ಅಭಿಮಾನಿಗಳು ಹರ್ಷೋದ್ಘಾರದ ನಡುವೆ ಅಪ್ಪು ಕಂಚಿನಬ ಪ್ರತಿಮೆ ಅನಾವರ್ಣ.

ವಿಜಯನಗರ ಜಿಲ್ಕೆಯ ಹೊಸಪೇಟೆ ನಗರದಲ್ಲಿ ಸಂಜೆ ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ಅನಾವರಣಗೊಂಡಿತು.
ನಟ ಪುನೀತ್ ಅವರ ಪುತ್ಥಳಿ ಹೊಸಪೇಟೆಯ ಹೃದಯ ಭಾಗದಲ್ಲಿರೋ ಪುನೀತ್ ವೃತ್ತದಲ್ಲಿ7 ವರೆ ಅಡಿ ಎತ್ತರದ ನಟ ಪುನೀತ್ ಅವರ ಪುತ್ಥಳಿಯನ್ನು ನಟ ರಾಘವೇಂದ್ರ ರಾಜಕುಮಾರ ಅವರಿಂದ ಅನಾವರಣ ಮಾಡಿ ಮಾತನಾಡಿ ಅಪ್ಪು ಅಭಿಮಾನಿಗಳ ಸಂಭ್ರಮ ಎಷ್ಟ ಎಂಬುವುದನ್ನು ಅಪ್ಪು ಬಾಯಿಂದ ಅನೇಕ ಬಾರಿ ಕೇಳಿದ್ದೆ ಇಂದು ಕಣ್ಣಾರೆ ಕಂಡೆ ಎಂದು ಬಾವುಕರಾದರು. ಅಪ್ಪು ಏನು ಮಾಡಬೇಕು ಎಲ್ಲಾ ಮಾಡಿದ್ದಾನೆ ಮುಂದೆ ನಾವೇನು ಮಾಡುವುದು ಅಭಿಮಾನಿಗಳಾ ನೀವುಗಳೇ ಹೇಳಿ ಎಂದರು.

ಸಾವಿರಾರು ಅಭಿಮಾನಿಗಳ ಮಧ್ಯೆ ರಾಜಕುಮಾರ ಚಿತ್ರದ ಹಾಡಿನೊಂದಿಗೆ, ಪಟಾಕಿ, ಹೂವಿನ ಮಳೆಯ ನಡುವೆ ಪುತ್ಥಳಿ ಅನಾವರಣಗೊಂಡಿತು. ಅನಾವರಣ ವೇಳೆ ಪುಟ್ಟ ಪುಟ್ಟ ಮಕ್ಕಳಿಂದ ಬೊಂಬೆ ಹೇಳುತೈತು ಹಾಡಿನ ನಮನ ಸಲ್ಲಿಸಲಾಯಿತು.

ಸಚಿನ ಆನಂದಸಿಂಗ್, ನಟ ಅಜೇಯ್ ರಾವ್, ನಿರ್ದೇಶಕ ಸಂತೋಷ ಆನಂದರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಭಿಮಾನಿಗಳ ಮಹಾಪೂರವೇ ಹರಿದ ಬಂದ ಹಿನ್ನೆಲೆಯಲ್ಲಿ ಪಟ್ಟ ವೃತ್ತದಲ್ಲಿ ಆಯೋಜಕರ ಎಲ್ಲಾ ಅಡೆ ತಡೆಗಳನ್ನು ಭೇದಿಸಿ ಮುಂದೆಬರಲು ಪ್ರಯತ್ನಿಸಿದರು ಈ ಹಂತದಲ್ಲಿ ನುಕೂನುಗ್ಗಲೂ ತುಳಿದಾಟ, ಬ್ಯಾರಿಕೇಡ್ ಭೇದಿಸಿ ಕುಳಿತವರ ಮೇಲೆ ಬಿದ್ದು ಕ್ಷಣಕಾಲ ಆತಂಕಕ್ಕೆ ಕಾರಣವಾಯಿತು.

ನಗರಸಭೆಯ ಅಧ್ಯಕ್ಷೆ ಸುಂಕಮ್ಮ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ, ಸಚಿವ ಆನಂದಸಿಂಗ್ ಆದಿಯಾಗಿ ಅತಿಥಿಗಳು ಕಲಾವಿದರು ಸ್ಥಳೀಯ ಆಡಳಿತ, ಪೊಲೀಸರು ಆತಂಕಕ್ಕೆ ಕಾರಣವಾಯಿತು. ನಾವು ಬೇಡ ಎನ್ನುವುದು ಸೇರಿದಂತೆ ನಮ್ಮ ಮಾತನ್ನು ಯಾರುಕೇಳುವ ಸ್ಥಿತಿಯಲ್ಲಿ ಯಾರು ಇಲ್ಲಾ, ಎಂದು ತಮ್ಮ ಅಸಾಹಾಯಕತೆ ತೋಡಿಕೊಂಡರು.

Leave A Reply

Your email address will not be published.