ದೇಶದ ಲಕ್ಷಾಂತರ ಅನ್ನದಾತರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ !!

ಲಕ್ಷಾಂತರ ರೈತರ ಪಾಲಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಖಾರಿಫ್ ಹಂಗಾಮಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಬುಧವಾರ ನಡೆದ ಮೋದಿ ಸರ್ಕಾರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಇದನ್ನು ಅನುಮೋದಿಸಲಾಗಿದೆ. 2022-23ನೇ ಸಾಲಿನ ಖಾರಿಫ್ ಬೆಳೆಗಳ ಎಂಎಸ್‌ಪಿ ಇದೀಗ ಹೆಚ್ಚಾಗಲಿದೆ.

2022-23ರ ಬೆಳೆ ವರ್ಷಕ್ಕೆ ಭತ್ತದ ಎಂಎಸ್ಪಿಯನ್ನು ಪ್ರತಿ ಕ್ವಿಂಟಾಲ್ ಗೆ ₹100 ರಿಂದ ₹ 2,040 ಕ್ಕೆ ಹೆಚ್ಚಿಸಲಾಗಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಅನುಮೋದನೆ ನೀಡಲಾಗಿದೆ. ಸಚಿವ ಸಂಪುಟದ ನಿರ್ಧಾರದ ನಂತರ ಖಾರಿಫ್ ಬೆಳೆಗಳಾಗಿರುವ ಭತ್ತ, ಸೋಯಾಬೀನ್‌ ಇತ್ಯಾದಿಗಳ ಎಂಎಸ್‌ಪಿಯಲ್ಲಿ ಏರಿಕೆಯಾಗಲಿದೆ. ಇದೇ ವೇಳೆ ಮೆಕ್ಕೆಜೋಳದ ಎಂಎಸ್‌ಪಿ ಹೆಚ್ಚಿಸುವ ಪ್ರಸ್ತಾವನೆಗೂ ಸಂಪುಟ ಅನುಮೋದನೆ ನೀಡಿದೆ ಎನ್ನಲಾಗಿದೆ.

2018-19 ರ ಬಳಿಕ ಇದೇ ಮೊದಲ ಬಾರಿಗೆ MSP ಯಲ್ಲಿ ಇಷ್ಟೊಂದು ಏರಿಕೆಯಾಗಲಿದೆ. ಭತ್ತ, ಸೋಯಾಬೀನ್, ಮೆಕ್ಕೆಜೋಳ ಹೊರತುಪಡಿಸಿ ಶೇಂಗಾ, ಹುಣಸೆ, ಮೋಸಂಬಿ, ಜೋಳ, ಸಜ್ಜೆ, ರಾಗಿ ಬೆಳೆಗಳ ಬೆಂಬಲ ಬೆಲೆ ಹೆಚ್ಚಳಕ್ಕೂ ಕೂಡ ಅನುಮೋದನೆ ನೀಡಲಾಗುತ್ತಿದೆ ಎನ್ನಲಾಗಿದೆ. ಈ ಹಂಗಾಮಿನಲ್ಲಿ ಒಟ್ಟು 14 ಬೆಳೆಗಳ ಎಂಎಸ್‌ಪಿ ಹೆಚ್ಚಿಸಲಾಗುತ್ತಿದೆ ಎಂದು ಮೂಲಗಳು ವರದಿ ಮಾಡಿವೆ. ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಬೆಳೆಗಳಲ್ಲಿ ಸರ್ಕಾರ ಗರಿಷ್ಠ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದೂ ಕೂಡ ಚರ್ಚಿಸಲಾಗುತ್ತಿದೆ.

MSP ಎಂದರೇನು?

MSP- ಸರ್ಕಾರವು ರೈತರಿಂದ ಬೆಳೆಗಳನ್ನು ಖರೀದಿಸುವ ಕನಿಷ್ಠ ಬೆಲೆಯನ್ನು ಕನಿಷ್ಠ ಬೆಂಬಲ ಬೆಲೆ ಎಂದು ಕರೆಯುತ್ತಾರೆ. ರೈತನಿಂದ ಖರೀದಿಸಿದ ಬೆಳೆಗೆ ಸರಕಾರ ಕೊಡುವ ಹಣವೇ ಎಂಎಸ್‌ಪಿ ಎಂದರೂ ಕೂಡ ತಪ್ಪಾಗಲಾರದು. ಅಂದರೆ, ಈ ಬೆಲೆಗಿಂತ ಕಡಿಮೆ ಬೆಲೆಯನ್ನು ರೈತರಿಗೆ ನೀಡಲಾಗುವುದಿಲ್ಲ ಎಂದರ್ಥ.

ಯಾವುದೇ ಪರಿಸ್ಥಿತಿಯಲ್ಲಿ ರೈತರು ತಮ್ಮ ಬೆಳೆಗೆ ಸಮಂಜಸವಾದ ಕನಿಷ್ಠ ಬೆಲೆಯನ್ನು ಪಡೆಯಲು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗುತ್ತದೆ.
ರಬಿ ಮತ್ತು ಖಾರಿಫ್ ಋತುಗಳು ಎಂಬಂತೆ ವರ್ಷಕ್ಕೆ ಎರಡು ಬಾರಿ ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸಿನ ಮೇರೆಗೆ ಸರ್ಕಾರವು ಕನಿಷ್ಟ ಬೆಂಬಲ ಬೆಲೆಯನ್ನು ಘೋಷಿಸುತ್ತದೆ. ಕಬ್ಬಿನ ಬೆಂಬಲ ಬೆಲೆಯನ್ನು ಕಬ್ಬು ಆಯೋಗ ನಿರ್ಧರಿಸುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.

Leave A Reply

Your email address will not be published.