ಫೋನನ್ನು ನೀವು ಹೇಗೆ ಹಿಡಿದಿರುವಿರಿ ಎಂಬುದನ್ನು ಆಧರಿಸಿ ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ!

ಓದುಗರಾದ ನಿಮಗೆಲ್ಲರಿಗೂ ನಿಮ್ಮ ವ್ಯಕ್ತಿತ್ವ ಯಾವ ರೀತಿ ಇದೆ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಆದರೆ ನೀವೂ ಅಂದುಕೊಂಡ ರೀತಿ ನಾವು ಭವಿಷ್ಯ ನೋಡಿ ನೀವು ಹೇಗೆ ಎಂಬುದನ್ನು ತಿಳಿಸುವುದಿಲ್ಲ. ಬದಲಾಗಿ ಆಪ್ಟಿಕಲ್ ಭ್ರಮೆಯ ಮೂಲಕ ತಿಳಿಸುತ್ತೇವೆ. ಹೌದು. ಫೋನ್ ಅನ್ನು ನೀವು ಹೇಗೆ ಹಿಡಿದಿರುವಿರಿ ಎಂಬುದನ್ನು ಆಧರಿಸಿ ನಿಮ್ಮ ವ್ಯಕ್ತಿತ್ವ ಎಂತಹದ್ದು ಎಂದು ತಿಳಿಸುತ್ತದೆ.

ಆಪ್ಟಿಕಲ್ ಭ್ರಮೆಯು ವ್ಯಕ್ತಿತ್ವ, ಸಂಬಂಧ ಇತ್ಯಾದಿಗಳ ಬಗ್ಗೆ ಹೆಚ್ಚಿನದನ್ನು ಬಹಿರಂಗಪಡಿಸುತ್ತದೆ ಎಂಬುದು ಬಹುತೇಕರಿಗೆ ತಿಳಿದಿರುವುದಿಲ್ಲ. ವಿಜ್ಞಾನಿಗಳ ಪ್ರಕಾರ, ನಮ್ಮ ಮೆದುಳು ಮಾದರಿಗಳನ್ನು ಗುರುತಿಸುವಲ್ಲಿ ಮತ್ತು ಪರಿಚಿತ ವಸ್ತುಗಳನ್ನು ನೋಡುವುದರಲ್ಲಿ ತುಂಬಾ ಉತ್ತಮವಾಗಿರುವುದರಿಂದ ಆಪ್ಟಿಕಲ್ ಭ್ರಮೆಗಳು ಸಾಧ್ಯ. ಟೋಡಾದ ಆಪ್ಟಿಕಲ್ ಭ್ರಮೆಯು ವ್ಯಕ್ತಿತ್ವ ಪರೀಕ್ಷೆಯನ್ನು ಆಧರಿಸಿದೆ, ಇದರಲ್ಲಿ ನೀವು ನಿಮ್ಮ ಫೋನ್ ಅನ್ನು ಹಿಡಿಯುವ ನಿಮ್ಮ ರೀತಿಯನ್ನು ಆಧರಿಸಿ ನಿಮ್ಮ ವ್ಯಕ್ತಿತ್ವದ ಬಗ್ಗೆ ಮತ್ತು ನಿಮ್ಮ ಮೆದುಳು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳಬಹುದು.

