ರೈಲು ಟಿಕೆಟ್ ಬುಕಿಂಗ್ ಗಾಗಿಯೇ ಭಾರತೀಯ ರೈಲ್ವೆ ಬಿಡುಗಡೆ ಮಾಡಿದೆ ಹೊಸ ಆ್ಯಪ್!!

ರೈಲು ಪ್ರಯಾಣಿಕರಿಗೆ ಶುಭ ಸುದ್ದಿ ಒಂದಿದ್ದು, ಇನ್ನು ಮುಂದೆ ರೈಲು ಟಿಕೆಟ್‌ಗಳಿಗಾಗಿ ಎಲ್ಲಿಯೂ ಹೋಗಬೇಕಾಗಿಲ್ಲ. ಯಾಕೆಂದರೆ ಇದಕ್ಕಾಗಿಯೇ ಇಲಾಖೆ ವಿಶೇಷ ಸೌಲಭ್ಯವನ್ನು ಪ್ರಾರಂಭಿಸಿದೆ.

ಹೌದು. ರೈಲ್ವೇ ಇದೀಗ ತತ್ಕಾಲ್ ಟಿಕೆಟ್‌ಗಾಗಿ ಹೊಸ ಆ್ಯಪ್ ಬಿಡುಗಡೆ ಮಾಡಿದ್ದು, ಈ ಅಪ್ಲಿಕೇಶನ್ IRCTC ವೆಬ್‌ಸೈಟ್‌ನಲ್ಲಿ ಮಾತ್ರ ಲಭ್ಯವಿದೆ. ಈ ಅಪ್ಲಿಕೇಶನ್ ಮೂಲಕ ಮನೆಯಲ್ಲೇ ಕುಳಿತುಕೊಂಡು ಕ್ಷಣಾರ್ಧದಲ್ಲಿ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಅಷ್ಟೇ ಅಲ್ಲದೆ ಯಾವುದೇ ಹೆಚ್ಚುವರಿ ಪಾವತಿಯನ್ನು ಮಾಡಬೇಕಾಗಿಲ್ಲ.

ರೈಲಿನಲ್ಲಿ ಅನೇಕರಿಗೆ ತಕ್ಷಣದ ಪ್ರಯಾಣ ಅಗತ್ಯವಿರುತ್ತದೆ. ಈ ವೇಳೆ ಕನ್ಫರ್ಮ್ ಟಿಕೆಟ್ ಸಿಗದೆ ಅದೆಷ್ಟೋ ಜನ ಒದ್ದಾಡಿದ್ದಾರೆ. ಈ ಸಂದರ್ಭದಲ್ಲಿ ಏಜೆಂಟ್ ಅನ್ನು ಸಂಪರ್ಕಿಸಿ ಅಥವಾ ತತ್ಕಾಲ್ ಟಿಕೆಟ್‌ಗಾಗಿ ಪ್ರಯತ್ನಿಸಬಹುದು. ಆದರೆ ಈ ತತ್ಕಾಲ್ ಟಿಕೆಟ್ ಪಡೆಯುವುದು ಸುಲಭವಲ್ಲ. ಇಂತಹ ಪರಿಸ್ಥಿತಿಗೆ ರೈಲ್ವೆಯ ಈ ಸೇವೆ ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ.

ರೈಲ್ವೇ ಬಿಡುಗಡೆ ಮಾಡಿರುವ ಈ ಆ್ಯಪ್ ಲ್ಲಿ ತತ್ಕಾಲ್ ಕೋಟಾದಡಿ ರೈಲಿನಲ್ಲಿ ಲಭ್ಯವಿರುವ ಸೀಟುಗಳ ಮಾಹಿತಿಯನ್ನು ಪಡೆಯಬಹುದು. ಇದಲ್ಲದೆ, ವಿವಿಧ ರೈಲು ಸಂಖ್ಯೆಗಳನ್ನು ನಮೂದಿಸುವ ಮೂಲಕ ನೀವು ಖಾಲಿ ಸೀಟುಗಳನ್ನು ಸಹ ಸುಲಭವಾಗಿ ಹುಡುಕಬಹುದು. ಇದರೊಂದಿಗೆ ಆಯಾ ಮಾರ್ಗದಲ್ಲಿ ಚಲಿಸುವ ಎಲ್ಲಾ ರೈಲುಗಳಲ್ಲಿ ಉಳಿದಿರುವ ತತ್ಕಾಲ್ ಟಿಕೆಟ್‌ಗಳ ಮಾಹಿತಿಯನ್ನು ನೀವು ಮನೆಯಲ್ಲಿ ಕುಳಿತು ಈ ಅಪ್ಲಿಕೇಶನ್‌ನಲ್ಲಿ ಪಡೆಯಬಹುದಾಗಿದೆ.

ಈ ಅಪ್ಲಿಕೇಶನ್ ಅನ್ನು Google Play Store ನ IRCTC ಮೊಬೈಲ್ ಅಪ್ಲಿಕೇಶನ್‌ನಿಂದ ಡೌನ್‌ಲೋಡ್ ಮಾಡಬಹುದಾಗಿದೆ. ಈ ಅಪ್ಲಿಕೇಶನ್ ಟಿಕೆಟ್ ಬುಕಿಂಗ್‌ಗಾಗಿ ಮಾಸ್ಟರ್ ಪಟ್ಟಿಯನ್ನು ಸಹ ಹೊಂದಿದ್ದು, ಇದರಿಂದಾಗಿ ಟಿಕೆಟ್ ಬುಕಿಂಗ್‌ಗಾಗಿ ಸಮಯ ವ್ಯರ್ಥವಾಗುವುದಿಲ್ಲ. ಈ ಅಪ್ಲಿಕೇಶನ್‌ನಲ್ಲಿ, ಪ್ರಯಾಣಿಕರು ತಮ್ಮ ಸೇವ್ ಡೇಟಾ ಮೂಲಕ ಬೆಳಿಗ್ಗೆ 10 ಗಂಟೆಯಿಂದ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಅಲ್ಲದೆ, ಈ ಟಿಕೆಟ್‌ನ ಆನ್‌ಲೈನ್ ಪಾವತಿಯನ್ನು ಮಾಡಲು ಸಾಧ್ಯವಾಗುತ್ತದೆ.

Leave A Reply

Your email address will not be published.