ವ್ಹಾರೆ ವ್ಹಾ ಹೆಣ್ಣೇ!!! ಗಂಡನ ಮೋಸದಾಟ ಬಯಲಿಗೆಳೆಯಲು ಹೆಂಡತಿ ಮಾಡಿದಳು ಸೂಪರ್ ಐಡಿಯಾ| ಏನು ಗೊತ್ತೇ?

ಸಮಾಜದಲ್ಲಿ ಜವಾಬ್ದಾರಿಯುತ ಕೆಲಸದಲ್ಲಿದ್ದ ವ್ಯಕ್ತಿಯೋರ್ವ ಚಪಲ ಚನ್ನಿಗರಾಯನ ಅವತಾರ ತಾಳಿದ ಘಟನೆ ಇದು. ಅಷ್ಟು ಮಾತ್ರವಲ್ಲ ಈತನ ಈ ಅವತಾರಗಳನ್ನು ಜಗಜ್ಜಾಹೀರು ಮಾಡಿದ್ದಾಳೆ.

ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯಲ್ಲಿದ್ದ ವ್ಯಕ್ತಿಯೋರ್ವ, ಪ್ರತಿ ದಿನ ಫೇಸ್ ಬುಕ್ ನಲ್ಲಿ ಚಿನ್ನ, ಮುತ್ತುಕೊಡೆ ಎಂದೆಲ್ಲಾ ಹೇಳಿಕೊಂಡು ಹುಡುಗಿಯೊಬ್ಬಳಿಗೆ ಮೆಸೇಜ್ ಕಳುಹಿಸುತ್ತಿದ್ದ. ಆ ಕಡೆಯಿಂದಲೂ ಅದೇ ರೀತಿಯ ಪ್ರತಿಕ್ರಿಯೆಗಳು ಬರುತ್ತಿದ್ದವು.

ಹೀಗೆ ಟೈಮ್ ಪಾಸ್ ಮಾಡ್ತಿದ್ದ ಆತ ಒಂದು ದಿನ ದಿನ “ಹೋಟೆಲ್ ಬಾ” ಎಂದು ಫೇಸ್ ಬುಕ್ ನಲ್ಲಿ ಪರಿಚಯವಾದ ಹುಡುಗಿಗೆ ಮೆಸೇಜ್ ಕಳಿಸಿದ್ದಾನೆ. ತನ್ನೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯಿಸಿದ. ಇಲ್ಲೇ ಇರುವುದು ಕಥೆಗೆ ಟ್ವಿಸ್ಟ್. ಆತ ಯಾರಿಗೆ ಗಂಟೆಗಟ್ಟಲೇ ಮೆಸೇಜ್ ಮಾಡುತ್ತಿದ್ದದ್ದು, ತನ್ನ ಹೆಂಡತಿಗೆನೇ ಎಂದು ತಿಳಿದುಕೊಂಡಾಗ ನೆಲವೇ ಕುಸಿದು ಹೋದ ಅನುಭವವಾಗಿತ್ತು.

ಹೌದು, ಇಂಥದ್ದೊಂದು ಘಟನೆ ವರದಿಯಾಗಿರುವುದು ಮಧ್ಯಪ್ರದೇಶದ ಇಂದೋರ್ ನಲ್ಲಿ. ಬೇರೆ ಹುಡುಗಿಯರ ಜೊತೆ ಗಂಡ ಹೇಗಿರುತ್ತಾನೆ ಎಂದು ತಿಳಿದುಕೊಳ್ಳಲು ಹೆಂಡತಿ ಮಾಡಿದ ಉಪಾಯ ಕೇಳಿ ಅಚ್ಚರಿ ಪಟ್ಟಿದ್ದಾರೆ. ತನ್ನ ಹೆಂಡತಿಯನ್ನು ಬೇರೆ ಹುಡುಗಿ ಎಂದು ತಪ್ಪಾಗಿ ಗ್ರಹಿಸಿಕೊಂಡಿದ್ದ ಪೊಲೀಸ್ ಕಾನ್ಸ್ ಟೇಬಲ್ ಆಕೆಯೊಂದಿಗೆ ಎಲ್ಲಾ ವಿಚಾರಗಳನ್ನು ಮಾತನಾಡಿದ್ದ.

ಇಂದೋರ್‌ನ ಸುಖಿಯಾ ನಿವಾಸಿ ಮನೀಶಾ ಚವಂದ್ ಅವರು ಪಂಚಮ್ ಕಿ ಫಾಲ್‌ನಲ್ಲಿ ವಾಸಿಸುವ ಸತ್ಯಂ ಬೆಹ್ ಎಂಬ ಯುವಕನನ್ನು 2019 ರಲ್ಲಿ ವಿವಾಹವಾಗಿದ್ದಳು. ಕೆಲ ದಿನಗಳ ಕಾಲ ಸತ್ಯಂ, ಮನೀಶಾಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ ಆ ನಂತರ ಚಿತ್ರಹಿಂಸೆ ಶುರುವಾಯಿತು. ದಿನ ಕಳೆದಂತೆ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲು ಆರಂಭಿಸಿದ್ದ. ಸಣ್ಣಪುಟ್ಟ ವಿಷಯಗಳಿಗೂ ಪತ್ನಿಯನ್ನು ಹಲವು ಗಂಟೆಗಳ ಕಾಲ ಬಾತ್ ರೂಂನಲ್ಲಿ ಬೀಗ ಹಾಕಿ ಕೂರಿಸುತ್ತಿದ್ದ. ಆಕೆಗೆ ಹೊಡೆದು ಬಡಿದು ಬರೀ ನೆಲದ ಮೇಲೆ ಗಂಟೆಗಟ್ಟಲೆ ಕಾಲ ಮಲಗುವಂತೆ ಹೇಳುತ್ತಿದ್ದ.

