್ಬುತ ಪ್ರಾಕೃತಿಕ ಸೌಂದರ್ಯ ಹೊಂದಿದ್ದು, ಸದ್ಯ ಇದೀಗ ಇಲ್ಲಿನ ಅಪರೂಪದ ಜಾಗವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಹೌದು ‘ಅವಳ್ ಪಾಂಡಿ’ ಎಂಬ ಪ್ರದೇಶದಲ್ಲಿ ಪಿಂಕ್ ನದಿಯೊಂದು ಹರಿಯುತ್ತಿದ್ದು, ಇದು ಪ್ರವಾಸಿಗಳ ಗಮನ ಸೆಳೆಯುತ್ತಿದೆ. ಕೇರಳದ ಈ ಅಪರೂಪದ ಬಗ್ಗೆ ಖ್ಯಾತ ಉದ್ಯಮಿ ಆನಂದ ಮಹಿಂದ್ರಾ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಈ ‘ಅವಳ್ ಪಾಂಡಿ’ ಎಂಬ ಸ್ಥಳ ಹೆಚ್ಚು ಫೇಮಸ್ ಆಗಲು ಕಾರಣವೇನು? ಅದರ ವಿಶೇಷತೆ ಏನು ಎಂಬುದನ್ನು ಇಲ್ಲಿ ತಿಳಿಯೋಣ.

ಸಾಮಾನ್ಯವಾಗಿ ನಾವೆಲ್ಲರೂ ನದಿಗಳನ್ನು ತಿಳಿ ಬಣ್ಣದಿಂದ ನೋಡಿರುತ್ತೇವೆ. ಒಂದು ವೇಳೆ ಕೆಸರುಗಳಿಂದ ತುಂಬಿದ್ದರೆ ಅದು ಕೆಂಪು ಬಣ್ಣವಾಗಿ ಕಾಣುತ್ತದೆ. ಆದರೆ ಕೇರಳದ ಕೋಝಿಕೋಡ್ ನಲ್ಲಿರುವ ಈ ನದಿ ಒಂದು ಸಂಪೂರ್ಣ ಗುಲಾಬಿ ಬಣ್ಣಕ್ಕೆ ತಿರುಗಿದೆ. ಅದೇಗೆ ‘ಪಿಂಕ್’ ಕಲರ್ ಎಂಬ ಪ್ರಶ್ನೆಲೀ ನೀವಿದ್ದರೆ ಉತ್ತರ ಇಲ್ಲಿದೆ ನೋಡಿ.

ನೀವೂ ಅಂದುಕೊಂಡ ರೀತಿ, ನದಿ ಪಿಂಕ್ ಬಣ್ಣಕ್ಕೆ ತಿರುಗಲು ಕಾರಣ ಅಲ್ಲಿ ಹರಿಯುತ್ತಿರುವ ನೀರಲ್ಲ. ಬದಲಾಗಿ ಪಿಂಕ್ ಬಣ್ಣದ ಹೂಗಳು. ಹೌದು. ಈ ಸಸ್ಯವು ಕೇರಳದಲ್ಲಿ ಹುಟ್ಟಿಕೊಂಡದ್ದಲ್ಲ. ಇದು ದೂರದ ದಕ್ಷಿಣ ಅಮೆರಿಕದ ಒಂದು ಸಸ್ಯವಾಗಿದೆ. ಸ್ಥಳೀಯವಾಗಿ ಈ ಹೂವುಗಳು ‘ಮುಲ್ಲನ್ ಪಾಯಲ್’ ಎಂದು ಕರೆಯಲ್ಪಡುತ್ತದೆ. ಆದರೆ ಈ ಸಸ್ಯ ಕೇರಳಕ್ಕೆ ಬಂದು ಹೇಗೆ ಹುಟ್ಟಿಕೊಂಡಿತು ಎಂದು ಯಾರಿಗೂ ತಿಳಿದಿಲ್ಲ. ಆಕಸ್ಮಿಕವಾಗಿ ಗಿಡ ನದಿಗೆ ಸೇರಿರಬಹುದು, ಇಲ್ಲವೇ ಸ್ಥಳೀಯರು ಗಿಡವನ್ನು ನದಿಗೆ ತಪ್ಪಿ ಎಸೆದಿರಬಹುದು ಎಂದು ಹೇಳಲಾಗುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾನವ ಚಟುವಟಿಕೆ ಕಡಿಮೆಯಾದ ಕಾರಣ ಸಸ್ಯವು ನದಿಯಲ್ಲಿ ಅರಳಿದೆ ಎಂದು ಹಲವರು ನಂಬುತ್ತಾರೆ.

ಸಂಪೂರ್ಣ ಪಿಂಕ್ ಬಣ್ಣಕ್ಕೆ ತಿರುಗಿರುವ ನದಿಯನ್ನು ನೋಡಲು ದೇಶ-ವಿದೇಶದಿಂದ ಜನರು ಕೇರಳಕ್ಕೆ ಆಗಮಿಸುತ್ತಿದ್ದಾರೆ. ಅಲ್ಲದೆ, ಉದ್ಯಮಿ ಆನಂದ್ ಮಹೀಂದ್ರಾ ಅವರು ಪಿಂಕ್ ಬಣ್ಣಕ್ಕೆ ತಿರುಗಿರುವ ಈ ನದಿಯ ಫೋಟೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿ, ‘ಪ್ರವಾಸಿಗರು ಪಿಂಕ್ ನದಿಯ ಬಳಿ ಸೇರುತ್ತಿದ್ದಾರೆ. ಈ ಫೋಟೋವನ್ನು ನೋಡುವಾಗ ಅದು ನನ್ನ ಉತ್ಸಾಹ ಮತ್ತು ಆಶಾವಾದವನ್ನು ಹೆಚ್ಚಿಸುತ್ತದೆ. ನಾನು ಇದನ್ನು ನನ್ನ ಹೊಸ ಸ್ಕ್ರೀನ್ ಸೇವರ್ ಮಾಡಲು ಯೋಚಿಸುತ್ತಿದ್ದೇನೆ ಮತ್ತು ಅದಕ್ಕೆ ‘ರಿವರ್ ಆಫ್ ಹೋಪ್’ (ಭರವಸೆಯ ನದಿ) ಎಂದು ಹೆಸರಿಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆ ಎಲ್ಲೆಡೆ ಸುದ್ದಿಯಲ್ಲಿರುವ ಪಿಂಕ್ ನದಿ ನೋಡಲು ನೀವೂ ಒಮ್ಮೆ ದೇವರ ನಾಡಿಗೆ ಹೆಜ್ಜೆ ಹಾಕಿ..

Leave A Reply

Your email address will not be published.