ಬ್ಯಾಟರಿ ತೆಗೆಯಲೂ ಆಗದ ಮೊಬೈಲ್ ಹ್ಯಾಂಗ್ ಆದರೆ ಏನು ಮಾಡಬೇಕು? ಇಲ್ಲಿದೆ ಸುಲಭ ಟಿಪ್ಸ್ !

ಯಾವುದೇ ಗೆಜೆಟ್ ಗಳಿರಲಿ ಹ್ಯಾಂಗ್ ಆಗುವುದು ಸಹಜ. ಹೆಚ್ಚಾಗಿ ಕಂಪ್ಯೂಟರ್, ಮೊಬೈಲ್, ಟ್ಯಾಬ್ ಯಾವುದೇ ಇರಲಿ ಎಲ್ಲಾ ಗ್ಯಾಜೆಟ್‌ಗಳು ಕೆಲಸ ಮಾಡುವಾಗ ಹ್ಯಾಂಗ್ ಆಗುತ್ತದೆ. ಒಂದು ಆ್ಯಪ್ ತೆರೆದಾಗಲೋ ಅಥವಾ ಸ್ಕ್ರೀನ್ ಅನ್‌ಲಾಕ್ ಮಾಡಿದಾಗಲೋ, ಫೋನ್ ಏನೇ ಮಾಡಿದರೂ ಯಾವುದೇ ರೀತಿಯಲ್ಲಿ ಸ್ಪಂದಿಸುವುದಿಲ್ಲ. ಈ ರೀತಿಯ ಸಮಸ್ಯೆ ಹಲವರಿಗೆ ಎದುರಾಗಿರಬಹುದು. ಇದನ್ನು ಫೋನ್ ‘ಹ್ಯಾಂಗ್ ಆಗುವುದು’, ‘ಫ್ರೀಜ್ ಆಗುವುದು’ ಎಂದು ಹೇಳುತ್ತಾರೆ. ಹಿಂದಿನ ಫೋನ್‌ಗಳಲ್ಲಿ ಹ್ಯಾಂಗ್ ಆದರೆ ಥಟ್ ಎಂದು ಮೊಬೈಲ್ ಬ್ಯಾಟರಿ ರಿಮೂವ್ ಮಾಡಿ ನಂತರ ಪವರ್ ಆನ್ ಬಟನ್ ಒತ್ತಿ ಆನ್ ಮಾಡಿ ಉಪಯೋಗಿಸುತ್ತಿದ್ದೆವು. ಆದರೀಗ ಬರುವ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ರಿಮೂವ್ ಮಾಡಲು ಸಾಧ್ಯವಿಲ್ಲ. ಈ ಸಂದರ್ಭ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಹ್ಯಾಂಗ್ ಆಗಿ ಏನೂ ವರ್ಕ್ ಆಗದಿದ್ದಾಗ ಹೇಗೆ ರೀಸ್ಟಾರ್ಟ್ಸ್ ಮಾಡಬೇಕು ಎಂಬುದಕ್ಕೆ ಇಲ್ಲಿದೆ ಟಿಪ್ಸ್.

ಮೊದಲನೆಯದಾಗಿ ಈ ರೀತಿ ಹ್ಯಾಂಗ್ ಅಥವಾ ಫ್ರೀಜ್ ಆಗುವ ಮೊದಲೇ ನಾವು ಕೆಲವೊಂದು ಮುನ್ನೆಚ್ಚರಿಕೆ ಕ್ರಮ ವಹಿಸಿದರೆ ಒಳ್ಳೆಯದು. ಇದಕ್ಕಾಗಿ ಮೊದಲಿಗೆ ಆಂಡ್ರಾಯ್ಡ್ ಮೊಬೈಲ್ ಫೋನನ್ನು ರೀಸ್ಟಾರ್ಟ್ ಮಾಡಬೇಕು. ಇದನ್ನು ರೀಬೂಟಿಂಗ್ ಎಂದೂ ಕರೆಯುತ್ತಾರೆ. ಅಂದರೆ, ಫೋನ್ ಸ್ವಿಚ್ ಆಫ್ ಮಾಡಿ ಮರಳಿ ಆನ್ ಮಾಡುವುದು. ಫೋನ್‌ನ ಪವ‌ರ್ ಬಟನ್ ನನ್ನು ಕೆಲವು ಕ್ಷಣ ಒತ್ತಿ ಹಿಡಿದುಕೊಂಡರೆ, ರೀಸ್ಟಾರ್ಟ್, ಪವರ್ ಆಫ್ ಹಾಗೂ ಹೊಸ ಫೋನ್‌ಗಳಲ್ಲಿ ‘ಸ್ಕ್ರೀನ್ ಶಾಟ್’ ಬಟನ್‌ಗಳು ಗೋಚರಿಸುತ್ತವೆ. ಇದರಲ್ಲಿ ‘ರೀಸ್ಟಾರ್ಟ್’ ಒತ್ತಿದರೆ, ತಾನಾಗಿ ಆಫ್ ಆಗಿ, ಮರಳಿ ಆನ್ ಆಗುತ್ತದೆ. ಇಲ್ಲವೇ, ‘ಪವರ್ ಆಫ್’ ಒತ್ತಿ ಐದು ನಿಮಿಷದ ನಂತರ ನಾವೇ ಆನ್ ಮಾಡಬೇಕಾಗುತ್ತದೆ.

ಒಂದು ವೇಳೆ ಇದ್ಯಾವುದು ವರ್ಕ್ ಆಗುತ್ತಿಲ್ಲ ಎಂದಾದರೆ ವಾಲ್ಯುಮ್ ಡೌನ್ ಬಟನ್ ಮತ್ತು ಲಾಕ್ ಅಥವಾ ಪವರ್ ಬಟನ್ ಅನ್ನು ಕೆಲ ಸೆಕೆಂಡ್‌ಗಳ ಕಾಲ ಒತ್ತಿ ಹಿಡಿಯಿರಿ. ಆಗ ನಿಮ್ಮ ಮೊಬೈಲ್ ತಕ್ಷಣ ರೀಸ್ಟಾರ್ಟ್ ಆಗುತ್ತದೆ. ಕೆಲ ಮೊಬೈಲ್‌ ಗಳಲ್ಲಿ ವಾಲ್ಯುಮ್ ಡೌನ್ ಬಟನ್ ಬದಲು ವಾಲ್ಯುಮ್ ಅಪ್ ಬಟನ್ ಕೂಡ ಕೆಲಸ ಮಾಡುತ್ತದೆ. ಇದು ಎಲ್ಲರಿಗೂ ಗೊತ್ತಿರಲಿ. ರೀಸ್ಟಾರ್ಟ್ ಎಂಬುದು ಒಂದು ತಾತ್ಕಾಲಿಕ ಪರಿಹಾರವಷ್ಟೆ. ಡಿವೈಸ್‌ಗಳು ಯಾವಾಗಲೂ ಹ್ಯಾಂಗ್ ಆಗುತ್ತಿದ್ದರೆ ಸರ್ವಿಸ್ ಮಾಡಿಸುವುದು ಅಗತ್ಯ.

ಇನ್ನು ಸ್ಮಾರ್ಟ್‌ಫೋನ್‌ನಲ್ಲಿ ಕೆಲವು ಸೆಟ್ಟಿಂಗ್‌ಗಳನ್ನು ಬದಲಾಯಿಸಿದರೆ, ನಿಮ್ಮ ಫೋನ್ ಈಗಿರುವುದಕ್ಕಿಂತ ವೇಗವಾಗಿ ಕೆಲಸ ಮಾಡಬಹುದು. ಮೊದಲು ನಿಮ್ಮ ಸ್ಮಾರ್ಟ್ ಫೋನ್ ಸೆಟ್ಟಿಂಗ್ಸ್ ತೆರೆಯಿರಿ. ಸಾಫ್ಟ್‌ವೇರ್ ಅಪ್‌ಡೇಟ್ ಆಗಿದೆಯೇ ಎಂದು ನೋಡಿ. ಇಲ್ಲದಿದ್ದರೆ ನಿಮ್ಮ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡಿ. ನಂತರ ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ. ನಿಮ್ಮ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ಅಪ್ಲಿಕೇಶನ್‌ಗಳು ಮತ್ತು ಸಾಧನವನ್ನು ನಿರ್ವಹಿಸಿ. ಅಪ್‌ಡೇಟ್ ಮಾಡಬೇಕಾದ ಆ್ಯಪ್‌ಗಳಿವೆಯೇ ಎಂದು ನೋಡಿ. ಎಲ್ಲಾ ಅಪ್ಲಿಕೇಶನ್‌ಗಳನ್ನು ಅಪ್ ಡೇಟ್ ಮಾಡಿ.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅನಿಮೇಷನ್ ಗಳೇನಾದರೂ ಇದ್ದರೆ ಅದು ಸ್ಲೋ ಆಗಿ ಕಾರ್ಯನಿರ್ವಹಿಸುವುದರಿಂದ, ಅಷ್ಟಲ್ಲದೇ ಹಳೆಯ ಸ್ಮಾರ್ಟ್ ಫೋನ್‌ಗಳಲ್ಲಿ ಅನಿಮೇಷನ್ ಸರಿಯಾಗಿ ಕೆಲಸ ಮಾಡುವುದಿಲ್ಲ. ಆದ್ದರಿಂದ ಡೆವಲಪ್ ಮೋಡ್ ಗಳನ್ನೆಲ್ಲಾ ಸಕ್ರಿಯಗೊಳಿಸಬೇಕು. ನಂತರ ಸೆಟ್ಟಿಂಗ್‌ಗಳಲ್ಲಿ ಸಿಸ್ಟಂಗಳಲ್ಲಿ, ಡೆವಲಪರ್ ಆಯ್ಕೆಗಳನ್ನು ಆಯ್ಕೆ ಮಾಡಿ. ನೀವು ಕೆಳಗೆ ಸ್ಕ್ರೋಲ್ ಮಾಡಿದಾಗ ಅನಿಮೇಷನ್‌ಗಳು ಕಾಣಿಸಿಕೊಳ್ಳುತ್ತವೆ. ಎಲ್ಲಾ ಅನಿಮೇಷನ್‌ಗಳನ್ನು ಆಫ್ ಮಾಡಿದರೆ ನಿಮ್ಮ ಮೊಬೈಲ್ ಮತ್ತಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ.

Leave A Reply

Your email address will not be published.