ಸಾರಿಗೆ ನಿಗಮದಲ್ಲಿ “ಧರ್ಮದಂಗಲ್” ಶುರು | “ಟೋಪಿ” ಹಾಕಿ ಬಂದ ಮುಸ್ಲಿಂ ನೌಕರರ ಎದುರು, “ಕೇಸರಿ ಶಾಲು” ಧರಿಸಿ ಬಂದ ಹಿಂದೂ ನೌಕರರು!!

ಧರ್ಮಸಂಘರ್ಷ ರಾಜ್ಯದಲ್ಲಿ ಮುಂದುವರಿಯುತ್ತಲೇ ಇದೆ. ಹಿಜಾಬ್‌ನಿಂದ ಆರಂಭವಾದ ಈ ಘಟನೆ ಎಲ್ಲಿಗೆ ತಗೊಂಡೋಗಿ ಮುಟ್ಟುತ್ತೆ ಅಂತ, ಯಾರಿಗೂ ತಿಳಿದಿಲ್ಲ. ಇತ್ತೀಚೆಗಷ್ಟೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದಾಗ, ಇದನ್ನು ವಿರೋಧಿಸಿದ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಪ್ರತಿಭಟನೆ ಮಾಡಿದ್ದರು. ಹಿಜಾಬ್ ಧರಿಸುವವರೆಗೆ ಕೇಸರಿ ಶಾಲು ಧರಿಸುತ್ತೇವೆಂದು ಪಟ್ಟು ಹಿಡಿದಿದ್ದರು. ಈ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಹಿಜಾಬ್ ಧರಿಸಿ ಶಾಲಾ- ಕಾಲೇಜಿಗೆ ಹೋಗುವಂತಿಲ್ಲವೆಂದು ತೀರ್ಪುನ್ನು ನ್ಯಾಯಾಲಯ ನೀಡಿದೆ. ಈ ನಡುವೆ ಇತ್ತೀಚಿನ ಬೆಳವಣಿಗೆಯೊಂದರ ಪ್ರಕಾರ,
ಇದೀಗ ಸರ್ಕಾರಿ ನಿಗಮದಲ್ಲೂ ಧರ್ಮ ದಂಗಲ್ ಶುರುವಾಗಿದೆ. ಬಿಎಂಟಿಸಿ ಸಾರಿಗೆ ನಿಗಮ ನೌಕರರು ಸಮವಸ್ತ್ರ ನೀತಿ ಉಲ್ಲಂಘನೆ ಮಾಡಿದ್ದು, ಮುಸ್ಲಿಂ ನೌಕರರು ಟೋಪಿ, ಹಿಂದೂ ನೌಕರರಿಂದ ಕೇಸರಿ ಶಾಲು ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ.

ಬಿಎಂಟಿಸಿ ನೌಕರರು ಕಳೆದ 1 ತಿಂಗಳಿಂದ ಕೇಸರಿ ಶಾಲು ಮತ್ತು ಟೋಪಿ ಹಾಕಿಕೊಂಡು ಕೆಲಸಕ್ಕೆ ಹಾಜರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಟೋಪಿ ಕಳಚಬೇಕೆಂದು, ಕೇಸರಿ ಕಾರ್ಮಿಕರ ಸಂಘ ಎಂದು ನೌಕರರು ಸಂಘ ಮಾಡಿಕೊಂಡಿದ್ದಾರೆ. 1,500 ಸಿಬ್ಬಂದಿ ಕೇಸರಿ ಕಾರ್ಮಿಕರ ಸಂಘದ ಸದಸ್ಯತ್ವ ಹೊಂದಿದ್ದಾರೆ. ಟೋಪಿ ಕಳಚುವವರೆಗೂ ಕೇಸರಿ ಶಾಲು ಹಾಕುತ್ತೇವೆಂದು ಪಟ್ಟು ಹಿಡಿದಿದ್ದಾರೆ.

ಈ ಬಗ್ಗೆ ಬಿಎಂಟಿಸಿ ಉಪಾಧ್ಯಕ್ಷ ಎಂಆರ್ ವೆಂಕಟೇಶ್
ಮಾತನಾಡಿ, ಬಿಎಂಟಿಸಿಯಲ್ಲಿ ಶಿಸ್ತು ಪಾಲನೆ
ಕಡ್ಡಾಯ, ಅತಿರೇಕದ ವರ್ತನೆ ಕಂಡುಬಂದರೆ ಕ್ರಮ
ಕೈಗೊಳ್ಳುತ್ತೇವೆ. ವಸ್ತ್ರ ಸಂಹಿತೆ ಪಾಲನೆ ಕಡ್ಡಾಯವಾಗಿ
ಆಗಬೇಕು. ಈ ಹಿಂದೆ ಯಾವುದೇ ಈ ರೀತಿ ಘಟನೆ
ನಡೆದಿರಲಿಲ್ಲ. ಒಂದು ವೇಳೆ ನಿಯಮ
ಉಲ್ಲಂಘನೆಯಾದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ
ಎಂದು ಎಚ್ಚರಿಕೆ ನೀಡಿದ್ದಾರೆ.

Leave A Reply

Your email address will not be published.