  1. ಒಂದೇ ಕೈಯಲ್ಲಿ ಫೋನ್ ಹಿಡಿಯುವುದು
    ನಿಮ್ಮ ಫೋನ್ ಅನ್ನು ನೀವು ಒಂದೇ ಕೈಯಿಂದ ಹಿಡಿದುಕೊಳ್ಳುವುದು ನಿಮಗೆ ಆರಾಮದಾಯಕವಾಗಿದೆ ಎಂದರೇ ನಿಮ್ಮ ಫೋನ್ ಪರದೆಯ ಮೇಲೆ ಆಡಿಸಲು ನಿಮ್ಮ ಹೆಬ್ಬೆರಳನ್ನು ಬಳಸುತ್ತೀರಿ. ಇದರರ್ಥ ನೀವು ನಿರಾತಂಕ, ಸಂತೋಷ ಮತ್ತು ಆತ್ಮವಿಶ್ವಾಸದ ವ್ಯಕ್ತಿಯಾಗಿದ್ದೀರಿ. ನೀವು ಜೀವನದಲ್ಲಿ ಯಾವುದರ ಬಗ್ಗೆಯೂ ದೂರು ನೀಡುವುದಿಲ್ಲ. ಜೀವನವು ನಿಮಗೆ ಏನು ನೀಡುತ್ತದೆಯೋ ಅದನ್ನು ಹಾಗೆಯೇ ಸ್ವೀಕರಿಸುವ ಸಾಮರ್ಥ್ಯವನ್ನು ನೀವು ಹೊಂದಿದ್ದೀರಿ. ನಿಮ್ಮ ಮೇಲೆ ನಿಮಗೆ ವಿಶ್ವಾಸವಿದೆ ಮತ್ತು ನಿಮ್ಮ ಈ ಗುಣವು ನಿಮ್ಮ ಜೀವನದ ಹಾದಿಯಲ್ಲಿ ಬರುವ ಯಾವುದೇ ಹೊಸ ಅವಕಾಶವನ್ನು ಬಿಡದೆ ಬಳಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಈ ಮನಸ್ಥಿತಿಯು ವ್ಯವಹಾರದಲ್ಲಿ ಯಶಸ್ಸಿಗೆ ಕಾರಣವಾಗಬಹುದು, ಆದರೆ ಅದು ಸಂಬಂಧಗಳಲ್ಲಿ ಯಶಸ್ಸಿಗೆ ಕಾರಣವಾಗುವುದಿಲ್ಲ. ಪ್ರಣಯ ಮತ್ತು ಪ್ರೀತಿಯ ವಿಷಯಕ್ಕೆ ಬಂದಾಗ, ನೀವು ವಿಷಯಗಳನ್ನು ನಿಧಾನವಾಗಿ ತೆಗೆದುಕೊಳ್ಳುತ್ತೀರಿ ಮತ್ತು ಜಾಗರೂಕರಾಗಿರಲು ಬಯಸುತ್ತೀರಿ. ನಿಮ್ಮ ಸಂಗಾತಿಯು ನಿಮ್ಮನ್ನು ಬದ್ಧತೆ ಇಲ್ಲದವರೆಂದು ಭಾವಿಸಬಹುದು.
  2. ಎರಡು ಕೈಗಳಿಂದ ಫೋನ್ ಹಿಡಿಯುವುದು:
    ಫೋನ್ ಅನ್ನು ನೀವು ಎರಡು ಕೈಗಳಿಂದ ಹಿಡಿದುಕೊಂಡರೇ, ನೀವು ಬುದ್ಧಿವಂತರು, ಅಂತರ್ಬೋಧೆ ಮತ್ತು ಪ್ರಾಯೋಗಿಕರಾಗಿದ್ದೀರಿ ಎಂದರ್ಥ. ನೀವು ಸಹಾನುಭೂತಿಯುಳ್ಳವರು, ಕಾಳಜಿಯುಳ್ಳವರು ಮತ್ತು ಇತರರ ಚಾರಿತ್ರ್ಯವನ್ನು ಡೀಕೋಡ್ ಮಾಡುವಲ್ಲಿ ಬುದ್ಧಿವಂತರು ಎಂದರ್ಥ. ಬಯಸಿದರೆ ನಿಮ್ಮ ಸುತ್ತಮುತ್ತಲು ಆಗುತ್ತಿರುವ ವಂಚನೆಯನ್ನು ತಪ್ಪಿಸಬಹುದು. ಆದರೆ ಆತುರವು ವ್ಯರ್ಥಕ್ಕೆ ಕಾರಣವಾಗುತ್ತದೆ ಎಂಬುದನ್ನು ನೆನಪಿಡಿ.
