ಪಡಿತರ ಚೀಟಿ ಧಾರಕರಿಗೊಂದು ಮಹತ್ವದ ಮಾಹಿತಿ | ತಪ್ಪದೇ ತಿಳಿದುಕೊಳ್ಳಿ

ಎಲ್ಲಾ ರಾಜ್ಯ ಸರ್ಕಾರಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅಡಿಯಲ್ಲಿ ಪಡಿತರ ಚೀಟಿಗಳನ್ನು ವಿತರಿಸಿವೆ. ಈ ಕಾರ್ಡ್ ಮೂಲಕ ಅನೇಕ ಪ್ರಯೋಜನಗಳನ್ನ ಪಡೆಯಬಹುದಾಗಿದ್ದು, ಇವುಗಳನ್ನು ಆಹಾರ ಭದ್ರತಾ ಕಾರ್ಡ್‌’ಗಳೆಂದು ಸಹ ಕರೆಯಲಾಗುತ್ತದೆ.

ಕೊರೊನಾ ವೈರಸ್ ಕಾರಣದಿಂದಾಗಿ ಬಡತನ ರೇಖೆಗಿಂತ ಕೆಳಗಿರುವ ಮತ್ತು ಪಡಿತರ ಚೀಟಿಯಲ್ಲಿರುವ ಪ್ರತಿಯೊಬ್ಬ ಫಲಾನುಭವಿಗೆ ಕೇಂದ್ರ ಸರ್ಕಾರವು ಐದು ಕಿಲೋ ಅಕ್ಕಿಯನ್ನ ಉಚಿತವಾಗಿ ವಿತರಿಸ್ತಿದೆ. ಹಾಗೆನೇ ಈ ವರ್ಷದ ನವೆಂಬರ್ ತಿಂಗಳವರೆಗೆ ವಿತರಣೆ ಪ್ರಕ್ರಿಯೆ ನಡೆಯುತ್ತಿದೆ. ಆದಾಗ್ಯೂ, ಕೆಲವು ಜನರು ರೇಷನ್ ಕಾರ್ಡ್ಗಳ ಮೂಲಕ ಮತ್ತು ಕೆಲವು ಟಿಐಎಸ್‌ಗಳ ಮೂಲಕ ಅಧಿಕಾರಿಗಳನ್ನ ದಾರಿತಪ್ಪಿಸಿ, ಉಚಿತವಾಗಿ ಪಡಿತರ ಪಡೆಯುತ್ತಿದ್ದಾರೆ ಅನ್ನೋದನ್ನು ಕೇಂದ್ರ ಸರ್ಕಾರ ಕಂಡುಕೊಂಡಿದೆ. ಹಾಗಾಗಿ ಅಂತಹ ಜನರು ತಮ್ಮ ಕಾರ್ಡ್’ಗಳನ್ನ ತಕ್ಷಣವೇ ಒಪ್ಪಿಸುವಂತೆಯೂ ನಿರ್ದೇಶನ ನೀಡಿದೆ.

ಈ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲು ದೇಶದ ಎಲ್ಲಾ ರಾಜ್ಯ ಸರ್ಕಾರಗಳಿಗೆ ಮಾರ್ಗಸೂಚಿಗಳನ್ನ ಸಹ ನೀಡಲಾಗಿದೆ. ಅನರ್ಹ ವ್ಯಕ್ತಿಗಳು ಕಾರ್ಡ್ ಗಳನ್ನು ಒಪ್ಪಿಸದಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅದು ಎಚ್ಚರಿಸಿದೆ. ಮಾರ್ಗಸೂಚಿ ಅನ್ವಯ 1,50,000 ರೂ.ಗಿಂತ ಕಡಿಮೆ ಆದಾಯ ಹೊಂದಿರುವವರು ಮತ್ತು ನಗರ ಪ್ರದೇಶಗಳಲ್ಲಿ 2 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವವರು ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ತಿಂಗಳಿಗೆ 10,000 ರೂ.ಗಿಂತ ಕಡಿಮೆ ಆದಾಯ ಮತ್ತು ನಗರ ಪ್ರದೇಶಗಳಲ್ಲಿ ತಿಂಗಳಿಗೆ 15,000 ರೂ.ಗಿಂತ ಕಡಿಮೆ ಆದಾಯ ಪಡೆಯುವವರು ರೇಷನ್ ತೆಗೆದುಕೊಳ್ಳಲು
ಅರ್ಹರಾಗಿರುತ್ತಾರೆ.

ಅದ್ರಂತೆ, 100 ಚದರ ಮೀಟರ್ ಮನೆ ಮತ್ತು ಫ್ಲ್ಯಾಟ್, ಕಾರು, ಟ್ರ್ಯಾಕ್ಟರ್ ಮತ್ತು ಹಳ್ಳಿಗಳಲ್ಲಿ 1.5 ಲಕ್ಷ ರೂ.ಗಿಂತ ಹೆಚ್ಚು ಆದಾಯ, ನಗರ ಪ್ರದೇಶಗಳಲ್ಲಿ 2 ಲಕ್ಷ ರೂ.ಗಿಂತ ಹೆಚ್ಚು ಆದಾಯ ಮತ್ತು ನಗರಗಳಲ್ಲಿ 3 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿರುವವರು ಸಂಬಂಧಪಟ್ಟ ತಹಶೀಲ್ದಾರರ ಕಚೇರಿಗೆ ಕಾರ್ಡ್‌ಗಳನ್ನು ಒಪ್ಪಿಸಬೇಕು. ಇನ್ನು ವೃತ್ತಿಪರ ತೆರಿಗೆ, ಆದಾಯ ತೆರಿಗೆ ಮತ್ತು ಮಾರಾಟ ತೆರಿಗೆಯನ್ನ ಪಾವತಿಸದವರಿಗೆ ಮಾತ್ರ ಪಡಿತರ ಚೀಟಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಇತ್ತೀಚಿನ ನಿಯಮಗಳು ಸ್ಪಷ್ಟಪಡಿಸುತ್ತವೆ. ವೈದ್ಯರು, ವಕೀಲರು ಮತ್ತು ಚಾರ್ಟಡ್ ಅಕೌಂಟೆಂಟ್’ಗಳು ಪಡಿತರ ಚೀಟಿಗಳನ್ನ ಪಡೆಯಲು ಅನರ್ಹರಾಗಿದ್ದಾರೆ. ಈ ಹಿಂದೆ ಪಡಿತರ ಪಡೆದವರು ಆರ್ಥಿಕವಾಗಿ ಸದೃಢರಾಗಿದ್ದರೆ ಈಗ ಪಡಿತರ ಚೀಟಿಗಳನ್ನ ನೀಡಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

Leave A Reply

Your email address will not be published.