ಇದರಿಂದ ಬೇಸರಗೊಂಡಿದ್ದ ಹುಡುಗಿ ತನ್ನ ಪೋಷಕರಿಗೆ ಹೇಳಿದ್ದಳು. ಆ ಬಳಿಕ ಪತಿಯ ಕುರಿತಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. 2020ರ ನವೆಂಬರ್ 28 ರಂದು ಎಫ್‌ಐಆರ್ ಅನ್ನೂ ದಾಖಲಿಸಲಾಗಿದ್ದು, ಪತಿಯು ಮನೆಯಲ್ಲಿ ಕೂತು ಪತ್ರಿಕೆ ಓದಲೂ ಕೂಡ ಬಿಡುತ್ತಿರಲಿಲ್ಲ ಎಂದು ಹೇಳಿದ್ದಾಳೆ. ಅದಲ್ಲದೆ, ವರದಕ್ಷಿಣೆಯ ರೂಪದಲ್ಲಿ ಬೈಕ್ ಕೊಡಿಸುವಂತೆ ನಿರಂತರವಾಗಿ ಪೀಡಿಸುತ್ತಿದ್ದ. ಪ್ರಕರಣದಲ್ಲಿ ಪತಿಯನ್ನು ಬಂಧಿಸುವಂತೆಯೂ ಆದೇಶವಿತ್ತು. ಆದರೆ ಆರೋಪಿಯು ಜಾಮೀನಿನ ಮೇಲೆ ಹೊರಗಿದ್ದು, ಪ್ರಕರಣದ ವಿಚಾರಣೆ ನ್ಯಾಯಲಯದಲ್ಲಿ ನಡೆಯುತ್ತಿದೆ.

ಗಂಡನ ಮನೆಯಲ್ಲಿದ್ದ ವೇಳೆಯಲ್ಲಿಯೇ ಮನೀಶಾ ನಕಲಿ ಫೇಸ್ ಬುಕ್ ಅಕೌಂಟ್ ಸೃಷ್ಟಿಸಿ ಗಂಡನಿಗೆ ರಿಕ್ವೆಸ್ಟ್ ಕಳಿಸಿದ್ದಳು. ಫೇಸ್ ಬುಕ್ ನಲ್ಲಿ ತನ್ನನ್ನು ತಾನು ಸಿಂಗಲ್ ಎಂದು ಹಾಕಿಕೊಂಡಿದ್ದಳು. ಪ್ರತಿದಿನವವೂ ಆಕೆಯೊಂದಿಗೆ ಮೆಸೇಜ್ ಮಾಡುತ್ತಿದ್ದ. ಸ್ವಂತ ಪತ್ನಿಯನ್ನೇ ಆತ ಬೇರೊಬ್ಬ ಹುಡುಗಿ ಎಂದು ತಪ್ಪಾಗಿ ಅರ್ಥ ಮಾಡಿಕೊಂಡಿದ್ದ ಸತ್ಯಂ, ತನ್ನೊಂದಿಗೆ ಸೆಕ್ಸ್ ಮಾಡುವಂತೆ ಕಿಸ್ ನೀಡುವಂತೆ ಮೆಸೇಜ್ ಹಾಕಿದ್ದ. ಇದನ್ನೇ ಮನೀಶಾ, ಫೇಸ್ ಬುಕ್ ನೊಂದಿಗೆ ವಾಟ್ಸ್ಆಯಪ್‌ನಲ್ಲಿನ ಚಾಟ್ ಅನ್ನು ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಕೊಟ್ಟಿದ್ದಾಳೆ. ಜಿಲ್ಲಾ ನ್ಯಾಯಾಲಯವು ಇದನ್ನು ಪರಿಗಣಿಸುವುದಾಗಿ ಹೇಳಿದೆ.

ಸಂತ್ರಸ್ತೆಯ ಆರೋಪದ ಮೇರೆಗೆ ಇಂದೋರ್ ಜಿಲ್ಲಾ ನ್ಯಾಯಾಲಯವು ಆರೋಪಿಯ ವಿರುದ್ಧ ಕೌಟುಂಬಿಕ ಹಿಂಸಾಚಾರದಿಂದ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಆದೇಶ ನೀಡಿದೆ. ಅರ್ಜಿಯ ವಿಚಾರಣೆ ವೇಳೆ ಆಕೆಗೆ ಆಹಾರ ವೆಚ್ಚವಾಗಿ 2 ಲಕ್ಷ ರೂ., ಹಾಗೂ ಜೀವನಾಂಶಕ್ಕಾಗಿ ಮಹಿಳೆಗೆ ಪ್ರತಿ ತಿಂಗಳು 7 ಸಾವಿರ ರೂ.ಗಳನ್ನು ನೀಡುವಂತೆ ಪತಿಗೆ ನ್ಯಾಯಾಲಯ ಆದೇಶಿಸಿದೆ.

Leave A Reply

Your email address will not be published.