  3. ಎರಡು ಕೈಗಳಿಂದ ಫೋನ್ ಹಿಡಿದು ಎರಡು ಹೆಬ್ಬೆರಳುಗಳನ್ನು ಫೋನ್ ಮೇಲೆ ಆಡಿಸುವುದು:
    ನೀವು ನಿಮ್ಮ ಫೋನ್ ಅನ್ನು ಈ ಭಂಗಿಯಲ್ಲಿ ಹಿಡಿದುಕೊಂಡರೆ ಆಗ ನೀವು ಪರಿಸ್ಥಿತಿಗಳನ್ನು ವಿಶ್ಲೇಷಿಸುವಲ್ಲಿ ವೇಗವಾಗಿರುತ್ತೀರಿ ಮತ್ತು ಯಾವುದೇ ಸವಾಲಿಗೆ ಸೂಕ್ತವಾದ ಪರಿಹಾರಗಳನ್ನು ಹುಡುಕುತ್ತೀರಿ ಎಂದರ್ಥ. ವೈವಿಧ್ಯಮಯ ಕೌಶಲ್ಯಗಳನ್ನು ನೀವು ಹೊಂದಿರುವುದರಿಂದ ಅದನ್ನು ಬಳಸಿಕೊಳ್ಳುವ ಮೂಲಕ ಹಲವಾರು ಸನ್ನಿವೇಶಗಳ ಬೇಡಿಕೆಗಳನ್ನು ಹೇಗೆ ಅಳವಡಿಸಿಕೊಳ್ಳುವುದು ಮತ್ತು ಪೂರೈಸುವುದು ಎಂದು ನಿಮಗೆ ತಿಳಿದಿದೆ. ಪಾರ್ಟಿಗಳು ಮತ್ತು ಉತ್ಸವಗಳನ್ನು ನೀವು ತುಂಬಾನೇ ಆನಂದಿಸುತ್ತೀರಿ. ನೀವು ಕೆಲವು ಶೈಕ್ಷಣಿಕ ಚರ್ಚೆಗಳನ್ನು ಮಾಡುವಾಗ ತುಂಬಾನೇ ಗಂಭೀರವಾಗಿರುತ್ತೀರಿ ಮತ್ತು ಮಕ್ಕಳ ನಡುವೆ ಇದ್ದಾಗ ನೀವು ಆನಂದಿಸುತ್ತೀರಿ ಮತ್ತು ನಿರಾತಂಕವಾಗಿರುತ್ತೀರಿ.
  4. ಒಂದು ಕೈಯಲ್ಲಿ ಫೋನ್ ಹಿಡಿದು ಇನ್ನೊಂದು ಕೈಯ ಬೆರಳನ್ನು ಫೋನ್ ಮೇಲೆ ಆಡಿಸುವುದು:
    ನೀವು ನಿಮ್ಮ ಫೋನ್ ಅನ್ನ ಈ ಭಂಗಿಯಲ್ಲಿ ಹಿಡಿದುಕೊಂಡರೆ, ಅದರರ್ಥ ಜನರು ನಿಮ್ಮ ಸ್ಪಷ್ಟವಾದ ಕಲ್ಪನೆ ಮತ್ತು ಮೂಲ ಆಲೋಚನೆಗಳಿಂದ ಆಕರ್ಷಿತರಾಗುತ್ತಾರೆ. ನೀವು ಚಿತ್ರಕಲಾವಿದ ಅಥವಾ ಲೇಖಕರಾಗಲು ಆಯ್ಕೆ ಮಾಡಿದರೆ, ನೀವು ಸಾಕಷ್ಟು ಯಶಸ್ಸನ್ನು ಸಾಧಿಸುತ್ತೀರಿ.
Leave A Reply

Your email address will not be published.