KEA( ಕರ್ನಾಟಕ ಪರೀಕ್ಷಾ ಪ್ರಾಧಿಕಾರ) : ವಿವಿಧ ಹುದ್ದೆಗೆ ಅರ್ಜಿ ಆಹ್ವಾನ | ರೂ.1,00,000 ಮಾಸಿಕ ವೇತನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಇಲ್ಲಿ ಅಗತ್ಯ ಇರುವ ಪ್ರೋಗ್ರಾಮರ್ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಭರ್ತಿ ಮಾಡಲಾಗುತ್ತದೆ ಎಂದು ಕೆಇಎ ತಿಳಿಸಿದೆ. ಸದರಿ ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ, ಸ್ಕಿಲ್ ಸೆಟ್ ವಿವರಗಳನ್ನು ಪ್ರಾಧಿಕಾರದ ವೆಬ್‌ಸೈಟ್ ಅಥವಾ ಈ ಕೆಳಗಿನಂತೆಯೂ ತಿಳಿಯಬಹುದು. ಹುದ್ದೆಗಳ ವಿವರ, ಅರ್ಹತೆ, ಅರ್ಜಿ ವಿಧಾನ ಈ ಕೆಳಗಿನಂತೆ ತಿಳಿಸಲಾಗಿದೆ.

ಉದ್ಯೋಗ ಪ್ರಾಧಿಕಾರ : ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಹುದ್ದೆ ಹೆಸರು : ಪ್ರೋಗ್ರಾಮರ್

ಹುದ್ದೆಗಳ ಸಂಖ್ಯೆ: 05

ಉದ್ಯೋಗ ಸ್ಥಳ : ಬೆಂಗಳೂರು

ಮಾಸಿಕ ವೇತನ : ಮಾಸಿಕ ರೂ.1,00,000 ವರೆಗೆ

ವಿದ್ಯಾರ್ಹತೆ : ಎಂಸಿಎ / ಎಂ.ಟೆಕ್ (ಸಿಎಸ್/ಐಟಿ) / ಬಿಇ / ಬಿ.ಟೆಕ್ (ಸಿಎಸ್/ಐಟಿ) / ಎಂಎಸ್ಸಿ (ಸಿಎಸ್/ ಐಟಿ)

ಅರ್ಹತೆಗಳು :  ಎರಡು ವರ್ಷ DOT NET-C# ಕಾರ್ಯಾನುಭವ ಹೊಂದಿರಬೇಕು. MS SQL Server DB, Web Services, WCF, SSRS, SSIS ಕಾರ್ಯಾನುಭವಹೊಂದಿರಬೇಕು. ಪೇಮೆಂಟ್ ಗೇಟ್‌ವೇ ಇಂಟಿಗ್ರೇಷನ್, ಎಸ್ಎಂಎಸ್ ಮತ್ತು ಇ-ಮೇಲ್ ಗೇಟ್‌ವೇ ಇಂಟಿಗ್ರೇಷನ್, ಮೊಬೈಲ್ ಅಪ್ಲಿಕೇಶನ್ ಕಾಂಪ್ಲಿಯನ್ಸ್ ಬಳಕೆ ತಿಳಿದಿರಬೇಕು.

ಹುದ್ದೆ ಅವಧಿ: ಕೆಇಎ ಪ್ರಸ್ತುತ ಪ್ರೋಗ್ರಾಮರ್ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲಿದೆ. ಈ ಹುದ್ದೆಗಳ ಅವಧಿ ಪ್ರಾರಂಭದಲ್ಲಿ 1 ವರ್ಷ ಇರುತ್ತದೆ. ನಂತರ ಕಾರ್ಯಕ್ಷಮತೆ ಆಧಾರದಲ್ಲಿ ಹುದ್ದೆಯ ಅವಧಿಯನ್ನು ಎರಡು ವರ್ಷಕ್ಕೆ ವಿಸ್ತರಿಸುವ ಅವಕಾಶ ಇರುತ್ತದೆ.

ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ವಿವರಗಳನ್ನು ಪ್ರಾಧಿಕಾರಕ್ಕೆ ಇ-ಮೇಲ್ keaopportunities@gmail.com ಕಳುಹಿಸಬಹುದು.

ಸಂದರ್ಶನ ದಿನಾಂಕ : ಮುಕ್ತ ಸಂದರ್ಶನ ಮತ್ತು ಪ್ರಾಯೋಗಿಕ ಪರೀಕ್ಷೆಯನ್ನು 10-06-2022 ರಂದು ನಡೆಸಲಾಗುತ್ತದೆ.

ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಇ-ಮೇಲ್ ಮೂಲಕ ಮೊದಲು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಸಂದರ್ಶನ ದಿನದಂದು ಅಗತ್ಯ ದಾಖಲೆಗಳ ಒಂದು ಸೆಟ್ ಜೆರಾಕ್ಸ್ ಕಾಪಿಗಳನ್ನು ತೆಗೆದುಕೊಂಡು ಹಾಜರಾಗಬೇಕಿರುತ್ತದೆ.

ಅರ್ಜಿ ಸಲ್ಲಿಕೆಗೆ / ಸಂದರ್ಶನಕ್ಕೆ ಹಾಜರಾಗಲು ಬೇಕಾದ
ದಾಖಲೆಗಳು, ಆಧಾರ್ ಕಾರ್ಡ್ ಜೆರಾಕ್ಸ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಜೆರಾಕ್ಸ್
ಎಂಸಿಎ / ಎಂ.ಟೆಕ್ (ಸಿಎಸ್/ಐಟಿ) / ಬಿಇ / ಬಿ.ಟೆಕ್ (ಸಿಎಸ್/ಐಟಿ) / ಎಂಎಸ್ಸಿ (ಸಿಎಸ್/ಐಟಿ) ಯಾವುದೇ ವಿದ್ಯಾರ್ಹತೆ ದಾಖಲೆ.ಮೇಲೆ ತಿಳಿಸಲಾದ ಸ್ಕಿಲ್ ಗಳ ಕುರಿತ ದಾಖಲೆ.

Leave A Reply

Your email address will not be published.