ಜಾಹೀರಾತು ಪ್ರಕಟಣೆಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ!

ಕೇಂದ್ರ ಸರ್ಕಾರ ಜಾಹೀರಾತು ಪ್ರಕಟಣೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಇಂದು ಪ್ರಕಟಿಸಿದ್ದು, ಎಲ್ಲಾ ಮಾದರಿಯ ಜಾಹೀರಾತುಗಳಿಗೆ ಈ ಮಾರ್ಗಸೂಚಿಗಳು ಅನ್ವಯವಾಗುತ್ತವೆ. ಈ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳ ಪ್ರಕಾರ ಕಂಪನಿಗಳು ತಮ್ಮ ಉತ್ಪನ್ನಗಳ ಪ್ರಚಾರದ ಜಾಹೀರಾತುಗಳನ್ನು ತಯಾರು ಮಾಡಬೇಕಾಗಿದೆ.

ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಮತ್ತು ಹೆಚ್ಚುವರಿ ಕಾರ್ಯದರ್ಶಿ ನಿಧಿ ಖರೆ ಅವರು ‘Guidelines for Prevention of Misleading Advertisements and Endorsements for Misleading Advertisements, 2022’ ಅನ್ನು ಬಿಡುಗಡೆ ಮಾಡಿದರು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಮಾರ್ಗಸೂಚಿಗಳ ಪ್ರಕಾರ, `ಬಾಡಿಗೆ ಜಾಹೀರಾತು’ ಎಂಬುದು ಸರಕು ಅಥವಾ ಸೇವೆಗಳ ಜಾಹೀರಾತನ್ನು ಉಲ್ಲೇಖಿಸುತ್ತದೆ. ಈ ಹಿನ್ನೆಲೆಯಲ್ಲಿ ಅದರ ಜಾಹೀರಾತನ್ನು ಕಾನೂನಿನಲ್ಲಿ ನಿಷೇಧಿಸಲಾಗಿದೆ ಅಥವಾ ನಿರ್ಬಂಧಿಸಲಾಗಿದೆ. ಇದರ ಪ್ರಕಾರ, ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಅವರನ್ನು ಪ್ರಚೋದಿಸುವ ಬಾಡಿಗೆ ಜಾಹೀರಾತು ಮೇಲೆ ನಿಷೇಧ ಹೇರಲಾಗಿದೆ. ಈ ಸಂಬಂಧ ಜೂನ್ 9 ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಈ ಮಾರ್ಗಸೂಚಿಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸರಕು ಅಥವಾ ಸೇವೆಗಳಿಗೆ ಸಂಬಂಧಿಸಿದ ಬಾಡಿಗೆ ಜಾಹೀರಾತು ಅಥವಾ ಪರೋಕ್ಷ ಜಾಹೀರಾತುಗಳನ್ನು ತಯಾರಿಸುವಂತಿಲ್ಲ ಮತ್ತು ಪ್ರಸಾರ ಮಾಡುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಸರಕುಗಳು, ಉತ್ಪನ್ನ ಅಥವಾ ಸೇವೆಯು ಜಾಹೀರಾತಿನ ವಿಷಯವಾಗಿರುವ ತಯಾರಕ ಸಂಸ್ಥೆ, ಸೇವಾ ಪೂರೈಕೆದಾರ ಸಂಸ್ಥೆ ಅಥವಾ ವ್ಯಾಪಾರಿ ಅಥವಾ ಅಂತಹ ಸರಕುಗಳು, ಉತ್ಪನ್ನ ಅಥವಾ ಸೇವೆಯ ಜಾಹೀರಾತಿಗಾಗಿ ಸೇವೆಯನ್ನು ಪಡೆದಿರುವ ಜಾಹೀರಾತು ಸಂಸ್ಥೆ ಅಥವಾ ಅನುಮೋದಕರಿಗೆ ಈ ಮಾರ್ಗಸೂಚಿಗಳು ಅನ್ವಯವಾಗಲಿವೆ.

error: Content is protected !!
Scroll to Top
%d bloggers like this: