ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿರುವ ಬ್ಯಾಂಕ್‌ನ ಲೈಸೆನ್ಸ್ ರದ್ದುಗೊಳಿಸಿದ RBI : ಸಾವಿರಾರು ಠೇವಣಿದಾರರು ಸಂಕಷ್ಟದಲ್ಲಿ !

ಭಾರತೀಯ ರಿಸರ್ವ್ ಬ್ಯಾಂಕ್ ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿರುವ ಬ್ಯಾಂಕ್ ನ ಪರವಾನಿಗೆಯೊಂದನ್ನು ರದ್ದುಗೊಳಿಸಿದೆ. ಹೌದು, ಬಾಗಲಕೋಟೆಯ ‘ದಿ ಮುಧೋಳ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌’ನ ಪರವಾನಗಿಯನ್ನು ರದ್ದುಗೊಳಿಸಿದೆ. ಠೇವಣಿಗಳ ಮರುಪಾವತಿ ಮತ್ತು ಹೊಸ ಹಣವನ್ನು ಸ್ವೀಕರಿಸುವುದಂತೆ ಬ್ಯಾಂಕ್‌ಗೆ ನಿರ್ಬಂಧವನ್ನೂ ಹೇರಿದೆ.

ಆರ್‌ಬಿಐ, ಹೇಳಿರುವ ಪ್ರಕಾರ ಬ್ಯಾಂಕ್ ಬಳಿಯಲ್ಲಿ ಸಾಕಷ್ಟು ಬಂಡವಾಳ ಇಲ್ಲ ಮತ್ತು ಗಳಿಕೆಯ ನಿರೀಕ್ಷೆಗಳಿಲ್ಲ ಎಂದು ಹೇಳಿದೆ. “ಪರವಾನಗಿಯನ್ನು ರದ್ದುಗೊಳಿಸಿದ ಪರಿಣಾಮವಾಗಿ, ದಿ ಮುಧೋಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಇತರ ವಿಷಯಗಳ ಜೊತೆಗೆ, ಠೇವಣಿಗಳ ಸ್ವೀಕಾರ ಮತ್ತು ಠೇವಣಿಗಳ ಮರುಪಾವತಿಯನ್ನು ಒಳಗೊಂಡಿರುವ ‘ಬ್ಯಾಂಕಿಂಗ್‌’ ವ್ಯವಹಾರವನ್ನು ನಡೆಸುವುದನ್ನು ನಿಷೇಧಿಸಲಾಗಿದೆ,” ಎಂದು ಆರ್‌ಬಿಐ ತನ್ನ ಆದೇಶದಲ್ಲಿ ಹೇಳಿದೆ.

ದಿ ಮುಧೋಳ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌’ನ ಪರವಾನಗಿ ರದ್ದತಿ ಜೂನ್ 8ರ ಬುಧವಾರದಿಂದಲೇ ಜಾರಿಗೆ ಬಂದಿದೆ.

ಬ್ಯಾಂಕ್ ದಿವಾಳಿಯಾದ ಮೇಲೆ ಪ್ರತಿ ಠೇವಣಿದಾರರು ಡಿಐಸಿಜಿಸಿಯಿಂದ 5 ಲಕ್ಷ ರೂ.ವರೆಗೆ ಠೇವಣಿ ವಿಮೆಯ ಕ್ಲೈಮ್ ಮೊತ್ತವನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ. ಬ್ಯಾಂಕ್‌ಗೆ ಸಂಬಂಧಪಟ್ಟ ಠೇವಣಿದಾರರಿಂದ ಸ್ವೀಕರಿಸಿದ ಮನವಿಯ ಆಧಾರದ ಮೇಲೆ ಡಿಐಸಿಜಿಸಿ ಈಗಾಗಲೇ ಒಟ್ಟು 16.69 ಕೋಟಿ ರೂ. ವಿಮಾ ಮೊತ್ತವನ್ನೂ ಪಾವತಿ ಮಾಡಿದೆ ಎಂದು ಆರ್‌ಬಿಐ ತಿಳಿಸಿದೆ.

ಬ್ಯಾಂಕ್ ಸಲ್ಲಿಸಿದ ಅಂಕಿ-ಅಂಶಗಳ ಪ್ರಕಾರ ಶೇಕಡಾ 99 ಕ್ಕಿಂತ ಹೆಚ್ಚು ಠೇವಣಿದಾರರು ತಮ್ಮ ಠೇವಣಿಗಳ ಪೂರ್ಣ ಮೊತ್ತವನ್ನು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ನಿಂದ ಸ್ವೀಕರಿಸಲು ಅರ್ಹರಾಗಿದ್ದಾರೆ ಎಂದು ಆರ್‌ಬಿಐ ವಿವರ ನೀಡಿದೆ.

Leave A Reply

Your email address will not be published.